ಚಿತ್ರದುರ್ಗ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಆರಂಭವಾದಗಿನಿಂದಲೂ ಜಿಲ್ಲಾ ಆರೋಗ್ಯ ಇಲಾಖೆ ಎಡವಟ್ಟುಗಳ ಮೇಲೆ ಎಡವಟ್ಟು ಮಾಡಿಕೊಳ್ಳುವ ಮೂಲಕ ನಿರ್ಲಕ್ಷ್ಯ ತೋರುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಇಲ್ಲಿನ ನೆಹರು ನಗರದ 30 ವರ್ಷದ ವ್ಯಕ್ತಿಗೆ ಸೋಂಕು ತಗುಲಿ ಒಂದು ದಿನ ಕಳೆದರೂ ಸೋಂಕಿತನನ್ನು ಕೋವಿಡ್ ಆಸ್ಪತ್ರೆಗೆ ರವಾನಿಸದೇ ಆರೋಗ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದೆ ಎಂಬ ಆರೋಪಿಸಲಾಗುತ್ತಿದೆ.
ಇನ್ನು ವ್ಯಕ್ತಿಗೆ ಸೋಂಕು ಇರುವುದು ಖಾತ್ರಿಯಾದ ಬಳಿಕ ಮನೆ ಬಳಿ ಸೀಲ್ಡೌನ್ ಮಾಡಿರುವ ಅಧಿಕಾರಿಗಳು, ಸಾರ್ವಜನಿಕರು ಹಾಗೂ ಪತ್ರಕರ್ತರ ಒತ್ತಾಯಕ್ಕೆ ಮಣಿದು ಇಂದು ಬೆಳಗ್ಗೆ ಸೋಂಕಿತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗುತ್ತಿದೆ.
ಸೋಂಕಿತನ ಮನೆಯಲ್ಲಿ ಮಕ್ಕಳು ವೃದ್ಧ ದಂಪತಿ ಇರುವುದರಿಂದ ಇಡೀ ಕುಟುಂಬ ಆತಂಕದಲ್ಲಿದೆ. ಹೀಗಿದ್ದರೂ ಕೂಡ ಸಿಬ್ಬಂದಿ ನಿರ್ಲಕ್ಯ ವಹಿಸಿರುವುದು ಇಡೀ ನೆಹರು ನಗರದ ಜನರಲ್ಲಿ ಆತಂಕ ಮೂಡಲು ಕಾರಣವಾಗಿದೆ.