ಚಿತ್ರದುರ್ಗ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಸೋಂಕಿತರ ಸಂಖ್ಯೆ 500 ದಾಟಿದ್ದರಿಂದ ಸೋಂಕಿತರಿಗೆ ಇನ್ಮುಂದೆ ಮನೆಯಲ್ಲೇ ಚಿಕಿತ್ಸೆ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ.
ಈ ನಡುವೆ ಮನೆಯಲ್ಲೇ ಅರೈಕೆ ಮಾಡುವ ವ್ಯವಸ್ಥೆ ಇದ್ದವರಿಗೆ ಮಾತ್ರ ಈ ವ್ಯವಸ್ಥೆ ಸೀಮಿತವಾಗಿದೆಯೇ? ಎಂಬ ಅನುಮಾನ ಜನರನ್ನು ಕಾಡತೊಡಗಿದೆ. ಈಗಾಗಲೇ ಜಿಲ್ಲೆಯಲ್ಲಿ 24ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳಿಗೆ ಮನೆಯಲ್ಲೇ ಚಿಕಿತ್ಸೆ ನೀಡುತ್ತಿದ್ದು, ಅಕ್ಕಪಕ್ಕದ ಮನೆಯವರು ಆತಂಕದಲ್ಲಿ ಕಾಲ ಕಳೆಯಬೇಕಾಗಿದೆ. ಚಿತ್ರದುರ್ಗ ನಗರದಲ್ಲಿರುವ ಕೋವಿಡ್-19 ಆಸ್ಪತ್ರೆಯಲ್ಲಿ ಸೋಂಕಿತರು ದಾಖಲಾಗಲು ಬಯಸದಿರುವಾಗ ಅಂತಹ ರೋಗಿಗಳಿಗೆ ತಮ್ಮ ಮನೆಯಲ್ಲೇ ಅಗತ್ಯ ಸೌಲಭ್ಯ ಹೊಂದಿರುವಂತಹ ವ್ಯವಸ್ಥೆ ಇದ್ದರೆ ಮಾತ್ರ ಆರೈಕೆ ಮಾಡಿ ಚಿಕಿತ್ಸೆ ನೀಡಲು ಮುಂದಾಗಿದೆ.
ಈ ವ್ಯವಸ್ಥೆ ಶ್ರೀಮಂತರಿಗೆ ಮಾತ್ರ ಅನ್ವಯವಾಗುತ್ತಾ ಎಂಬ ಅನುಮಾನ ಕಾಡತೊಡಗಿದ್ದು, ಮಧ್ಯಮ ವರ್ಗದ ಜನರಿಗೆ ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್ಗಳೇ ಗತಿ ಎಂಬಂತಾಗಿದೆ.
ಈಗಾಗಲೇ ಜಿಲ್ಲೆಯಲ್ಲಿ 24ಕ್ಕೂ ಹೆಚ್ಚು ಸೋಂಕಿತರ ಮನೆ ಪರಿಶೀಲನೆ ನಡೆಸಿ ಅಗತ್ಯ ಸೌಲಭ್ಯ ಇರುವುದನ್ನು ಗಮನಿಸಿ ಹೋಂ ಐಸೊಲೇಷನ್ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ಆದೇಶ ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದ್ದರಿಂದ ಹೆಚ್ಚು ಶ್ರೀಮಂತರಿಗೆ ಈ ಉಪಯೋಗ ದೊರಕಿದೆ.
ಇದರಿಂದ ಎಲ್ಲಾ ಸೌಲಭ್ಯ ಹೊಂದಿರುವರಿಗೆ ಮಾತ್ರ ಈ ಸೌಲಭ್ಯ ಸಿಗುತ್ತಿದೆ, ಇನ್ನು ಸ್ವಂತ ಮನೆ ಹಾಗೂ ಅದಕ್ಕೆ ಬೆಡ್ ರೂಮ್ ಇದ್ದರೂ ಮಧ್ಯಮವರ್ಗದ ಜನರು ಮಾತ್ರ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಬೇಕಾಗಿದೆ. ಜಿಲ್ಲೆಯಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಈ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ ಎಂದು ಡಿಹೆಚ್ಓ ಪಾಲಾಕ್ಷ ತಿಳಿಸಿದ್ದಾರೆ.
ಈಗಾಗಲೇ 24 ಮಂದಿ ಈ ಸೌಲಭ್ಯವನ್ನು ಪಡೆದುಕೊಂಡು ಕೋವಿಡ್ ಆಸ್ಪತ್ರೆಗೆ ತೆರಳದೆ ತಮ್ಮ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಎಲ್ಲಾ ವ್ಯವಸ್ಥೆ ಇದ್ದರೂ ಮಧ್ಯಮವರ್ಗದ ಜನರು ಮಾತ್ರ ಆಸ್ಪತ್ರೆಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.