ಚಿತ್ರದುರ್ಗ: ಅರಣ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಾಚರ್ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಹೊಸದುರ್ಗ ತಾಲೂಕಿನ ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಎರಡು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿರುವ ವಾಚರ್ಗಾಗಿ ಕೂಂಬಿಂಗ್ ನಡೆಸಲಾಗುತ್ತಿದೆ. ಇನ್ನು ಹೊಸದುರ್ಗ ತಾಲೂಕು ಹಾರಗೊಂಡನಹಳ್ಳಿ ಸುತ್ತಮುತ್ತ ಕಾಣಿಸಿಕೊಳ್ತಿದ್ದ ಚಿರತೆಯನ್ನು ಸೆರೆ ಹಿಡಿಯಲು ಅದೇ ತಾಲೂಕಿನ ಹಾರಗೊಂಡನಹಳ್ಳಿ ಗುಡ್ಡದ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಬೋನ್ ಇರಿಸಿದ್ದರು. ಈ ಸಂಬಂಧ ಅರಣ್ಯ ವೀಕ್ಷಣೆಗೆ ತೆರಳಿದ್ದ ವಾಚರ್ ಬಸವರಾಜಪ್ಪ ಕಾಣೆಯಾಗಿದ್ದಾರೆ.
ಮೈಲಾರಪುರ ಅರಣ್ಯ ಪ್ರದೇಶದಲ್ಲಿ ಚಿರತೆ ತನ್ನನ್ನು ಬೆನ್ನಟ್ಟುತ್ತಿರುವ ಬಗ್ಗೆ ಬಸವರಾಜಪ್ಪ ಫಾರೆಸ್ಟ್ ಗಾರ್ಡ್ ಹರೀಶ್ಗೆ ಕೊನೆಯ ಬಾರಿ ಕರೆ ಮಾಡಿ ತಿಳಿಸಿದ್ದರು. ಕರೆಯನ್ನಾಧರಿಸಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಬಸವರಾಜಪ್ಪನ ಇರುವಿಕೆ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಸದ್ಯ ಬಸವರಾಜಪ್ಪನಿಗಾಗಿ ಶೋಧ ಕಾರ್ಯ ನಡೆದಿದೆ.