ಚಿತ್ರದುರ್ಗ: ಉತ್ತರ ಕರ್ನಾಟಕದಲ್ಲಾದ ಭಾರಿ ಪ್ರವಾಹಕ್ಕೆ ಎಲ್ಲೆಡೆಯಿಂದ ಸಹಾಯ ದೊರಕುತ್ತಿದ್ದು, ಅದೇ ರೀತಿ, ಬರದ ಬೆಂಗಾಡಾಗಿರುವ ಚಿತ್ರದುರ್ಗ ಜಿಲ್ಲೆಯ ಜನರು ನೆರವಿನಹಸ್ತ ಚಾಚಿದ್ದಾರೆ. ಹೊಳಲ್ಕೆರೆ ತಾಲೂಕಿನ ರಾಮಗಿರಿ ಗ್ರಾಮಸ್ಥರು ಉತ್ತರ ಕರ್ನಾಟಕದ ಕಡೆ ನೆರವಿಗಾಗಿ ತಡ ರಾತ್ರಿ ಪ್ರಯಾಣ ಬೆಳೆಸಿದ್ದಾರೆ.
ನೆರೆ ಸಂತ್ರಸ್ತರಿಗಾಗಿ 3 ಸಾವಿರ ರೊಟ್ಟಿ, ಚಪಾತಿ, 45 ಚೀಲ ಅಕ್ಕಿ, ನೀರಿನ ಬಾಟಲ್, ಚಟ್ನಿ ಪುಡಿ, ತೊಗರಿ ಬೇಳೆ, ಕಾರದ ಪುಡಿ, ಸಂಬಾರ್ಪುಡಿ, 20 ಬಿಸ್ಕೇಟ್ ಬಾಕ್ಸ್, 1,000 ಹೊಸ ಸೀರೆ, 150 ಬೆಡ್ ಶೀಟ್, ಜಮಕಾನ, ರಗ್ಗು, 100 ಚಾಪೆ, 100 ಟವಲ್, ಪಂಚೆ, 500 ಮಹಿಳೆಯರ ಮತ್ತು ಮಕ್ಕಳ ರಡಿಮೇಡ್ ಉಡುಪುಗಳು, ಜರ್ಕಿನ್ ಗಳು ಸೇರಿದಂತೆ ನಿತ್ಯ ಬಳಕೆ ವಸ್ತುಗಳನ್ನು ವಿತರಿಸಲು ಸಂಗ್ರಹಿಸಿ ಖುದ್ದು ಗ್ರಾಮಸ್ಥರೇ ತೆರಳುತ್ತಿದ್ದಾರೆ.