ಚಿತ್ರದುರ್ಗ: ಮಳೆಯ ಅಬ್ಬರಕ್ಕೆ ಜಿಲ್ಲೆಯ ಹೊಸದುರ್ಗ ತಾಲೂಕಿನ ದೇವಪುರ ಕೆರೆ ಏರಿ ಕುಸಿಯುವ ಹಂತ ತಲುಪಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಕೆರೆ ಏರಿ ಒಡೆದಿರುವುದನ್ನ ಪರಿಶೀಲಿಸಿದ ಗ್ರಾಮ ಪಂಚಯಿತಿ ಪಿಡಿಓ ಪ್ರದೀಪ್ ,ಗ್ರಾಮಸ್ಥರ ಮನವೊಲಿಸಿ, ಸದ್ಯ,ಕುಸಿಯುವ ಹಂತ ತಲುಪಿದ್ದ ಕೆರೆ ಏರಿಗೆ ಮರಳುವ ಚೀಲ ಹಾಕಿಸುವ ಮೂಲಕ ತಾತ್ಕಾಲಿಕವಾಗಿ ಅನಾಹುತವನ್ನ ತಪ್ಪಿಸಿದ್ದಾರೆ.
ಇನ್ನು, ಇದೇ ವೇಳೆ ನೆರೆ ಪೀಡಿತ ದೇವಪುರ, ದೇವಪುರ ಎಸ್ಟಿ ಕಾಲೋನಿಯಲ್ಲಿ ನಿಂತ ನೀರನ್ನು ಮೋಟರ್ ಪಂಪ್ ಮುಖಾಂತರ ಹೊರಹಾಕಿ, ಮುಚ್ಚಿದ್ದ ಚರಂಡಿಗಳನ್ನು ಸ್ವಚ್ಚಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಯಿತು.