ETV Bharat / state

ಕೊರೊನಾ ಎಫೆಕ್ಟ್​: ತರಕಾರಿ ಮಾರಲಾಗದೆ ಕಂಗಲಾದ ರೈತ - Corona Effect

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋಡಿಹಳ್ಳಿ ಗ್ರಾಮದ ರೈತ ಈರಣ್ಣ, ಟೊಮ್ಯಾಟೋ, ಬೂದುಗುಂಬಳ, ಹಾಗಲಕಾಯಿ ಬೆಳೆದಿದ್ದು, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಕಂಗಲಾಗಿದ್ದಾರೆ.

Corona Effect: A farmer who does not sell vegetables
ಕೊರೊನಾ ಎಫೆಕ್ಟ್​: ತರಕಾರಿ ಮಾರಲಾಗದೇ ಕಂಗಲಾದ ರೈತ
author img

By

Published : Apr 6, 2020, 5:21 PM IST

ಚಿತ್ರದುರ್ಗ: ಕೊರೊನಾ ವೈರಸ್​ ಭೀತಿಯಿಂದಾಗಿ ದೇಶದಾದ್ಯಂತ ಲಾಕ್​ಡೌನ್​ ಮಾಡಲಾಗಿದ್ದು, ತರಕಾರಿ ಬೆಳೆದಿರುವ ರೈತರು ಮಾರುಕಟ್ಟೆಗೆ ಕೊಂಡೊಯ್ಯಲಾಗದೇ ಹೈರಾಣಾಗಿದ್ದಾರೆ.

ಕೊರೊನಾ ಎಫೆಕ್ಟ್​: ತರಕಾರಿ ಮಾರಲಾಗದೇ ಕಂಗಲಾದ ರೈತ

ಜಿಲ್ಲೆಯ ಹಿರಿಯೂರು ತಾಲೂಕಿನ ಕೋಡಿಹಳ್ಳಿ ಗ್ರಾಮದ ರೈತ ಈರಣ್ಣ, ಟೊಮ್ಯಾಟೋ, ಬೂದುಗುಂಬಳ, ಹಾಗಲಕಾಯಿ ಬೆಳೆದಿದ್ದು, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಕಂಗಲಾಗಿದ್ದಾರೆ. ಇವರು ತಮ್ಮ ಇಪ್ಪತ್ತು ಎಕರೆ ಜಮೀನಿನಲ್ಲಿ ಹಲವು ಬಗೆಯ ತರಕಾರಿಗಳನ್ನ ಬೆಳೆದಿದ್ದರು. ಈ ಬಾರಿ ಮಳೆ ಚೆನ್ನಾಗಿ ಆಗಿದ್ದರಿಂದ ನೀರಿನ ಲಭ್ಯತೆ ಹೆಚ್ಚಾಗಿತ್ತು. ಹೀಗಾಗಿ ಕಷ್ಟ ಪಟ್ಟು ಬಿತ್ತನೆ ಮಾಡಿದ್ದ ರೈತನಿಗೆ ಬೆಳೆಯೂ ಕೂಡ ಚೆನ್ನಾಗಿ ಬಂದಿದೆ. ಆದರೆ, ಲಾಕ್​ಡೌನ್​ನಿಂದಾಗಿ ಬೆಳೆದ ತರಕಾರಿಗಳನ್ನು ಮಾರುಕಟ್ಟೆಗೆ ಕೊಂಡೊಯ್ಯಲು ವಾಹನದ ವ್ಯವಸ್ಥೆ ಇಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ.

ಹೀಗಾಗಿ ಬೆಳೆದ ತರಕಾರಿಯನ್ನೆಲ್ಲಾ ದನ ಕರುಗಳಿಗೆ ಹಾಗೂ ಕುರಿಗಳಿಗೆ ಹಾಕಿದ್ದು, ಆಗುತ್ತಿರುವ ನಷ್ಟವನ್ನು ಸಹಿಸಿಕೊಳ್ಳಲಾರದೆ ಟೊಮ್ಯಾಟೋ ರಾಶಿಯ ಮೇಲೆ ಬಿದ್ದು ಆಕ್ರಂದಿಸುತ್ತಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.