ಚಿತ್ರದುರ್ಗ : ಲಡಾಖ್ನ ಗಾಲ್ವನ್ ಕಣಿವೆಯಲ್ಲಿ ಚೀನಾದ ಅತಿಕ್ರಮಣ ಪ್ರವೇಶ ಹಾಗೂ ಭಾರತೀಯ ಯೋಧರ ಮೇಲೆ ನಡೆಸಿರುವ ದಾಳಿ ಖಂಡಿಸಿ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಭಜರಂಗದಳ ಚಿತ್ರದುರ್ಗ ನಗರ ಘಟಕದ ಕಾರ್ಯಕರ್ತರು ಚೀನಾ ದೇಶದ ನೀತಿಯ ವಿರುದ್ಧ ಪ್ರತಿಭಟಿಸಿದರು. ಚಿತ್ರದುರ್ಗ ನಗರದ ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಕೆಂಪು ಧ್ವಜದ ಮೇಲೆ ಚಪ್ಪಲಿ ಹಾಕುವ ಮೂಲಕ ಆಕ್ರೋಶ ಹೊರ ಹಾಕಿದ್ರು.
ಚೀನಾದ ದಾಳಿಯಿಂದ ಮಡಿದ 20 ಯೋಧರ ಫೋಟೋ ಹಿಡಿದು ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಚೀನಾ ದೇಶದ ಕೆಲ ಮೊಬೈಲ್ ಆ್ಯಪ್ಗಳು, ಸಾಮಗ್ರಿ ಸೇರಿ ಎಲೆಕ್ಟ್ರಾನಿಕ್ ಗೂಡ್ಸ್ಗಳನ್ನು ಬಹಿಷ್ಕರಿಸುವಂತೆ ಜನರಲ್ಲಿ ಮನವಿ ಮಾಡಿದರು.