ಚಿತ್ರದುರ್ಗ: ಜಿಲ್ಲಾ ಅಬಕಾರಿ ಉಪ ಆಯುಕ್ತರ ಆದೇಶ ಮೇರೆಗೆ ನಗರದ ಕೆಎಸ್‍ಬಿಸಿಎಲ್ (ಕರ್ನಾಟಕ ಪಾನೀಯ ನಿಗಮ) ಡಿಪೋ ನಿಗಮದ ಮಳಿಗೆಯಲ್ಲಿನ ಅವಧಿ ಮೀರಿದ 5,970 ಲೀಟರ್ ಬಿಯರ್ ದಸ್ತಾನನ್ನ ನಾಶ ಪಡಿಸಲಾಯಿತು.
ಕೆಎಸ್‍ಬಿಸಿಎಲ್ ಡಿಪೋ ನಿಗಮದ ಮಳಿಗೆಯಲ್ಲಿನ ಅವಧಿ ಮೀರಿದ ಒಟ್ಟು 686 ಪೆಟ್ಟಿಗೆಗಳಲ್ಲಿನ 5,970 ಲೀಟರ್ ಅಂದರೆ ಅಂದಾಜು12.40 ಲಕ್ಷ ರೂಪಾಯಿ ಮೌಲ್ಯದ ಬಿಯರ್ ದಾಸ್ತಾನನ್ನ ನಾಶಪಡಿಸಲಾಯಿತು. ಬಿಯರ್ ತಯಾರಾದ ಬಳಿಕ 6 ತಿಂಗಳ ಅವಧಿಯವರೆಗೆ ಬಳಸಲು ಅವಕಾಶವಿರುತ್ತದೆ. ಆದರೆ ಚಿತ್ರದುರ್ಗ ಕೆಎಸ್‍ಬಿಸಿಎಲ್ ನಿಗಮದ ಮಳಿಗೆಯಲ್ಲಿ ದಾಸ್ತಾನಿದ್ದ ಸುಮಾರು 5,970 ಲೀಟರ್ ಬಿಯರ್ ಅವಧಿ ಮೀರಿದ್ದರಿಂದ ನಿಯಮಾನುಸಾರ ಇಲಾಖೆಯಿಂದ ನಾಶಪಡಿಸಲಾಗಿದೆ.
ಒಟ್ಟು 115 ಲೀಟರ್ ಬ್ಲಾಕ್ ಪರ್ಲ್ ಟ್ರಿಪಲ್ ಸೂಪರ್ ಸ್ಟ್ರಾಂಗ್ ಬಿಯರ್ ಹಾಗೂ 571 ಬಾಕ್ಸ್ ಬೆಕ್ಸ್ ಐಸ್ ಬಿಯರ್ ನಾಶಪಡಿಸಲಾಗಿದೆ.