ಚಿತ್ರದುರ್ಗ: ಜಿಲ್ಲೆಯ ಕೋವಿಡ್ ಆಸ್ಪತ್ರೆಯ ಆವರಣದಲ್ಲಿ ಹೆಚ್ಚುವರಿಯಾಗಿ ನರ್ಸ್ಗಳನ್ನು ಕಳುಹಿಸುವ ವಿಚಾರವಾಗಿ, ಸ್ಟಾಫ್ ನರ್ಸ್ ಹಾಗೂ ವೈದ್ಯರ ನಡುವೆ ವಾಗ್ವಾದ ನಡೆದಿದೆ.
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಚಿಕಿತ್ಸೆ ನೀಡಲು ಹೆಚ್ಚು ದಾದಿಯರನ್ನು ಕಳುಹಿಸುವಂತೆ ವೈದ್ಯ ಪ್ರಕಾಶ್ ಅವರು ಸ್ಟಾಫ್ ನರ್ಸ್ ನೇತ್ರಾಗೆ ಹೇಳಿದಾಗ ಈ ಮಾತಿನ ಚಕಮಕಿ ಉಂಟಾಗಿದೆ.
ವಾಗ್ವಾದ ಅತಿರೇಕಕ್ಕೆ ತಿರುಗಿದಾಗ ತಲುಪಿದಾಗ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಲಾಕ್ಷ ಮಧ್ಯೆ ಪ್ರವೇಶಿಸಿ ಇಬ್ಬರಿಗೂ ತಿಳಿ ಹೇಳಿದರು.