ಚಿತ್ರದುರ್ಗ: ಜಮೀನು ವಿಚಾರವಾಗಿ ಸೊಸೆಯಂದಿರ ನಡುವಿನ ಜಗಳ ಸಾವಿನಲ್ಲಿ ಅಂತ್ಯ ಕಂಡ ಘಟನೆ ಚಳ್ಳಕೆರೆ ತಾಲೂಕಿನ ಪಿ.ಓ ಬನವೆಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಂಜ್ಜಮ್ಮ(30) ಸಾವನ್ನಪ್ಪಿರುವ ಮಹಿಳೆ. ಜಮೀನು ಪಾಲು ವಿಚಾರವಾಗಿ ಒಂದೇ ಕುಟುಂಬದ ಮೂವರು ಸೊಸೆಯಂದಿರು ಜಗಳ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ಥಳಿತದಿಂದ ತೀವ್ರವಾಗಿ ಗಾಯಗೊಂಡ ಮಂಜಮ್ಮನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಿಸದೆ ಆಕೆ ಸಾವನ್ನಪ್ಪಿದ್ದಾಳೆ.
ಸುಮಕ್ಕ, ನೀಲಮ್ಮ, ವಿಶಾಲಾಕ್ಷಿ ಎಂಬುವರು ಮಹಿಳೆಯನ್ನು ಥಳಿಸಿದ ಪರಿಣಾಮ ಘಟನೆ ಸಂಭಂವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಸಿಡಿ ಹಿಂದೆ ಮಹಾನ್ ನಾಯಕನ ಕೈವಾಡ ಇದೆ ಎಂದು ನಾನು ಹೇಳಿಲ್ಲ : ಹೆಚ್‌ಡಿಕೆ