ETV Bharat / state

ಚೆನ್ನೈ ಟು ಚಿತ್ರದುರ್ಗ... ಕೋಟೆನಾಡಿನ ತಂದೆ-ಮಗಳಿಗೆ ವಕ್ಕರಿಸಿದ ಮಹಾಮಾರಿ - 39 ವರ್ಷದ ತಂದೆ, 03 ವರ್ಷದ ಮಗಳಿಗೆ ಸೋಂಕು

ಚೆನ್ನೈನಿಂದ ಜಿಲ್ಲೆಗೆ ಆಗಮಿಸಿದ ತಂದೆ-ಮಗಳಿಗೆ ಕೊರೊನಾ ಸೋಂಕು ಇದೆ ಎಂಬುದು ದೃಢಪಟ್ಟಿದೆ. ಚಳ್ಳಕೆರೆ ಮೂಲದ ಇವರಿಬ್ಬರು ಚೆನ್ನೈ ನಲ್ಲಿರುವ ಸಂಬಂಧಿಕರ ಮನೆಗೆ ತೆರಳಿ ಬಳಿಕ ಜಿಲ್ಲೆಗೆ ಹಿಂದಿರುಗಿದ ವೇಳೆ ಕೊರೊನಾ ಲಕ್ಷಣಗಳು ಕಂಡುಬಂದಿದ್ದವು. ಬಳೀಕ ಅವರ ಗಂಟಲು ದ್ರವದ ಪರೀಕ್ಷೆ ಮಾಡಿದಾಗ ಕೊರೊನಾ ಇರುವುದು ದೃಢವಾಗಿದೆ.

corona positive case found at chitradurga
ಕೋಟೆನಾಡಿನ ತಂದೆ ಮಗಳ ಬೆನ್ನೇರಿದ ಮಹಾಮಾರಿ!
author img

By

Published : May 15, 2020, 3:20 PM IST

ಚಿತ್ರದುರ್ಗ: ಮಹಾಮಾರಿ ಕೊರೊನಾ ವೈರಸ್ ಜಿಲ್ಲೆಯ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದೆ. ಚೆನ್ನೈನಿಂದ ಚಳ್ಳಕೆರೆ ತಾಲೂಕಿನ ಗ್ರಾಮೀಣ ಭಾಗಕ್ಕೂ ಲಗ್ಗೆ ಇಟ್ಟಿದೆ.

ಚೆನ್ನೈನಿಂದ ಜಿಲ್ಲೆಗೆ ಆಗಮಿಸಿದ್ದ ತಂದೆ-ಮಗಳಿಗೆ ಕೊರೊನಾ ಸೋಂಕು ಇದೇ ಎಂಬುದು ದೃಢವಾಗಿದೆ. ಇವರು ಜಿಲ್ಲೆಯ ಚಳ್ಳಕೆರೆ ತಾಲೂಕಿನವರಾಗಿದ್ದು, ಇಬ್ಬರು ಚೆನ್ನೈನಲ್ಲಿರುವ ಸಂಬಂಧಿಕರ ಮನೆಗೆ ತೆರಳಿ ಬಳಿಕ ಜಿಲ್ಲೆಗೆ ಹಿಂದಿರುಗಿದ ವೇಳೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದವು. ಬಳಿಕ ಅವರ ಗಂಟಲು ದ್ರವದ ಪರೀಕ್ಷೆ ಮಾಡಿದಾಗ ಕೋವಿಡ್​ ಪಾಸಿಟಿವ್​ ಇರುವುದು ಖಚಿತವಾಗಿದೆ.

ಚಳ್ಳಕೆರೆ ತಾಲೂಕಿನ ಕೋಡಿಹಳ್ಳಿ ನಿವಾಸಿಗಳಾದ 39 ವರ್ಷದ ತಂದೆ, 03 ವರ್ಷದ ಮಗಳಿಗೆ ಸೋಂಕು ತಗುಲಿರುವುದು ದೃಢವಾಗಿದೆ.

ಕೊರೊನಾ ವೈರಸ್ ಕಂಡು ಬಂದಿರುವುದರಿಂದ ಅವರನ್ನು ನಗರದಲ್ಲಿರುವ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಾಗಲೇ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಲಾಕ್ಷ ಈ ಬಗ್ಗೆ ದೂರವಾಣಿ ಮೂಲಕ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದು, ತಂದೆ-ಮಗಳಿಗೆ ಕೊರೊನಾ ಸೋಂಕು ಕಂಡು ಬಂದಿರುವುದನ್ನು ಖಾತ್ರಿಪಡಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು ಒಂಭತ್ತು ಪ್ರಕರಣಗಳು ದಾಖಲಾಗಿವೆ. ಓರ್ವ ರೋಗಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೆ, ಸಕ್ರಿಯವಾಗಿರುವ ಎಂಟು ಜನ ಕೊರೊನಾ ಸೋಂಕಿತರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.