ETV Bharat / state

ಡಿವೈಡರ್​ಗೆ ಕಾರು ಡಿಕ್ಕಿ: ಮೂವರು ಪೊಲೀಸ್​ ಕಾನ್ಸ್‌ಟೇಬಲ್‌ಗಳಿಗೆ ಗಂಭೀರ ಗಾಯ

ಇಬ್ಬರು ಕಳ್ಳರು ಹೊಂಚು ಹಾಕಿ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

Car hit the Divider
ಡಿವೈಡರ್​ಗೆ ಡಿಕ್ಕಿ ಹೊಡೆದ ಕಾರು
author img

By

Published : Jan 19, 2023, 1:47 PM IST

Updated : Jan 19, 2023, 3:23 PM IST

ಚಿತ್ರದುರ್ಗ: ಪೊಲೀಸ್​ ಕಾನ್ಸ್‌ಟೇಬಲ್‌ ಪ್ರಯಾಣಿಸುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಸಿದ್ದಾಪುರ ಗ್ರಾಮ ಬಳಿ ಘಟನೆ ನಡೆದಿದ್ದು, ಗಾಯಗೊಂಡ ಪೊಲೀಸರನ್ನು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಠಾಣೆಯ ಮಂಜುನಾಥ್, ಶ್ರೀನಿವಾಸ್, ನರೇಶ್ ಪೊಲೀಸ್ ಪೇದೆಗಳು ಎಂದು ಗುರುತಿಸಲಾಗಿದೆ.

ಲಾರಿ ಓವರ್​ಟೇಕ್ ಮಾಡಲು ಹೋಗಿ ಕಾರಿನ ಚಾಲಕ ನಿಯಂತ್ರಣ ಕಳೆದುಕೊಂಡು ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಈ ಅಪಘಾತ ಸಂಭವಿಸಿದೆ. ಈ ಪೊಲೀಸರು ಬೆಂಗಳೂರಿನಿಂದ ಬಳ್ಳಾರಿಗೆ ಕೇಸ್ ಒಂದನ್ನು ತನಿಖೆ ನಡೆಸಲು ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಇನ್ನು ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ರಾಂಪುರ ಪಿಎಸ್ಐ ಗಾದಿಲಿಂಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಂಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಶ್ವಾಸ್​ ಸಂಬಂಧಿ

ಖಾಸಗಿ ಕಾಲೇಜು ವಿದ್ಯಾರ್ಥಿ ರೈಲಿಗೆ ಸಿಲುಕಿ ಆತ್ಮಹತ್ಯೆ-ಶಿವಮೊಗ್ಗ: ನಗರದ ಖಾಸಗಿ ಕಾಲೇಜು ವಿದ್ಯಾರ್ಥಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವಿಶ್ವಾಸ್ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ವಿಶ್ವಾಸ್ ನಗರದ ಪೇಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದನು. ನಿನ್ನೆ ಸಂಜೆ 7 ಗಂಟೆಯಿಂದ ಮನೆಯಿಂದ ನಾಪತ್ತೆಯಾಗಿದ್ದನು. ಪೋಷಕರು ಸಾಕಷ್ಟು ಹುಡುಕಾಟ ನಡೆಸಿದ ನಂತರ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು‌ ನೀಡಿದ್ದರು.

ಪೋಷಕರು, ಪೊಲೀಸರ ಜೊತೆ ನಿನ್ನೆ ರಾತ್ರಿ‌ ಮೊಬೈಲ್​ ಟವರ್ ಲೊಕೇಷನ್ ಮೂಲಕ ಹುಡುಕಾಟ‌ ನಡೆಸಿದ್ದಾರೆ. ಟವರ್ ಲೊಕೇಷನ್ ವಿನೋಬ ನಗರದ ಪಶು ವೈದ್ಯಕೀಯ ಕಾಲೇಜು ರಸ್ತೆಯ ಬಳಿ ತೋರಿಸಿದೆ. ಟವರ್ ಬಳಿ ವಿಶ್ವಾಸ್ ಬೈಕ್, ಮೊಬೈಲ್ ಬಿಟ್ಟು ಹೋಗಿದ್ದಾನೆ. ಎಲ್ಲರು ಅಲ್ಲೆ ಹುಡುಕಾಟ ನಡೆಸಿದ್ದಾರೆ. ನಂತರ ಅನುಮಾನಗೊಂಡು ಪಕ್ಕದ ರೈಲು ಹಳಿಯ ಬಳಿ ಗಮನಿಸಿದಾಗ ಬೆಳಗಿನ ಜಾವ ವಿಶ್ವಾಸ್ ಮೃತ ದೇಹ ಪತ್ತೆಯಾಗಿದೆ. ನಂತರ ಪೋಷಕರು ಶವವನ್ನು ಗುರುತು ಹಿಡಿದಿದ್ದಾರೆ. ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಶವಾಗಾರಕ್ಕೆ ರವಾನೆ ಮಾಡಿದ್ದಾರೆ.

