ETV Bharat / state

ಚಿತ್ರದುರ್ಗದಲ್ಲಿ ಮತ್ತೆ 6 ಮಂದಿಗೆ ಕೊರೊನಾ: ಸೋಂಕಿತರ ಸಂಖ್ಯೆ 37ಕ್ಕೇರಿಕೆ

ಕೋಟೆನಾಡು ಚಿತ್ರದುರ್ಗದಲ್ಲಿ ಇಂದು ಮತ್ತೆ 6 ಮಂದಿಗೆ ಕೊರೊನಾ ಮಹಾಮಾರಿ ವಕ್ಕರಿಸಿದೆ.

dsdd
ಚಿತ್ರದುರ್ಗದಲ್ಲಿ ಮತ್ತೆ 6 ಮಂದಿಗೆ ಕೊರೊನಾ
author img

By

Published : May 28, 2020, 1:45 PM IST

ಚಿತ್ರದುರ್ಗ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಮತ್ತೆ 6 ಮಂದಿಗೆ ಕೊರೊನಾ ತಗುಲಿ ಸೋಂಕಿತರ ಸಂಖ್ಯೆ 37ಕ್ಕೇರಿದೆ.

dsdsd
ಚಿತ್ರದುರ್ಗದಲ್ಲಿ ಮತ್ತೆ 6 ಮಂದಿಗೆ ಕೊರೊನಾ

ಉತ್ತರ ಪ್ರದೇಶ ಮೂಲದ ಪಿ-2452, 15 ವರ್ಷದ ಬಾಲಕ, ಪಿ-2453, 36 ವರ್ಷದ ವ್ಯಕ್ತಿ, ಪಿ-2454, 19 ವರ್ಷದ ಯುವಕ, ಪಿ-2455, 21 ವರ್ಷದ ಯುವಕ, ಪಿ-2456, 24 ವರ್ಷದ ಯುವಕ, ಪಿ-2457, 25 ವರ್ಷದ ಯುವಕನಿಗೆ ಕೊರೊನಾ ದೃಢಪಟ್ಟಿದೆ. ಮೇ 21ರಂದು P-1630 ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿತ್ತು. ಈತನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 20 ಜನರಿಗೆ ಮೇ 26ರಂದು ಸೋಂಕು ದೃಢವಾಗಿತ್ತು. ಮತ್ತೆ ಅದೇ ವ್ಯಕ್ತಿಯ ಸಂಪರ್ಕದಲ್ಲಿದ್ದ 6 ಜನರಿಗೆ ಕೊರೊನಾ ಪಾಸಿಟಿವ್ ಬಂದಿರುವುದು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ.

ಚೆನ್ನೈನಿಂದ ಯುಪಿಗೆ ಲಾರಿಯಲ್ಲಿ ಹೊರಟಿದ್ದ ಕಾರ್ಮಿಕರು ಇವರಾಗಿದ್ದು, ಅನುಮತಿ ಇಲ್ಲದೆ ಅಕ್ರಮವಾಗಿ ಸರಕು ಲಾರಿಯಲ್ಲಿ 57 ಮಂದಿ ಪ್ರಯಾಣಿಸುತ್ತಿದ್ದರು. ಪಾವಗಡ ಪರಶುರಾಂಪುರ ನಡುವೆ ಇರುವ ನಾಗಪ್ಪನಹಳ್ಳಿ ಚೆಕ್​ ಪೋಸ್ಟ್​ನಲ್ಲಿ ಕಾರ್ಮಿಕರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.‌ ಸಿಕ್ಕಿಬಿದ್ದಿದ್ದ ಕಾರ್ಮಿಕರನ್ನು ಮೇ 15ರಂದು ಚಳ್ಳಕೆರೆಯ ಬಿಸಿಎಂ ಹಾಸ್ಟೆಲ್​ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಲಾರಿಯಲ್ಲಿದ್ದ ಒಟ್ಟು 57 ಕಾರ್ಮಿಕರ ಪೈಕಿ ಇಂದು 6 ಜನರಿಗೆ ಕೋವಿಡ್​ ತಗುಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.