ETV Bharat / state

ವಲಸೆ ಕಾರ್ಮಿಕರನ್ನು ಸ್ವಂತ ಊರಿಗೆ ತೆರಳಲು ಅನುವು ಮಾಡಿಕೊಟ್ಟ ಚಿತ್ರದುರ್ಗ ಜಿಲ್ಲಾಡಳಿತ - ಕೊರೊನಾ ವೈರಸ್​

ತಮ್ಮ ಊರಿಗೆ ಹೊರಟಿದ್ದ ವಲಸೆ ಕಾರ್ಮಿಕರನ್ನು ಚೆಕ್​ಪೊಸ್ಟ್​ನಲ್ಲಿ ತಡೆ ಹಿಡಿದು ವಸತಿ ಸೌಲಭ್ಯ ಕಲ್ಪಸಿ ಇರಿಸಿಕೊಂಡಿದ್ದ ಜನರನ್ನು ಚಿತ್ರದುರ್ಗ ಜಿಲ್ಲಾಡಳಿತ ಬಿಡುಗಡೆಗೊಳಿಸಿದ್ದು, ತಮ್ಮ ಸ್ವಗ್ರಾಮಕ್ಕೆ ಮರುಳಲು ಅನುವು ಮಾಡಿ ಕೊಟ್ಟಿದೆ.

chitradurga-district-administration-allowed-migrant-workers-to-return-home
ಚಿತ್ರದುರ್ಗ ಜಿಲ್ಲಾಡಳಿತ
author img

By

Published : Apr 25, 2020, 1:46 PM IST

ಚಿತ್ರದುರ್ಗ : ಮುಂಜಾಗ್ರತ ಕ್ರಮವಾಗಿ ಕೊರೊನಾ ವೈರಸ್ ತಡೆಗಟ್ಟಲು ಜಿಲ್ಲಾಡಳಿತ ಸಾಕಷ್ಟು ವಲಸೆ ಕಾರ್ಮಿಕರನ್ನು ಚೆಕ್ ಪೋಸ್ಟ್​​ಗಳಲ್ಲಿಯೇ ತಡೆಹಿಡಿದು ಹಾಸ್ಟೆಲ್​ಗಳಲ್ಲಿ ನೆಲಸಲು ಸೌಲಭ್ಯ ಒದಗಿಸಿತ್ತು. ಸದ್ಯ ವಲಸೆ ಕಾರ್ಮಿಕರು ತಮ್ಮ ಸ್ವಗ್ರಾಮಗಳಿಗೆ ಮರಳಲು ಜಿಲ್ಲಾಡಳಿತ ಅನುಮತಿ ನೀಡಿ ಊರು ಸೇರಿಕೊಳ್ಳಲು ಅನುವು ಮಾಡಿಕೊಟ್ಟಿದೆ.

ವಲಸೆ ಕಾರ್ಮಿಕರನ್ನು ಸ್ವಂತ ಊರಿಗೆ ತೆರಳಲು ಅನುವು ಮಾಡಿಕೊಟ್ಟ ಚಿತ್ರದುರ್ಗ ಜಿಲ್ಲಾಡಳಿತ

ನಗರದ ವಸತಿ‌ ಶಾಲೆಯಲ್ಲಿದ್ದ ಯಾದಗಿರಿ ಜಿಲ್ಲೆಯ ಮೂಲದ 17 ಕಾರ್ಮಿಕರು ಸೇರಿದ್ದಂತೆ, ಚಳ್ಳಕೆರೆಯ ವಸತಿ ಶಾಲೆಯಲ್ಲಿದ್ದ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ 178 ಕಾರ್ಮಿಕರು ತಮ್ಮ ಊರಿಗೆ ತೆರಳಿದರು. ಲಾಕ್ ಡೌನ್ ಘೋಷಣೆ ಬಳಿಕ ಸ್ವಗ್ರಾಮಗಳಿಗೆ ತೆರಳುತ್ತಿದ್ದ ಕಾರ್ಮಿಕರನ್ನು ತಾಲೂಕು ಆಡಳಿತ ವಿವಿಧ ಚೆಕ್ ಪೋಸ್ಟ್​​ಗಳಲ್ಲಿ ತಡೆದು ವಸತಿ ಶಾಲೆಯಲ್ಲಿರಿಸಿತ್ತು.

ಇದೀಗ ಎರಡು ವಾರದ ಬಳಿಕ ಸ್ವಗ್ರಾಮಗಳಿಗೆ ವಲಸೆ ಕಾರ್ಮಿಕರು ಮರಳಿದರು. ನಾಲ್ವರು ಗರ್ಭಿಣಿಯರು, 30ಕ್ಕೂ ಹೆಚ್ಚು ಮಕ್ಕಳು ತಮ್ಮ ಊರುಗಳಿಗೆ ಸಂತಸದಿಂದ ತೆರಳುತ್ತಿರುವ ದೃಶ್ಯ ಕಂಡು ಬಂತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.