ETV Bharat / state

ಡಾ ಜಿ ಪರಮೇಶ್ವರ್​ ಅವರನ್ನು ಮುಖ್ಯಮಂತ್ರಿ ಮಾಡಿ: ಬಸವ ನಾಗಿದೇವ ಸ್ವಾಮೀಜಿ ಆಗ್ರಹ

ಡಾ.ಜಿ ಪರಮೇಶ್ವರ್​ ಸಿಎಂ ಸ್ಥಾನಕ್ಕೆ ಅರ್ಹವಾದ ವ್ಯಕ್ತಿಯಾಗಿದ್ದಾರೆ ಎಂದು ಶ್ರೀ ಬವಸ ನಾಗಿದೇವ ಸ್ವಾಮೀಜಿ ಹೇಳಿದರು.

Basava Nagideva Swamiji demanded for make Parameshwara become Chief Minister
ಡಾ.ಜಿ.ಪರಮೇಶ್ವರ್​ ಅವರನ್ನು ಮುಖ್ಯಮಂತ್ರಿ ಮಾಡಿ: ಬಸವ ನಾಗಿದೇವ ಸ್ವಾಮೀಜಿ ಆಗ್ರಹ
author img

By

Published : May 15, 2023, 9:01 PM IST

ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರದಲ್ಲಿ ಪರಿಶಿಷ್ಟರನ್ನು ಮುಖ್ಯಮಂತ್ರಿ ಮಾಡುವಂತೆ ಛಲವಾದಿ ಗುರುಪೀಠದ ಶ್ರೀ ಬವಸ ನಾಗಿದೇವ ಸ್ವಾಮೀಜಿ ಕೆಪಿಸಿಸಿ ಮತ್ತು ಎಐಸಿಸಿ ಅಧ್ಯಕ್ಷರು ಹಾಗೂ ಪಕ್ಷದ ಮುಖಂಡರನ್ನು ಆಗ್ರಹಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಇದುವರೆಗೂ ರಾಜ್ಯದಲ್ಲಿ ಪರಿಶಿಷ್ಟ ಜನಾಂಗದ ಯಾರೂ ಸಹ ಮುಖ್ಯಮಂತ್ರಿಗಳಾಗಿಲ್ಲ. ಇದುವರೆವಿಗೂ ದಲಿತ ಮುಖ್ಯಮಂತ್ರಿ ಎಂಬ ಕೂಗು ಕೇಳಿ ಬರುತ್ತಿತ್ತು. ಈಗ ಪರಿಶಿಷ್ಟರ ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ನಾವು ಒತ್ತಾಯ ಮಾಡುತ್ತಿದ್ದೇವೆ ಎಂದ ಶ್ರೀಗಳು, ಡಾ. ಜಿ. ಪರಮೇಶ್ವರ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕಿದೆ ಎಂದರು.

ಡಾ. ಜಿ. ಪರಮೇಶ್ವರ್ ಪಕ್ಷಕ್ಕಾಗಿ ತಮ್ಮ ಜೀವವನ್ನು ಸವಿಸಿದ್ದಾರೆ. ಪಕ್ಷಕ್ಕಾಗಿ ಅವಿರತ ಶ್ರಮವಹಿಸಿ ದುಡಿದಿದ್ದಾರೆ. ಅಲ್ಲದೆ ಈ ಚುನಾವಣೆಯ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿ ಉತ್ತಮವಾದ ಕೆಲಸ ಮಾಡಿದ್ದಾರೆ. ಈ ಪ್ರಣಾಳಿಕೆಯಿಂದ ಜನತೆ ಹೆಚ್ಚಿನ ಮತವನ್ನು ನೀಡಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದಿದೆ ಎಂದು ಹೇಳಿದರು. ಈಗ ಚುನಾಯಿತರಾಗಿರುವವರಲ್ಲಿ ಬಲಗೈ ಸಮುದಾಯದಲ್ಲಿ ಪರಮೇಶ್ವರ್​ ಅವರು ಇದ್ದಾರೆ. ಸಿಎಂ ಸ್ಥಾನಕ್ಕೆ ಅರ್ಹವಾದ ವ್ಯಕ್ತಿಯಾಗಿದ್ದಾರೆ. ಇದುವರೆಗೂ ಈ ಪದವಿಯಿಂದ ವಂಚಿತರಾಗಿದ್ದಾರೆ. ಡಾ. ಜಿ. ಪರಮೇಶ್ವರ್ ಉತ್ತಮ ವ್ಯಕಿತ್ವ ಹೊಂದಿದ ರಾಜಕಾರಣಿಯಾಗಿದ್ದಾರೆ. ಇವರು ಸಿಎಂ ಆದರೆ ಉತ್ತಮ ಆಡಳಿತ ನೀಡುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದರು.

ಈ ಕುರಿತು ಎಐಸಿಸಿಗೆ ಮೇಲ್ ಮೂಲಕ ನಮ್ಮ ಮನವಿಯನ್ನು ಸಲ್ಲಿಸಲಾಗುವುದು. ಅವರು ಸಿಎಂ ಮಾಡುವಲ್ಲಿ ಮಠದಿಂದ ಯಾವುದೇ ಹೋರಾಟ ಇರುವುದಿಲ್ಲ. ಮಠದ ಭಕ್ತರು ಏನಾದರೂ ಹೋರಾಟವನ್ನು ಹಮ್ಮಿಕೊಂಡರೆ ಅದಕ್ಕೆ ಬೆಂಬಲ ನೀಡುವುದಾಗಿ ಬಸವ ನಾಗಿದೇವ ಶ್ರೀಗಳು ತಿಳಿಸಿದರು.

ಸಮುದಾಯದ ಮುಖಂಡರು ಹಾಗೂ ನಗರಸಭೆಯ ಮಾಜಿ ಅಧ್ಯಕ್ಷರಾದ ನಿರಂಜನ ಮೂರ್ತಿ ಮಾತನಾಡಿ, ಚುನಾವಣೆ ಮತ್ತು ಮಂತ್ರಿ ಸ್ಥಾನ ನೀಡುವಾಗ ಜಾತಿ ಆಧಾರದ ಮೇಲೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಪರಿಶಿಷ್ಟರಿಗೆ ಈ ಬಾರಿ ಮುಖ್ಯಮಂತ್ರಿ ಸ್ಥಾನವನ್ನು ನೀಡುವಂತೆ ಆಗ್ರಹಿಸಿದ್ದು, ಡಿಕೆಶಿ ಮತ್ತು ಸಿದ್ದರಾಮಯ್ಯ ರವರಲ್ಲಿ ಯಾರೇ ಮುಖ್ಯಮಂತ್ರಿಗಳಾದರೂ ಸಹ ಅಭ್ಯಂತರ ಇಲ್ಲ. ಅದರೂ ಸಹ ಪರಿಶಿಷ್ಟರಿಗೆ ನೀಡುವಂತೆ ಪ್ರಸ್ತಾಪ ಬಂದಾಗ ಪರಮೇಶ್ವರ್​ ಅವರನ್ನು ಆಯ್ಕೆ ಮಾಡುವಂತೆ ಅಧ್ಯಕ್ಷರಲ್ಲಿ ಮನವಿ ