ಚಿತ್ರದುರ್ಗ: ನಗರದ ರೈಲು ನಿಲ್ದಾಣದಲ್ಲಿ ಆರ್ಪಿಎಫ್ ಎಎಸ್ಐ ಗುರುಸ್ವಾಮಿ ಟೀ ಸ್ಟಾಲ್ ವ್ಯಾಪಾರಿಯಿಂದ ಲಂಚ ಪಡೆಯುತ್ತಿದ್ದ ವೇಳೆ ಸಿಬಿಐ ಬಲೆಗೆ ಬಿದ್ದಿದ್ದಾರೆ.
ಸಿಬಿಐ ಡಿವೈಎಸ್ಪಿ ರಾಜು ನೇತೃತ್ವದ ತಂಡದಿಂದ ದಾಳಿ ನಡೆಸಿ ಟೀ ಸ್ಟಾಲ್ ವ್ಯಾಪಾರಿಯಿಂದ ಲಂಚ ಸ್ವೀಕರಿಸುತ್ತಿದ್ದ ಆರ್ಪಿಎಫ್ ಎಎಸ್ಐ ಗುರುಸ್ವಾಮಿಯನ್ನು ಹಣದ ಸಮೇತ ಅಧಿಕಾರಿಗಳು ಬಂಧಿಸಿದ್ದಾರೆ. ಸದ್ಯ ಗುರುಸ್ವಾಮಿಯನ್ನು ವಿಚಾರಣೆಗೊಳಪಡಿಸಲಾಗಿದೆ.
ಬಂಧಿತ ಅಧಿಕಾರಿ ಗುರುಸ್ವಾಮಿ ಟೀ ಸ್ಟಾಲ್ ಮಾಲೀಕರಿಂದ ಲಂಚದ ಹಣ ಪಡೆಯುತ್ತಿದ್ದರು ಎನ್ನಲಾಗ್ತಿದೆ. ತಕ್ಷಣ ಸಿಬಿಐ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿ ಬಂಧಿಸಿದ್ದಾರೆ.
ಮೊಳಕಾಲ್ಮೂರುನಿಂದ ಚಿತ್ರದುರ್ಗ ರೈಲ್ವೆ ಮಾರ್ಗದಲ್ಲಿ ಬರುವ ಅಂಗಡಿ ಟೆಂಡರ್ ಕರೆದಿದ್ದ ಕಾರಣ, ಟೀ ಸ್ಟಾಲ್ ಮಾಲೀಕನಿಂದ ಗುರುಸ್ವಾಮಿ ಹಣಕ್ಕೆ ಬೇಡಿಕೆ ಇಟ್ಟಿದ್ದನೆಂದು ತಿಳಿದುಬಂದಿದೆ.