ETV Bharat / state

ಸಿದ್ದರಾಮಯ್ಯನವರೇ ರಾಮ, ಸಿದ್ದರಾಮನಹುಂಡಿಯಲ್ಲಿ ಪೂಜೆ ಮಾಡ್ತಾರೆ; ಹೆಚ್​ ಆಂಜನೇಯ

author img

By ETV Bharat Karnataka Team

Published : Jan 1, 2024, 5:47 PM IST

Updated : Jan 1, 2024, 6:04 PM IST

ನಾವೆಲ್ಲ ರಾಮಭಕ್ತರು, ನಮ್ಮ ರಾಮ ಎದೆಯಲ್ಲೇ ಇದ್ದಾನೆ ಎಂದು ಮಾಜಿ ಸಚಿವ ಹೆಚ್​ ಆಂಜನೇಯ ಹೇಳಿದರು.

ಮಾಜಿ ಸಚಿವ ಹೆಚ್​ ಆಂಜನೇಯ
ಮಾಜಿ ಸಚಿವ ಹೆಚ್​ ಆಂಜನೇಯ
ಮಾಜಿ ಸಚಿವ ಹೆಚ್​ ಆಂಜನೇಯ

ಚಿತ್ರದುರ್ಗ: ರಾಮಮಂದಿರ ಉದ್ಘಾಟನೆಗೆ ಕರೆಯದಿರುವುದೇ ಒಳ್ಳೆಯದಾಯಿತು. ಸಿದ್ದರಾಮಯ್ಯನವರ ಹೆಸರಲ್ಲಿಯೇ ರಾಮ ಇದೆ. ಅಲ್ಲಿಗೇಕೆ ಹೋಗಿ ಪೂಜಿಸಬೇಕು? ಸಿದ್ದರಾಮನಹುಂಡಿಯಲ್ಲಿಯೇ ರಾಮನ ದೇವಸ್ಥಾನವಿದ್ದು, ಅವರು ಅಲ್ಲಿಯೇ ಪೂಜಿಸುತ್ತಾರೆ ಎಂದು ಮಾಜಿ ಸಚಿವ ಹೆಚ್ ಆಂಜನೇಯ ಹೇಳಿದ್ದಾರೆ.

ರಾಮಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಹ್ವಾನ ನೀಡಲಾಗಿಲ್ಲ ಎಂಬ ವಿಚಾರ ಕುರಿತು ಸೋಮವಾರ ಚಿತ್ರದುರ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿರುವುದು ಬಿಜೆಪಿಯವರ ರಾಮ. ಅಲ್ಲಿಗೆ ಬಿಜೆಪಿಯವರನ್ನು ಮತ್ತು ಅವರಿವರನ್ನು ಮಾತ್ರ ಕರೆಸಿಕೊಂಡು ಭಜನೆ ಮಾಡಲಿ. ನಮ್ಮ ರಾಮ ಎಲ್ಲ ಕಡೆಗೂ ಇದ್ದಾನೆ. ನಮ್ಮ ಎದೆಯಲ್ಲಿಯೂ ಇದ್ದಾನೆ. ನಾನು ಆಂಜನೇಯ. ನಾವೆಲ್ಲ ಶ್ರೀರಾಮನ ಭಕ್ತರು ಅಂತ ಹೇಳಿದ್ರು.

