ಚಿತ್ರದುರ್ಗ : ಕೊರೊನಾ ಮಟ್ಟಹಾಕಲು ಚಿತ್ರದುರ್ಗ ನಗರದಲ್ಲಿರುವ ಬಸವೇಶ್ವರ ಮೆಡಿಕಲ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಕೋವಿಂಡ್-19 ಪರೀಕ್ಷಾ ಕೇಂದ್ರವನ್ನು ಉದ್ಘಾಟಿಸಲಾಯಿತು.
ಕೊರೊನಾ ಇರುವುದರಿಂದ ಜಿಲ್ಲೆಗೆ ಬಾರದ ಸಿಎಂ ಯಡಿಯೂರಪ್ಪ, ಶ್ರೀಶಿವಮೂರ್ತಿ ಮುರುಘಾ ಶರಣರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಮುರುಘಾ ಮಠದ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಕೊರೊನಾ ಪರೀಕ್ಷಾ ಕೇಂದ್ರ ಉದ್ಘಾಟಿಸಿದ್ದೇವೆ ಎಂದರು.
ದೀನ ದಲಿತರ ಹಿಂದುಳಿದ ವರ್ಗಗಳ ಬಗ್ಗೆ ಹೆಚ್ಚು ಕಾಳಜಿವಹಿಸಿ ಸಮಾಜ ಮುನ್ನಡೆಸುತ್ತಿರುವ ಶ್ರೀಮುರುಘಾ ಶರಣರಿಗೆ ವಂದನೆಗಳನ್ನು ಸಮರ್ಪಿಸಿದರು. ಕೊರೊನಾ ಬಂದು ರಾಜ್ಯದಲ್ಲಿ ಸಾಕಷ್ಟು ವ್ಯತ್ಯಾಸ ಆಗಿದೆ. ಸಾವು-ನೋವು ಸಂಭವಿಸಿವೆ.
ಕೊರೊನಾ ಇನ್ನೂ ಮೂರು ತಿಂಗಳ ಕಾಲ ಇರಬಹುದು? ಅಲ್ಲಿಯ ತನಕ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ ಎಂದು ಮನವರಿಕೆ ಮಾಡಿದರು.