ETV Bharat / state

ಸಚಿವ ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರ; ಯತ್ನಾಳ್​ ಲಗಾಮಿಲ್ಲದ ನಾಲಿಗೆಗೆ ಡಿವಿ ಕಿಡಿ - ಸಚಿವ ಸಂಪುಟ ಸಭೆ 2021

ಜೆಡಿಎಸ್ ಪಕ್ಷ ನಮ್ಮೊಂದಿಗೆ ಸೇರಲಿ, ಸೇರದೇ ಇರಲಿ. ನಮ್ಮ ತತ್ವಗಳಿಗೆ ಬದ್ದರಾಗಿದ್ದವರಿಗೆ ಪಕ್ಷಕ್ಕೆ ಬರಮಾಡಿಕೊಂಡಿದ್ದೇವೆ. ನಮ್ಮ ತತ್ವ-ಸಿದ್ಧಾಂತಗಳಿಗೆ ಅವರನ್ನು ಬದ್ಧರಾಗಿರುವಂತೆ ತರಬೇತಿ ನೀಡುತ್ತಿದ್ದೇವೆ. ಜೆಡಿಎಸ್‌ನಿಂದ ಪಕ್ಷಕ್ಕೆ ಸೇರುವವರು ಕೇಂದ್ರ ನಾಯಕರೊಂದಿಗೆ ಮಾತನಾಡಬೇಕು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.

DV Sadananda Gowda reaction about Basanagouda Patil Yatnal statement
ಕೇಂದ್ರ ಸಚಿವ ಡಿವಿ ಸದಾನಂದಗೌಡ
author img

By

Published : Jan 2, 2021, 5:35 PM IST

Updated : Jan 2, 2021, 6:14 PM IST

ಚಿತ್ರದುರ್ಗ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಎಲ್ಲವನ್ನೂ ಮಾಡುತ್ತಿದ್ದರೆ, ಅವ್ರೇ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಯ ಆಗುತ್ತಿದ್ದರು. ಯುಗಾದಿ, ದೀಪಾವಳಿ ಹಾಗೂ ಸಂಕ್ರಾಂತಿ ಪ್ರತಿವರ್ಷವೂ ಬರುತ್ತವೆ. ಅವರಿಗೆ ದಿನಾ ಮಾತನಾಡುವ ಚಾಳಿ ಬೆಳೆದಿದೆ. ಹಾಗಾಗಿ ಮಾತನಾಡುತ್ತಾರೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ನಗರದದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಮಾರ್ಗದರ್ಶನ ನೀಡಲು ಕೇಂದ್ರದ ವರಿಷ್ಠರ ತಂಡ ಇದೆ. ಯಾವುದೇ ತೀರ್ಮಾನಗಳು ಆದ್ರೂ, ರಾಜ್ಯದ ಕೋರ್ ಕಮಿಟಿಯಲ್ಲಿ ಚರ್ಚೆಯಾಗಿ ಕಾರ್ಯಗತಗೊಳ್ಳುತ್ತದೆ ಎಂದು ಸಂಕ್ರಾಂತಿಯ ಬಳಿಕ ಬದಲಾವಣೆಯಾಗಲಿದೆ ಎಂಬ ಯತ್ನಾಳ್ ಅವರ ಹೇಳಿಕೆಗೆ ಕೇಂದ್ರ ಸಚಿವರು ತಿರುಗೇಟು ನೀಡಿದರು.

ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರ. ಸಚಿವ ಸಂಪುಟದ ತಂಡ ಹೇಗಿರಬೇಕು ಎನ್ನುವುದು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸುತ್ತಾರೆ. ಕ್ಯಾಪ್ಟನ್ ಆದವರು, ಬೌಲಿಂಗ್, ಫೀಲ್ಡಿಂಗ್, ವಿಕೆಟ್‌ ಕೀಪರ್ ನೇಮಿಸುತ್ತಾರೆ‌. ನಮ್ಮ ಸರ್ಕಾರ ಬರಲು ಬೇರೆ ಪಕ್ಷದಿಂದ ಬಂದಿದ್ದಾರೆ. ಪಕ್ಷದ ಹಿರಿಯ ನಾಯಕರು ಕೂಡ ಇದ್ದಾರೆ. ಅವರಿಗೂ ಸಚಿವ ಸ್ಥಾನ ನೀಡಬೇಕಾಗಿದೆ. ಚಿತ್ರದುರ್ಗ ಶಾಸಕ ಜಿ.ಹೆಚ್​ ತಿಪ್ಪಾರೆಡ್ಡಿ ಸೇರಿದಂತೆ ಹಲವರಿಗೆ ತೊಂದರೆಯಾಗಿದೆ. ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಪರೋಕ್ಷವಾಗಿ ಸಚಿವ ಸ್ಥಾನಕ್ಕಾಗಿ ಕ್ಯಾತೆ ತೆಗೆದಿರುವವರಿಗೆ ಟಾಂಗ್​ ನೀಡಿದರು.