ನಮ್ಮ ಸಮುದಾಯದವರು ಆಂಜನೇಯ, ಹನುಮಂತ, ರಾಮ ಅಂತ ಹೆಸರನ್ನು ಇಟ್ಟುಕೊಳ್ಳುತ್ತಾರೆ. ಬಿಜೆಪಿ ಅವರದ್ದು ಧರ್ಮಗಳನ್ನು ಒಡೆದಾಳುವ ನೀತಿ. ಒಂದು ಧರ್ಮದ ವಿರುದ್ಧ ಟೀಕಿಸಿ ಮತ ಬ್ಯಾಂಕ್​​ ಪಡೆಯುವ ಹುನ್ನಾರ. ಅವರ (ಬಿಜೆಪಿ) ಆಡಳಿತದಲ್ಲಿ ಯಾರಿಗೆ ಅನುಕೂಲವಾಗಿದೆ? ಹಿಂದೂ ಯುವಕರಿಗೆ ಅನುಕೂಲ ಆಗಿದೆಯೇ? ಎಂದು ಆಂಜನೇಯ ಪ್ರಶ್ನಿಸಿದರು. ನಾವೆಲ್ಲ ಹಿಂದೂಗಳೇ. ಹಿಂದೂ ಧರ್ಮವನ್ನು ಬಿಜೆಪಿ ಕೊಂಡುಕೊಂಡಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಅವರು ಧರ್ಮದಲ್ಲಿನ ಮೇಲು ಕೀಳು, ಶೋಷಣೆಗೆ ಪರಿಹಾರ ನೀಡಿದ್ದಾರೆಯೇ? ಎಂದು ಪ್ರಶ್ನಿಸಿದ ಹೆಚ್. ಆಂಜನೇಯ, ಮಂದಿರ ನಿರ್ಮಾಣ ಸಾಕು, ಮನೆ-ಮನ ಕಟ್ಟುವ ಕೆಲಸ ಆಗಬೇಕು. ದೇಶದ ಜನ ಯೋಗ್ಯವಲ್ಲದ ಸ್ಥಳದಲ್ಲಿ ವಾಸವಾಗಿದ್ದಾರೆ. ಅಂಥವರ ಕಣ್ಣೀರು ಒರೆಸಿ ರಕ್ಷಣೆ ಮಾಡುವ ಕೆಲಸ ಆಗಲಿ. ಸೂರಿಲ್ಲದವರಿಗೆ ಮನೆ ಕಟ್ಟಿಸಿ ರಾಮಮಂದಿರ ಅಂತ ಹೆಸರಿಡಿ. ಆಗ ನಿಜವಾದ ರಾಮ ಬಂದು ಆಶೀರ್ವಾದಿಸುತ್ತಾನೆ. ಮತಕ್ಕಾಗಿ ಬಿಜೆಪಿ ರಾಮನ ಜಪ ಮಾಡುವುದು ಬೇಡ ಎಂದು ಮಾಜಿ ಸಚಿವರು ಸಲಹೆ ನೀಡಿದರು.

ಚಿತ್ರದುರ್ಗದ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷವು ಸಮರ್ಥರನ್ನು ಮತ್ತು ಜನಪರ ಕಾಳಜಿ ಇರುವವರನ್ನು ಆಯ್ಕೆ ಮಾಡುತ್ತದೆ. ಪಕ್ಷ ಸರ್ವೆ ಮಾಡಿಸಿ, ಸ್ಥಳೀಯ ನಾಯಕರ ಅಭಿಪ್ರಾಯ ಪಡೆದು ಅಭ್ಯರ್ಥಿ ಆಯ್ಕೆ ಮಾಡಲಿದೆ. ಅದರಲ್ಲೂ ಕನ್ನಡದವರು, ಕನ್ನಡ ಬಲ್ಲವರೇ ಇಲ್ಲಿ ಈ ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ. ಅದಕ್ಕೆ ಎಲ್ಲರ ಸಹಕಾರ ಬೇಕು. ನಾವೆಲ್ಲ ಅವರನ್ನು ಗೆಲ್ಲಿಸುವ ಕೆಲಸ ಮಾಡಬೇಕು ಎಂದರು.

ಇದನ್ನೂ ಓದಿ: ರಾಮ ಮಂದಿರ ಸ್ಫೋಟಿಸುವುದಾಗಿ ಬೆದರಿಕೆ; ಯೋಗಿ 'ಗೋ ಸೇವಕ' ಎಂದು ಮೂದಲಿಕೆ

Last Updated : Jan 1, 2024, 6:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.