ಚಿತ್ರದುರ್ಗ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಜಿಲ್ಲೆಯ ಬೆಲಗೂರಿನ ಬಿಂದು ಮಾಧವ ಶರ್ಮಾ ಸ್ವಾಮೀಜಿ (75) ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ತಾಲೂಕಿನ ಬೆಲಗೂರು ಗ್ರಾಮದ ಆಂಜನೇಯ ದೇಗುಲದ ಅವಧೂತ ಬಿಂದು ಮಾಧವ ಶರ್ಮಾ ಸ್ವಾಮೀಜಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.
![Chithradurga belaguru bindu madava sharma swamiji died today](https://etvbharatimages.akamaized.net/etvbharat/prod-images/kn-ctd-04-27-shri-nidhana-av-7204336_27112020133244_2711f_1606464164_512.jpg)
ಸಾಕಷ್ಟು ಭಕ್ತರನ್ನು ಅಗಲಿರುವ ಶ್ರೀಯವರ ದರ್ಶನ ಪಡೆಯಲು ಬೆಲಗೂರಿನಲ್ಲಿ ಭಕ್ತ ಸಮೂಹ ಕಾದು ಕೂತಿದ್ದು, ಶೋಕ ಮಡುಗಟ್ಟಿದೆ. ಪಾರ್ಥಿವ ಶರೀರವನ್ನು ಇಂದು ಗ್ರಾಮಕ್ಕೆ ತರಲಾಗುತ್ತಿದೆ. ಬೆಲಗೂರಿನಲ್ಲೇ ಅಂತ್ಯ ಸಂಸ್ಕಾರ ಪೂರೈಸಲು ಭಕ್ತರು ನಿರ್ಧರಿಸಿದ್ದಾರೆ.