ETV Bharat / state

ನಕಲಿ ಕೀ ಬಳಸಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ - ಎಸ್‌ಪಿ ಜಿ‌.ರಾಧಿಕಾ

ನಕಲಿ ಕೀ ಬಳಸಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದ್ದು, ಆರೋಪಿಯಿಂದ 2.70 ಲಕ್ಷ ರೂ. ಮೌಲ್ಯದ 10 ಬೈಕ್​ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ಜಿ‌.ರಾಧಿಕಾ ತಿಳಿಸಿದ್ದಾರೆ.

bike theft arrested in chitradurga
ನಕಲಿ ಕೀ ಬಳಸಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ
author img

By

Published : Dec 9, 2020, 4:50 PM IST

ಚಿತ್ರದುರ್ಗ: ಕಳೆದ ಎರಡು ವರ್ಷಗಳಿಂದ ನಕಲಿ ಕೀ ಬಳಸಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಜಿ‌.ರಾಧಿಕಾ ತಿಳಿಸಿದ್ದಾರೆ.

ನಕಲಿ ಕೀ ಬಳಸಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ

ಮಾಧ್ಯಮಗಳೊಂದಿಗೆ ಮಾತಾನಾಡಿದ ಎಸ್​ಪಿ, ನಕಲಿ ಕೀ ಬಳಸಿ ಬೈಕ್ ಕಳ್ಳತನ ಮಾಡುತ್ತಿದ್ದ ಹರಿಹರ ಮೂಲದ ಕಡೆಮನೆ ಕಿರಣ್ ಎಂಬಾತನನ್ನು ಬಂಧಿಸಲಾಗಿದೆ. ಈತ ಕಳೆದ ಎರಡು ವರ್ಷಗಳಿಂದ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದು, ಈ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿ ಬಂಧನಕ್ಕಾಗಿ ಎಎಸ್‌ಪಿ ಮಾಹಾನಿಂಗ ನಂದಗಾವಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು, ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ 2.70 ಲಕ್ಷ ರೂ. ಮೌಲ್ಯದ 10 ಬೈಕ್​ಗಳನ್ನು ವಶಕ್ಕೆ ಪಡೆಯಲಾಗಿದ್ದು, ಈ ಪೈಕಿ ನಾಲ್ಕು ದಾವಣಗೆರೆ ಜಿಲ್ಲೆಗೆ ಸೇರಿದ್ದಾಗಿವೆ.

ಇದನ್ನೂ ಓದಿ: ಇಂದೇ ಗೋಹತ್ಯೆ ನಿಷೇಧ ವಿಧೇಯಕ ಮಂಡನೆ: ಸಚಿವ ಪ್ರಭು ಚೌವ್ಹಾಣ್​​

ಆರೋಪಿ ಕಿರಣ್, ಬೈಕ್​​ ಕಳವು ಮಾಡಿದ ನಂತರ ಜನರ ಬಳಿ ಹೋಗಿ ಈ ಬೈಕ್ ನನ್ನದೇ. ಮನೆಯವರಿಗೆ ಹುಷಾರಿಲ್ಲ. ಹಾಗಾಗಿ ಹಣದ ಅವಶ್ಯಕತೆಯಿದೆ ಎಂದು ಬೈಕ್ ಮಾರಿ ಬಳಿಕ ಮೊಬೈಲ್​​ ಸ್ವಿಚ್​ ಆಫ್​​ ಮಾಡಿಕೊಳ್ಳುತ್ತಿದ್ದ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.