ಚಿತ್ರದುರ್ಗ: ಜಾನುವಾರು ಕಳ್ಳತನ ಮಾಡಲು ಬಂದು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದ ಆರೋಪಿಯನ್ನು ಬೆತ್ತಲೆಯಾಗಿ ಕತ್ತೆ ಮೇಲೆ ಕೂರಿಸಿ ಚಿತ್ರ ಹಿಂಸೆ ನೀಡಿ, ಮೆರವಣಿಗೆ ಮಾಡಿದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಿರಿಯೂರು ತಾಲೂಕಿನ ಕೆರೆಮುಂದಲಹಟ್ಟಿಯಲ್ಲಿ ನಿನ್ನೆ ನಡೆದ ಘಟನೆಯ ಕುರಿತು ಈಟಿವಿ ಭಾರತ ವರದಿ ಬಿತ್ತರಿಸಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ತಪ್ಪಿತಸ್ಥರ ವಿರುದ್ಧದ ಕ್ರಮಕ್ಕೆ ಆದೇಶ ನೀಡಿದ್ದರು. ಪರಿಣಾಮ, ಇಂದು 9 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ-ಜಾನುವಾರು ಕಳ್ಳತನ ಆರೋಪ: ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಕತ್ತೆ ಮೇಲೆ ಮೆರವಣಿಗೆ ಮಾಡಿದ ಗ್ರಾಮಸ್ಥರು
ಆರೋಪಿ ಈಶ್ವರನಿಂದ ದೂರು ಪಡೆದಿರುವ ಹಿರಿಯೂರು ಗ್ರಾಮಾಂತರ ಠಾಣೆಯ ಪೊಲೀಸರು ಆರೋಪಿಗೆ ಚಿತ್ರಹಿಂಸೆ ನೀಡಿದ್ದ ಜನರ ವಿರುದ್ಧ ಐಪಿಸಿ ಸೆಕ್ಷನ್ 143, 147, 323, 355, 504, 506, 149 ಅಡಿಯಲ್ಲಿ ಕೇಸು ದಾಖಲಾಗಿದೆ.