ETV Bharat / state

ಕಾಂಗ್ರೆಸ್ 'ಭಾಗ್ಯ'ಗಳ ದೌರ್ಭಾಗ್ಯದ ಆಡಳಿತ ನಡೆಸಿದೆ.. ಗೃಹ ಸಚಿವ ಬೊಮ್ಮಾಯಿ - Minister Bommai barrage against Siddaramaiah

ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಕುಸಿದಿದೆ. ಎರಡು ಆಶ್ರಯ ಕೋಲುಗಳು ಒಂದೊಂದು ದಿಕ್ಕಿನಲ್ಲಿ ನಿಂತಿವೆ. ಕಾಂಗ್ರೆಸ್ ಒಂಟಿಗಾಲಲ್ಲಿ ನಿಂತಿದೆ. ಡಿಕೆಶಿ, ಸಿದ್ದರಾಮಯ್ಯ ಬೇರೆ ಬೇರೆ ದಿಕ್ಕಿನಲ್ಲಿದ್ದಾರೆ. ಪಕ್ಷ ಅದ್ಯಾವಾಗ ಕುಸಿದು ಬೀಳುತ್ತೋ ಗೊತ್ತಿಲ್ಲ..

Basavaraj Bommai
ಗೃಹ ಸಚಿವ ಬಸವರಾಜ್ ಬೊಮ್ಮಾಯಿ
author img

By

Published : Jan 12, 2021, 7:23 PM IST

ಚಿತ್ರದುರ್ಗ : ಆಡಳಿತದ ಅವಧಿಯಲ್ಲಿ ಭಾಗ್ಯಗಳ ದೌರ್ಭಾಗ್ಯ ನೀಡಿರುವುದೇ ಕಾಂಗ್ರೆಸ್ ಸರ್ಕಾರದ ಕೊಡುಗೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ನಡೆದ ಜನಸೇವಕ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಕುಡಿಯುವ ನೀರಿನ ಘಟಕ, ಗ್ರಾಮ ವಿಕಾಸ ಯೋಜನೆಗಳು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ವಿಫಲಗೊಂಡಿವೆ.

ಯೋಜನೆಗಳು ಘೋಷಣೆಗಳಿಗೆ ಮಾತ್ರ ಸೀಮಿತವಾಗಿದ್ದವು ಎಂದು ಆರೋಪಿಸಿದರು. ರಾಜ್ಯದಲ್ಲಿ ಬಿಎಸ್‌ವೈ ಅಧಿಕಾರಕ್ಕೆ ಬಂದ ಬಳಿಕ ಗ್ರಾಮ ವಿಕಾಸಕ್ಕೆ ಕ್ರಮ ಕೈಗೊಳ್ಳಲಾಯಿತು ಎಂದರು.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ..

ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಕುಸಿದಿದೆ. ಎರಡು ಆಶ್ರಯ ಕೋಲುಗಳು ಒಂದೊಂದು ದಿಕ್ಕಿನಲ್ಲಿ ನಿಂತಿವೆ. ಕಾಂಗ್ರೆಸ್ ಒಂಟಿಗಾಲಲ್ಲಿ ನಿಂತಿದೆ. ಡಿಕೆಶಿ, ಸಿದ್ದರಾಮಯ್ಯ ಬೇರೆ ಬೇರೆ ದಿಕ್ಕಿನಲ್ಲಿದ್ದಾರೆ. ಪಕ್ಷ ಅದ್ಯಾವಾಗ ಕುಸಿದು ಬೀಳುತ್ತೋ ಗೊತ್ತಿಲ್ಲ ಎಂದರು.

ಓದಿ: 40 ವರ್ಷ ಸ್ವಾಭಿಮಾನದ ರಾಜಕಾರಣ ಮಾಡಿರುವೆ, ಯಾರಿಗೂ ತಲೆ ಬಾಗಿಲ್ಲ: ಸಿದ್ದರಾಮಯ್ಯ

ಮುಂದಿನ 2 ವರ್ಷದಲ್ಲಿ ಭದ್ರಾ ಯೋಜನೆ ಪೂರ್ಣಗೊಳಿಸುತ್ತೇವೆ. ಭದ್ರಾ ಯೋಜನೆಯಿಂದ ಮಧ್ಯ ಕರ್ನಾಟಕದ ಚಿತ್ರದುರ್ಗದಿಂದ ತುಮಕೂರಿಗೆ ನೀರು ಹರಿಯುತ್ತೆ. ಭದ್ರಾ ಮೇಲ್ದಂಡೆ ಯೋಜನೆ ನಮ್ಮ ಸರ್ಕಾರದ ಅಧಿಕಾರವಧಿಯಲ್ಲಿ ಜಾರಿಗೆ ಬಂದಿದೆ ಎಂದು ತಿಳಿಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.