ಚಿತ್ರದುರ್ಗ: ಹೊಸದುರ್ಗ ತಾಲೂಕಿನ ಕಡವಿಗೆಗೆ ಗ್ರಾಮದಲ್ಲಿ ಒಂದು ವರ್ಷದ ಹೆಣ್ಣು ಚಿರತೆ ಕಳೇಬರ ಪತ್ತೆಯಾಗಿದೆ.
ಕಡವಿಗೆರೆ ಗ್ರಾಮದ ಬಳಿ ಚಿರತೆ ಕಳೇಬರ ನೋಡಿ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆಹಾರಕ್ಕಾಗಿ ಮುಳ್ಳು ಹಂದಿಯ ಜೊತೆಗೆ ಕಾದಾಟ ನಡೆಸಿ ಚಿರತೆ ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ಚಿರತೆ ಕಳೇಬರ ಪತ್ತೆಯಾದ ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಚಿರತೆ ಸಾವಿನ ಮಾಹಿತಿ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.