ಚಿತ್ರದುರ್ಗ: ಅಕ್ರಮ ಮರಳು ಲಾರಿ ಲಾರಿ ಬಿಡಲು ಪಿಎಸ್ಐ ಹಾಗೂ ಸಿಪಿಐ ಲಂಚಕ್ಕೆ ಡಿಮ್ಯಾಂಡ್ ಮಾಡಿದರೆನ್ನಲಾದ ಆಡಿಯೋ ವೈರಲ್ ಆಗಿದೆ.
ಪೊಲೀಸ್ ಪೇದೆ ಮೂಲಕ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಪಿಎಸ್ಐ ಮತ್ತು ಸಿಪಿಐ, ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ವ್ಯಕ್ತಿಗೆ ಫೋನ್ ಮಾಡಿ ಹಣದ ಬೇಡಿಕೆ ಇಟ್ಟಿರುವ ಮಾಹಿತಿ ಆಡಿಯೋದಲ್ಲಿದೆ ಎನ್ನಲಾಗಿದೆ.
ಜಿಲ್ಲೆಯ ಹೊಸದುರ್ಗ ತಾಲೂಕಿನ ಪಿಎಸ್ಐ ಮತ್ತು ಸಿಪಿಐ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು ಎಂದು ಆಡಿಯೋದಲ್ಲಿ ಆರೋಪಿಸಲಾಗಿದೆ. ಅಧಿಕಾರಿಗಳ ನಿರ್ದೇಶನದಂತೆ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ವ್ಯಕ್ತಿ ಜೊತೆ ಪೊಲೀಸ್ ಪೇದೆ ಮಾತನಾಡಿದ್ದಾರೆ ಎನ್ನಲಾಗಿದೆ. ಎಫ್ಐಆರ್ ಹಾಕದಿರಲು ಪಿಸಿ ಮೂಲಕ 1 ಲಕ್ಷ ರೂ.ಗೆ ಅಧಿಕಾರಿಗಳು ಬೇಡಿಕೆ ಇಟ್ಟಿರುವ ಮಾಹಿತಿ ಆಡಿಯೋದಲ್ಲಿದೆ ಎಂದು ಹೇಳಲಾಗುತ್ತಿದೆ.
ಇನ್ನು ಹಣ ನೀಡದಿದ್ದರೆ ಎಫ್ಐಆರ್ ಹಾಕಿ ಬಂಧಿಸುವುದಾಗಿ ಬೆದರಿಕೆ ಹಾಕಿದ್ದ ಅಧಿಕಾರಿಗಳು, ಹೇಳಿದಂತೆ ಹಣ ನೀಡದಿದ್ದಕ್ಕೆ ಪಿಎಸ್ಐ ಎಫ್ಐಆರ್ ದಾಖಲು ಮಾಡಿದ್ದಾರೆ. ಎಫ್ಐಆರ್ ಹಾಕಿದ ಬಳಿಕ ಬಂಧಿಸದಿರಲು ಮತ್ತೆ ಹಣಕ್ಕೆ ಡಿಮ್ಯಾಂಡ್ ಮಾಡಲಾಗಿದ್ದು, ಕೊನೆಗೆ ಪೊಲೀಸ್ ಪೇದೆ ಮೂಲಕ 20 ಸಾವಿರ ಪಡೆಯಲು ಪಿಎಸ್ಐ ತಿಳಿಸಿದ್ದಾರೆ ಎನ್ನುವುದು ಆರೋಪ ಮಾಡುವವರ ವಾದವಾಗಿದೆ.
ಹೊಸದುರ್ಗ ತಾಲೂಕಿನ ಅತ್ತಿಗಟ್ಟ ಗ್ರಾಮದ ನರಸಿಂಹರಾಜು ಲಾರಿ ಮಾಲೀಕನಿಂದ ಹಣಕ್ಕೆ ಬೇಡಿಕೆ ಮಾಡಿದ್ದು, 20 ಸಾವಿರ ರೂ. ಪಡೆಯುವಾಗ ಎಸಿಬಿ, ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ದಾಳಿ ಕೂಡ ನಡೆದಿತ್ತು. ಇನ್ನು ಲಾರಿ ಬಿಡಿಸಿಕೊಳ್ಳಲು ನ್ಯಾಯಾಲಯದಿಂದ ಜಾಮೀನು ಸಿಕ್ಕಿದ್ದರೂ, ಅದ್ ಹೇಗೆ ಲಾರಿ ಬಿಡಿಸಿಕೊಳ್ತಿಯಾ ಅಂತ ಸಿಪಿಐ ಅವಾಜ್ ಹಾಕಿದ್ದಾನೆ ಎಂದೂ ಹೇಳಲಾಗುತ್ತಿದೆ.
ಪಿಎಸ್ಐ ನಿನಗೆ ಸಪೋರ್ಟ್ ಮಾಡಿದ್ದಾನೆ. ಅವನನ್ನು ಬಿಡೋದಿಲ್ಲ ಅಂತ ಸಿಪಿಐ ಅಕ್ರಮ ಮರಳುಗಾರನಿಗೆ ಆವಾಜ್ ಹಾಕಿರುವ ಆಡಿಯೋ ಈಗ ವೈರಲ್ ಆಗಿದೆ.