ಚಿತ್ರದುರ್ಗ: ಮೊದಲ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಗೆ ಆಗಮಿಸಿದ ಸಚಿವ ಶ್ರೀರಾಮುಲುಗೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯ ಬಿಸಿ ಮುಟ್ಟಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ನೆರೆ ಪರಿಹಾರಕ್ಕಾಗಿ ಒತ್ತಾಯಿಸಿದರು. ನೆರೆ ಪರಿಹಾರ ವಿಚಾರದಲ್ಲಿ ವಿಳಂಬ ಧೋರಣೆ ವಿರೋಧಿಸಿ ಪ್ರತಿಭಟಿಸಿದ ಪ್ರತಿಭನಕಾರರನ್ನು ಮನವೊಲಿಸಲು ಸಚಿವ ಶ್ರೀ ರಾಮುಲು ಮುಂದಾದ್ರು ಕೂಡ ಪ್ರಯತ್ನ ವಿಫಲವಾಯಿತು. ಕೈ ಕಾರ್ಯಕರ್ತರು ಶ್ರೀ ರಾಮುಲು ವಿರುದ್ಧ ಘೋಷಣೆ ಕೂಗುತ್ತಿದ್ದಂತೆ, ಇತ್ತಾ ಅಭಿಮಾನಿಗಳು ಶ್ರೀ ರಾಮುಲು ಪರ ಘೋಷಣೆ ಹಾಕಿದರು.
ನಂತರ ಗದ್ದಲ ಜೋರಾದಂತೆ ಪೋಲಿಸರು ಮಧ್ಯೆ ಪ್ರವೇಶಿಸಿ ಪ್ರತಿಭಟನಾಕಾರರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಿದರು. ಇನ್ನೂ ಗದ್ದಲ ಜೋರಾಗಿದ್ದಕ್ಕೆ ಶ್ರೀ ರಾಮುಲು ಪ್ರತಿಭಟನಾಕಾರರ ಮನವಿ ಸ್ವೀಕರಿಸದೇ ತೆರಳಿದರು.