ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಲೋಕಸಭಾ ಚುನಾವಣೆ ಹತ್ತಿರ ಸಮೀಪಿಸುತ್ತಿದ್ದಂತೆ ಸಾಕಾಷ್ಟು ಬೆಳವಣಿಗಳಾಗುತ್ತಿವೆ. ಇದೀಗ ಯಾವ ಅಭ್ಯರ್ಥಿ ಸದಾಶಿವ ಆಯೋಗದ ವರದಿ ವಿರುದ್ಧವಾಗಿ ನಿಲ್ಲುತ್ತಾರೋ ಅವರಿಗೆ ಭೋವಿ ಸಮುದಾಯ ಬೆಂಬಲಿಸುತ್ತದೆ ಎಂಬ ಹೇಳಿಕೆಯನ್ನು ಭೋವಿ ಸಮುದಾಯದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ನೀಡಿದ್ದಾರೆ.
ಹೌದು, ಬಿಜೆಪಿ ಅಭ್ಯರ್ಥಿ ಎ.ನಾರಾಯಣ ಸ್ವಾಮಿಯವರಿಗೆ ಒಂದೆಡೆ ಭೋವಿ ಸಮುದಾಯ ಮತ ಹಾಕುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದರೆ, ಇತ್ತ ಮಾದಿಗ ಸಮುದಾಯ ಪರವಾಗಿ ನಿಲ್ಲಲು ಮುಂದಾಗಿದೆ. ಆದಿ ಕರ್ನಾಟಕ ಮಾದಿಗ ಮಹಾಸಭಾ ಸಂಘಟನೆ ಎ. ನಾರಾಯಣ ಸ್ವಾಮಿಯವರ ಬೆಂಬಲಕ್ಕೆ ನಿಂತಿದ್ದು, ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಅದಲ್ಲದೇ ಯಾವ ಅಭ್ಯರ್ಥಿ ಸದಾಶಿವ ಆಯೋಗದ ವರದಿ ವಿರುದ್ಧವಾಗಿ ನಿಲ್ಲುತ್ತಾರೋ ಅಂತಹವರಿಗೆ ಭೋವಿ ಸಮುದಾಯದಿಂದ ಬೆಂಬಲಿಸುತ್ತೇವೆ ಎಂದು ಭೋವಿ ಸಮುದಾಯದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿಕೆ ನೀಡಿದ ಬೆನ್ನಲ್ಲೇ ಮಹತ್ತರವಾದ ಬೆಳವಣಿಗೆ ಆಗಿದೆ.
ಸದ್ಯ ಮಾದಿಗ ಸಮುದಾಯ ಇದೀಗ ಬಿಜೆಪಿ ಅಭ್ಯರ್ಥಿ ಎ.ನಾರಾಯಣ ಸ್ವಾಮಿಯವರಿಗೆ ಬೆಂಬಲಿಸುತ್ತೇವೆ ಎಂದು ಘೋಷಣೆ ಮಾಡಿದೆ. ಚಿತ್ರದುರ್ಗದಲ್ಲಿ ಸದಾಶಿವ ಆಯೋಗದ ಪರ ವಿರೋಧದ ಲೆಕ್ಕಚಾರ ಏರ್ಪಟ್ಟಿದ್ದು, ಇದು ಲೋಕಸಭಾ ಚುನಾವಣೆಯಲ್ಲಿ ಪರಿಣಾಮ ಬೀರಲಿದೆ. ಇತ್ತ ಸದಾಶಿವ ಆಯೋಗದ ವರದಿಯನ್ನು ವಿರೋಧಿಸುವ ಭೋವಿ ಹಾಗೂ ಲಬಾಂಣಿ ಸಮಾಜ ಸೇರಿದಂತೆ 99 ತಳ ಸಮುದಾಯ ಬಿಜೆಪಿ ಅಭ್ಯರ್ಥಿ ಎ. ನಾರಾಯಣ ಸ್ವಾಮಿ ವಿರುದ್ಧ ಮತ ಚಲಾಯಿಸಲಿದೆ ಎನ್ನಲಾಗಿದ್ದು, ಮಾದಿಗ ಸಮಾಜ ಮಾತ್ರ ಎ.ನಾರಾಯಣ ಸ್ವಾಮಿಗೆ ಬೆಂಬಲ ಸೂಚಿಸುವ ಮೂಲಕ ಚುನಾವಣೆಯಲ್ಲಿ ಗೆಲ್ಲಿಸುವ ಮಾತುಗಳನ್ನಾಡಿದೆ.