ETV Bharat / state

ಸಿದ್ದರಾಮಯ್ಯನವರ ಸರ್ಕಾರ ಪರ್ಸೆಂಟೇಜ್ ಸರ್ಕಾರ ಆಗಿತ್ತು: ಸಿಟಿ ರವಿ - Chitradurga latest news

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಚಿತ್ರದುರ್ಗದಲ್ಲಿ ವಾಗ್ದಾಳಿ ನಡೆಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಡೆಮಾಕ್ರಸಿಯಲ್ಲಿ ಹೆದರಿಸಿ ಬೆದರಿಸಿ ರಾಜಕಾರಣ ಮಾಡೋಕಾಗಲ್ಲ, ಇಂತಹ ರಾಜಕಾರಣ ಬಹಳ ದಿನ ಉಳಿಯುವುದಿಲ್ಲ ಎಂದಿದ್ದಾರೆ.

CT Ravi reaction about Siddaramaiah allegations
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ
author img

By

Published : Oct 19, 2020, 10:40 PM IST

Updated : Oct 19, 2020, 10:55 PM IST

ಚಿತ್ರದುರ್ಗ : ಸಿದ್ದರಾಮಯ್ಯನವರ ಅವಧಿಯಲ್ಲಿನ ಕಾಂಗ್ರೆಸ್​ ಸರ್ಕಾರ ಪರ್ಸೆಂಟೇಜ್ ಸರ್ಕಾರವಾಗಿತ್ತು. ತಮ್ಮ ಸರ್ಕಾರದ ಆಡಳಿತ ನೆನೆದು ಆರೋಪ ಮಾಡಿರಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದರು.

ನಗರದ ಮುರುಘಾ ಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆದರಿಸಿ ಬೆದರಿಸಿ ರಾಜಕಾರಣ ಮಾಡುವುದು ಕನಕಪುರ‌ದ ಸ್ಟೈಲ್. ಡೆಮಾಕ್ರಸಿಯಲ್ಲಿ ಹೆದರಿಸಿ ರಾಜಕಾರಣ ಮಾಡೋಕಾಗಲ್ಲ. ಇನ್ನು ಅಟ್ರಾಸಿಟಿ ಹಾಕಿಸುವುದು, ಮನೆ ಮೇಲೆ ಕಲ್ಲು ಹೊಡೆಸುವುದು ನಮ್ಮ ಸಂಸ್ಕೃತಿ ಅಲ್ಲ. ಅದು ಕೂಡ ಕನಕಪುರದ ಸಂಸ್ಕೃತಿ. ಈ ಕನಕಪುರದ ಸಂಸ್ಕೃತಿಯನ್ನು ರಾಜ್ಯಕ್ಕೆ‌ ವಿಸ್ತರಿಸಲು ಅವಕಾಶ ಕೊಡಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ಗೆ ಟಾಂಗ್ ನೀಡಿದರು.

ಉತ್ತರ ಕರ್ನಾಟಕದಲ್ಲಿ ಸೃಷ್ಟಿಯಾಗಿರುವ ಪ್ರವಾಹದ ಬಗ್ಗೆ ಪ್ರತಿಕ್ರಿಯಿಸಿ, ನಾಳೆ ನಾಡಿದ್ದು ಸಿಎಂ ಯಡಿಯೂರಪ್ಪನವರು ಹಾಗೂ ಸಚಿವರು ವಿಡಿಯೋ ಕಾನ್ಫರೆನ್ಸ್ ಮೂಲಕ ಆಯಾ ಸಂಬಂಧಿತ ಅಧಿಕಾರಿಗಳಿಗೆ ಪರಿಹಾರಕ್ಕೆ ಸೂಚನೆ ನೀಡಲಿದ್ದೇವೆ ಎಂದು ನೆರೆ ಪರಿಹಾರದಲ್ಲಿ ಮನೆ ಮಾಡಿದ್ದ ಗೊಂದಲಕ್ಕೆ ತೆರೆ ಎಳೆದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ

ವಿಧಾನ ಪರಿಷತ್, ರಾಜ್ಯಸಭೆಗಳನ್ನು ವ್ಯಾಪಾರಕ್ಕಿಟ್ಟ ಪಕ್ಷಗಳಿದ್ದು, ಕುದುರೆ ಜೂಜುಕೋರರನ್ನು ರಾಜ್ಯದಿಂದ ರಾಜ್ಯಸಭೆಗೆ ಕಳಿಸಿದ್ದು ನೋಡಿದ್ದೇವೆ ಎಂದು ಇತರೆ ರಾಜಕೀಯ ಪಕ್ಷಗಳಿಗೆ ಇದೇ ವೇಳೆ ತಿರುಗೇಟು ನೀಡಿದರು.

Last Updated : Oct 19, 2020, 10:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.