ತರಗತಿಯಲ್ಲಿ ನಡೆದ ಅನುಮಾನಕ್ಕೆ ಆತ್ಮಹತ್ಯೆಗೆ ಶರಣಾದನೇ ವಿಶ್ವಾಸ್?: ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ತರಗತಿಯಲ್ಲಿ ಉಪನ್ಯಾಕರೊಬ್ಬರು ಇತರೆ ವಿದ್ಯಾರ್ಥಿಗಳ ಮುಂದೆ ಹೊಡೆದಿದ್ದಾರೆ. ಇದರಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಒಂದು ಮೂಲಗಳು ತಿಳಿಸಿವೆ. ಆದರೆ ಆತ ಒಳ್ಳೆಯ ಹುಡುಗ, ಹತ್ತನೆ ತರಗತಿಯಲ್ಲಿ ಶೇ 80 ರಷ್ಟು ಅಂಕ ಗಳಿಸಿದ್ದಾನೆ. ಆದರೆ ಆತ ಯಾಕೆ ಹೀಗೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ನಮಗಿಲ್ಲ. ನಿನ್ನೆ ಮಿಸ್ಸಿಂಗ್ ಆದ ನಂತರ ಹುಡುಕಾಟ ನಡೆಸಿದಾಗ ಶವ ದೂರಕಿದೆ ಎಂದು ಸಂಬಂಧಿ ಮಂಜುನಾಥ್ ನಾಯ್ಕ್ ತಿಳಿಸಿದ್ದಾರೆ.

ಮಾಂಗಲ್ಯಸರ ಕಳೆದುಕೊಂಡ ಮಹಿಳೆ

ಮಹಿಳೆಯ ಸರ ಕದ್ದು ಪರಾರಿಯಾದ ಕಳ್ಳರು- ದೊಡ್ಡಬಳ್ಳಾಪುರ: ಮನೆ ಮುಂದೆ ರಂಗೋಲಿ ಹಾಕುತ್ತಿದ್ದ ಮಹಿಳೆಯನ್ನು ಟಾರ್ಗೆಟ್ ಮಾಡಿದ ಸರಗಳ್ಳರು, ಆಕೆ ಕಸದ ತೊಟ್ಟಿಗೆ ಕಸ ಹಾಕಲು ಹೋದಾಗ ಬೈಕ್​ನಲ್ಲಿ ಬಂದ ಸರಗಳ್ಳರು 55 ಗ್ರಾಂ ತೂಕದ ಮಾಂಗಲ್ಯ ಸರ ಕಿತ್ಕೊಂಡ್ ಪರಾರಿಯಾಗಿದ್ದಾರೆ. ದೊಡ್ಡಬಳ್ಳಾಪುರ ನಗರದ ರೋಜಿಪುರದ ಮುತ್ಯಾಲಮ್ಮ ಪಾರ್ಕ್ ಬಳಿ ಇಂದು ಬೆಳಗ್ಗೆ 7.30ರ ಸಮಯದಲ್ಲಿ ಘಟನೆ ನಡೆದಿದೆ.

ಬೈಕ್​ನಲ್ಲಿ ಬಂದಿದ್ದ ಸರಗಳ್ಳರು ಸ್ಮಿತಾ ಎಂಬುವರ ಮಾಂಗಲ್ಯಸರವನ್ನು ಕಿತ್ತುಕೊಂಡು ಕ್ಷಣದಲ್ಲಿ ಪರಾರಿಯಾಗಿದ್ದಾರೆ. ಸ್ಮಿತಾ ಅವರು ಇಂದು ಬೆಳಗ್ಗೆ ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ವೇಳೆ ಪಾರ್ಕ್ ಬಳಿ ಬೈಕ್​ನಲ್ಲಿ ಇಬ್ಬರು ಓಡಾಡುತ್ತಿದ್ದರು. ಸ್ಮಿತಾ ಅವರು ಬೈಕ್ ಸವಾರರ ಬಗ್ಗೆ ತಲೆಕೆಡಿಸಿಕೊಳ್ಳದೆ, ತಮ್ಮ ಪಾಡಿಗೆ ರಂಗೋಲಿ ಹಾಕುವಲ್ಲಿ ಮಗ್ನರಾಗಿದ್ದಾರೆ. ಆದರೆ ಸರಗಳ್ಳರು ಆಕೆಯ ಸರವನ್ನು ಎಗರಿಸುವ ಸಂಚು ರೂಪಿಸಿದ್ದರು.

ರಂಗೋಲಿ ಹಾಕಿದ ನಂತರ ಮನೆಯ ಪಕ್ಕದಲ್ಲಿಯೇ ಇದ್ದ ಕಸದ ತೊಟ್ಟಿಗೆ ಕಸವನ್ನು ಹಾಕಲು ಸ್ಮಿತಾ ತೆರಳಿದ್ದಾರೆ. ಈ ವೇಳೆ ಬೈಕ್​ನಲ್ಲಿ ವೇಗವಾಗಿ ಬಂದ ಸರಗಳ್ಳರು ಆಕೆಯ ಕೊರಳಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸುಮಾರು 55 ಗ್ರಾಂ ತೂಕದ 3 ಲಕ್ಷ ಮೌಲ್ಯದ ಮಾಂಗಲ್ಯಸರ ಸರಗಳ್ಳರ ಪಾಲಾಗಿದೆ. ಸರಗಳ್ಳರಿಬ್ಬರು ಹೆಲ್ಮೆಟ್ ಧರಿಸಿದ್ದರಿಂದ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಮುಂಬೈ-ಗೋವಾ ಹೆದ್ದಾರಿಯಲ್ಲಿ ಟ್ರಕ್‌-ವ್ಯಾನ್‌ ಅಪಘಾತ; ಮಗು ಸೇರಿ 9 ಮಂದಿ ಸಾವು

Last Updated : Jan 19, 2023, 3:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.