ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯ ನೀರನ್ನು ವಾಣಿ ವಿಲಾಸ ಸಾಗರಕ್ಕೆ ತರುವಂತೆ ಆಗ್ರಹಿಸಿ, ಮತ್ತು ವಿವಿ ಸಾಗರದ ಡೆಡ್ ಸ್ಟೋರೆಜ್ ನೀರು ಉಳಿಸಿ ಎಂದು ರೈತರಿಂದ ಪ್ರತಿಭಟನೆ ನಡೆಸಲಾಯಿತು.
ಹಿರಿಯೂರು ನಗರದ ಗಾಂಧಿ ವೃತ್ತದ ಬಳಿ ಸಾವಿರಾರು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವಿವಿ ಸಾಗರದ ಡೆಡ್ ಸ್ಟೋರೆಜ್ ನೀರು ಉಳಿಸಿ ಎಂದು ಪ್ರತಿಭಟಿಸಿದರು.
ಇನ್ನು ಪ್ರತಿಭಟನೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹಾಲಿ, ಮಾಜಿ ಶಾಸಕರುಗಳಾದ ಪೂರ್ಣಿಮಾ ಶ್ರೀನಿವಾಸ್, ಜಿ.ಎಚ್ ತಿಪ್ಪಾರೆಡ್ಡಿ, ಟಿ. ರಘುಮೂರ್ತಿ, ಮಾಜಿ ಶಾಸಕ ಡಿ.ಸುಧಾಕರ್, ಮಾಜಿ ಸಚಿವ ಜಯಚಂದ್ರ ಭಾಗಿಯಾಗಿದ್ದರು.