ಓದಿ : ಸಚಿವ ಸಂಪುಟ ಪುನರ್‌ರಚನೆ ಇಲ್ಲ, ವಿಸ್ತರಣೆ; ಕಾದು ನೋಡಿ: ಯತ್ನಾಳ

ಕೇಂದ್ರ ನಾಯಕರೊಂದಿಗೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಸಂಪರ್ಕದಲ್ಲಿದ್ದಾರೆ. ನೀರಾವರಿ ಇಲಾಖೆಯ ಸಂಬಂಧಿಸಿದಂತೆ ಕೆಲಸಕಾರ್ಯಗಳಿಗೆ ದೆಹಲಿಗೆ ಹೋಗುತ್ತಿರುತ್ತಾರೆ. ರಾಜ್ಯಕ್ಕೆ ಯೋಜನೆ ಕುರಿತ ನನ್ನನ್ನು ಕೂಡ ಭೇಟಿ ಮಾಡುತ್ತಾರೆ. ಪಕ್ಷದ ಆಂತರಿಕ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸಲಾಗುವುದಿಲ್ಲ. ಎಲ್ಲವೂ ಪಕ್ಷದ ಕೋರ್ ಕಮಿಟಿ ಮೀಟಿಂಗ್​ನಲ್ಲಿ ನಿರ್ಧರಿಸಲಾಗುತ್ತದೆ ಎಂದು ಸಚಿವ ಸ್ಥಾನ ಹಂಚಿಕೆ ಕುರಿತು ಲಾಬಿ ನಡೆಸುತ್ತಿದ್ದಾರೆ? ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು.

'ಪಕ್ಷ ತತ್ವಗಳನ್ನ ಒಪ್ಪಿಕೊಂಡವರನ್ನು ಸೇರಿಸಿಕೊಳ್ಳುತ್ತೇವೆ'

ರಾಜ್ಯದಲ್ಲಿ ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಜೆಡಿಎಸ್ ಪಕ್ಷ ನಮ್ಮೊಂದಿಗೆ ಸೇರಲಿ, ಸೇರದೇ ಇರಲಿ. ನಮ್ಮ ತತ್ವಗಳಿಗೆ ಬದ್ದರಾಗಿದ್ದವರಿಗೆ ಪಕ್ಷಕ್ಕೆ ಬರಮಾಡಿಕೊಂಡಿದ್ದೇವೆ. ನಮ್ಮ ತತ್ವ-ಸಿದ್ಧಾಂತಗಳಿಗೆ ಅವರನ್ನು ಬದ್ಧರಾಗಿರುವಂತೆ ತರಬೇತಿ ನೀಡುತ್ತಿದ್ದೇವೆ. ಜೆಡಿಎಸ್‌ನಿಂದ ಪಕ್ಷಕ್ಕೆ ಸೇರುವವರು ಕೇಂದ್ರ ನಾಯಕರೊಂದಿಗೆ ಮಾತನಾಡಬೇಕು. ಸಮ್ಮತಿ ನೀಡಿದರೆ ಬರಬಹುದು. ಇನ್ನು ಮುಖ್ಯಮಂತ್ರಿಗಳು ಹೇಳುವ ಪ್ರಕಾರ ಇಲ್ಲಿವರೆಗೂ ಯಾವುದೇ ಬೆಳವಣಿಗೆಗಳು ನಡೆದಿಲ್ಲ ಎಂದರು.

ಕೇಂದ್ರ ಸಚಿವ ಡಿವಿ ಸದಾನಂದಗೌಡ

ಇತ್ತ ಮೇಲ್ಮನೆಯಲ್ಲಿ ನಮ್ಮ ಸಂಖ್ಯೆ ಕಡಿಮೆ ಇರುವುದಕ್ಕೆ ಜೆಡಿಎಸ್ ಪಕ್ಷದ ನಾಯಕರು ನಮ್ಮೊಂದಿಗೆ ಕೈಜೋಡಿಸುತ್ತಾರೆ‌. ನಮಗೊಂದು ಸಭಾಪತಿ ಸ್ಥಾನ ಅವರಿಗೊಂದು ಉಪಸಭಾಪತಿ ಸ್ಥಾನ ಸಿಗಲಿದೆ. ಕೆಲವೊಬ್ಬರು ನಾಯಕರು ಅಲ್ಲಿ-ಇಲ್ಲಿ ಹೋಗುತ್ತೇವೆ ಎಂದು ಮಾತನಾಡುತ್ತಿದ್ದಾರೆ. ಅದಕ್ಕೆಲ್ಲ ನಾವು ಗಮನ ಕೊಡುವ ಅವಶ್ಯಕತೆ ಇಲ್ಲ ಎಂದರು.

Last Updated : Jan 2, 2021, 6:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.