ಚಿತ್ರದುರ್ಗ: ಪ್ರಧಾನಿ ಮೋದಿ ಅವರು ₹ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ನಿರ್ಧಾರವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಶೆಟ್ಟರ್, ಬಹುಶಃ ಅವರು ಪ್ರತಿಪಕ್ಷದಲ್ಲಿರಲು ಯೋಗ್ಯರಲ್ಲ ಎಂದು ವಾಗ್ದಾಳಿ ನಡೆಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಒಬ್ಬ ಪರಿಣತರಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದರು.
ಕೊರೊನಾ ವೈರಸ್ ಹರಡುತ್ತಿರುವುದು ತಬ್ಲಿಘಿಗಳಿಂದ ಮಾತ್ರ ಎಂಬುದಾಗಿ ಕೋಮುವಾದಿ ಸಂಘ ಪರಿವಾರದವರು ಹಬ್ಬಿಸುತ್ತಿದ್ದಾರೆ ಎಂದಿರುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶೇ. 99ರಷ್ಟು ಸೋಂಕು ತಬ್ಲಿಘಿಗಳಿಂದ ಬಂದಿದೆ. ಆದರೆ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ವೋಟ್ ಬ್ಯಾಂಕ್ ರಕ್ಷಣೆಗೆ ಈ ರೀತಿ ಟೀಕಿಸುತ್ತಿದ್ದಾರೆ ಎಂದರು.
ರಸ್ತೆಯಲ್ಲಿ ಹೋಗುವವರನ್ನು ಕೇಳಿದರೆ ತಬ್ಲಿಘಿಗಳಿಂದ ಸೋಂಕು ಬಂದಿದೆ ಎನ್ನುತ್ತಾರೆ. ಇಷ್ಟಾದರೂ ಸಿದ್ದರಾಮಯ್ಯ ಅವರಿಗೆ ಅರ್ಥ ಆಗಲಿಲ್ಲ. ಅವರು ಹಾಕಿಕೊಂಡಿರುವ ಕೋಮುವಾದದ ಪರದೆ ತೆಗೆಯಬೇಕು ಎಂದು ಕಿಡಿ ಕಾರಿದರು.