ETV Bharat / state

ಗುಜರಾತ್​​ನಿಂದ ಬಂದ 3 ತಬ್ಲಿಘಿಗಳಿಗೆ ಸೋಂಕು: ಗ್ರೀನ್​ ಇದ್ದ ದುರ್ಗ ಈಗ ಆರೇಂಜ್​​​​ - Coronavirus infected 3 Tablighis

15 ಜನರ ಪೈಕಿ ನಾಲ್ವರಲ್ಲಿ ಗುಜರಾತಿನಲ್ಲಿದ್ದಾಗ ಸೋಂಕು ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆಯಿಂದ ಗುಣಮುಖರಾದ ಬಳಿಕ ಇವರೆಲ್ಲ ಚಿತ್ರದುರ್ಗಕ್ಕೆ ಮರಳಿದ್ದರು. ಇದೀಗ ನಾಲ್ವರ ಪೈಕಿ ಮೂವರಿಗೆ ಮತ್ತೆ ಕೊರೊನಾ ಸೋಂಕು ಪತ್ತೆ ಆಗಿದೆ.

Coronavirus
ಗುಜರಾತಿನಿಂದ ಹಿಂದಿರುಗಿದ 3 ಜನ ತಬ್ಲಿಘಿಗಳಿಗೆ ಕೊರೊನಾ ಸೋಂಕು: ಡಿಹೆಚ್ಓ ಡಾ ಪಾಲಾಕ್ಷ
author img

By

Published : May 8, 2020, 6:14 PM IST

ಚಿತ್ರದುರ್ಗ: ಗುಜರಾತಿನಿಂದ ಹಿಂದಿರುಗಿದ 3 ಜನ ತಬ್ಲಿಘಿಗಳಿಗೆ ಕೊರೊನಾ ಸೋಂಕು ಇರುವುದು ಖಾತ್ರಿಯಾಗಿದೆ. ಇದರ ಬಗ್ಗೆ ಈಟಿವಿ ಭಾರತ್​​​ಗೆ ಚಿತ್ರದುರ್ಗ ಡಿಹೆಚ್ಒ ಡಾ.ಪಾಲಾಕ್ಷ ಅವರು ದೂರವಾಣಿ ಮೂಲಕ ಮಾಹಿತಿ ನೀಡಿದ್ದು, 15 ಜನ ಮೇ 05 ರಂದು ಅಹಮದಾಬಾದ್​ನಿಂದ ಚಿತ್ರದುರ್ಗಕ್ಕೆ ಹಿಂದಿರುಗಿದ್ದರು.

ಅದರೆ, ಆ 15 ಜನ್ರ ಪೈಕಿ ನಾಲ್ವರಲ್ಲಿ ಗುಜರಾತಿನಲ್ಲಿದ್ದಾಗ ಸೋಂಕು ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆಯಿಂದ ಗುಣಮುಖರಾದ ಬಳಿಕ ಇವರೆಲ್ಲ ಚಿತ್ರದುರ್ಗಕ್ಕೆ ಮರಳಿದ್ದರು. ಇದೀಗ ನಾಲ್ವರ ಪೈಕಿ ಮೂವರಿಗೆ ಮತ್ತೆ ಕೊರೊನಾ ಸೋಂಕು ಪತ್ತೆ ಆಗಿದೆ. ಇನ್ನುಳಿದ 12 ಜನರ ಕೋವಿಡ್-19 ವರದಿ ನೆಗೆಟಿವ್ ಇದೆ. ಗುಜರಾತಿನಿಂದ ಬಂದವರಿಗೆ ತಕ್ಷಣಕ್ಕೆ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದ್ದು, ಸೋಂಕಿತ ಮೂವರನ್ನು ಕೋವಿಡ್-19 ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಡಿಹೆಚ್​​​​​ಒ ಡಾ. ಪಾಲಾಕ್ಷ ಮಾಹಿತಿ ನೀಡಿದರು.

ಇನ್ನು ಅಹಮದಾಬಾದ್​ನಿಂದ ಒಂದೇ ಬಸ್​ನಲ್ಲಿ 33 ಜನ ಬಂದಿದ್ದು, ಅದರಲ್ಲಿ ಚಿತ್ರದುರ್ಗಕ್ಕೆ 15 ಜನ ಸೇರಿದ್ದು, ತುಮಕೂರಿನ 18 ಜನ ಒಂದೇ ಬಸ್​ನಲ್ಲಿ ಬಂದಿದ್ದರು ಎಂದರು.

ಆದ್ರೇ ಬಸ್​ನಲ್ಲಿ ಬಂದಿದ್ದ 33 ಜನರಿಗೂ ಕೊರೊನಾ ಕಂಟಕ ಆಗಿದೇನಾ, ಚೆಕ್​ಪೋಸ್ಟ್​ನಿಂದ ಹಾಸ್ಟಲ್ ಶಿಫ್ಟ್ ವೇಳೆ ಉಪಸ್ಥಿತರಿದ್ದವರಿಗೂ ಕೊರೊನಾ ತಟ್ಟಿದೇನಾ ಎಂಬ ಅನುಮಾನ ಕಾಡತೊಡಗಿದೆ. ಈಗಾಗಲೇ ಕೊರೊನಾ ಸೋಂಕಿತ ಮೂವರು ಕೋವಿಡ್-19 ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಜಿಲ್ಲಾಸ್ಪತ್ರೆ ಬಳಿ ಇರುವ ಕೋವಿಡ್-19 ಆಸ್ಪತ್ರೆ ಮುಂಭಾಗದ ರಸ್ತೆ ಸಂಪೂರ್ಣ ಬ್ಲಾಕ್ ಮಾಡಿ ಜನರ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.