ETV Bharat / state

ವಿವಿ ಸಾಗರಕ್ಕೆ ನೀರು ಬಿಡುಗಡೆ ಸ್ಥಗಿತ: ಜನಪ್ರತಿನಿಧಿಗಳ ವಿರುದ್ಧ ರೈತರ ಆಕ್ರೋಶ - ಚಿತ್ರದುರ್ಗ ಲೇಟೆಸ್ಟ್​ ನ್ಯೂಸ್

ಮಾರ್ಚ್ ತಿಂಗಳ ಅಂತ್ಯದವರೆಗೂ 10 ಟಿಎಂಸಿ ನೀರನ್ನು ಹರಿಸಿ, ಚಿತ್ರದುರ್ಗ ಭಾಗದ ಅಂತರ್ಜಲ ಮಟ್ಟ ಹೆಚ್ಚಿಸಲಾಗುವುದು ಎಂದು ರಾಜ್ಯಸರ್ಕಾರ ಸೂಚಿಸಿತ್ತು. ಆದ್ರೀಗ ಏಕಾಏಕಿ ನೀರು ಹರಿಸುವುದನ್ನು ನಿಲ್ಲಿಸಿರುವುದು ರೈತರು ಆಕ್ರೋಶ ಕಾರಣವಾಗಿದೆ.

farmers-outrage-against-representatives-for-water-release-shut-down-to-vv-sagara
ವಿವಿ ಸಾಗರಕ್ಕೆ ನೀರು ಬಿಡುಗಡೆ ಸ್ಥಗಿತ: ಜನಪ್ರತಿನಿಧಿಗಳ ವಿರುದ್ಧ ರೈತರ ಆಕ್ರೋಶ
author img

By

Published : Jan 19, 2021, 10:38 AM IST

Updated : Jan 19, 2021, 11:32 AM IST

ಚಿತ್ರದುರ್ಗ: ಕೋಟೆನಾಡಿನ ಏಕೈಕ ಜಲಾಶಯ ವಾಣಿ ವಿಲಾಸ ಸಾಗರಕ್ಕೆ ಹರಿಯುತ್ತಿದ್ದ ನೀರನ್ನು ಅಧಿಕಾರಿಗಳು ಏಕಾಏಕಿ ನಿಲ್ಲಿಸಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ನೀರು ಹರಿಸುವ ವಿಚಾರವಾಗಿ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿವಿ ಸಾಗರಕ್ಕೆ ನೀರು ಬಿಡುಗಡೆ ಸ್ಥಗಿತ: ಜನಪ್ರತಿನಿಧಿಗಳ ವಿರುದ್ಧ ರೈತರ ಆಕ್ರೋಶ

ಭದ್ರಾ ಮೇಲ್ದಂಡೆ ಯೋಜನೆಯಿಂದ ಜಿಲ್ಲೆಯ ಹಿರಿಯೂರು ತಾಲೂಕಿನ ವಿವಿ ಸಾಗರಕ್ಕೆ ನೀರು ಹರಿಸಲಾಗುತ್ತಿತ್ತು. 17 ದಿನಗಳ ಹಿಂದಷ್ಟೇ ವಾಣಿ ವಿಲಾಸ ಸಾಗರಕ್ಕೆ ಹರಿಯುತ್ತಿದ್ದ ನೀರನ್ನ ಅಧಿಕಾರಿಗಳು ಏಕಾಏಕಿ ನಿಲ್ಲಿಸಿರುವುದು ಇದೀಗ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಮಾರ್ಚ್ ತಿಂಗಳ ಅಂತ್ಯದವರೆಗೂ 10 ಟಿಎಂಸಿ ನೀರನ್ನು ಹರಿಸಿ, ಚಿತ್ರದುರ್ಗ ಭಾಗದ ಅಂತರ್ಜಲ ಮಟ್ಟ ಹೆಚ್ಚಿಸಲಾಗುವುದು ಎಂದು ರಾಜ್ಯಸರ್ಕಾರ ಸೂಚಿಸಿತ್ತು. ಆದ್ರೀಗ ಏಕಾಏಕಿ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ತಮ್ಮ ಪಾಲಿನ ನೀರು ಬಿಡುವಂತೆ ಯಾವೊಬ್ಬ ಜನಪ್ರತಿನಿಧಿಗಳು ರೈತರ ಪರ‌‌ ಧ್ವನಿ ಎತ್ತುತ್ತಿಲ್ಲವೆಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಓದಿ: ಅತ್ತೆ ಮನೆಗೆ ಹೋಗಿ ಬರುತ್ತಿದ್ದ ವೇಳೆ ಎಸ್​ಐ ಮೇಲೆ ಯುವಕರಿಂದ ದಾಳಿ! ವಿಡಿಯೋ

ವಿವಿ ಸಾಗರಕ್ಕೆ ನೀರು ಹರಿಸುವ ವಿಚಾರಲ್ಲಿ ಚಿತ್ರದುರ್ಗ ಜಿಲ್ಲೆಗೆ ಅನ್ಯಾಯವಾಗುತ್ತಿದ್ದರೂ ಸರ್ಕಾರದ ವಿರುದ್ಧ ಮಾತನಾಡಲು ಜನಪ್ರತಿನಿಧಿಗಳು ಹಿಂದೇಟು ಹಾಕುತ್ತಿದ್ದಾರೆ. ಜನಪ್ರತಿನಿಧಿಗಳು ಸ್ವಪಕ್ಷ ಪ್ರೇಮ ಮರೆತು ವಿವಿ ಸಾಗರಕ್ಕೆ ನೀರು ಹರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

Last Updated : Jan 19, 2021, 11:32 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.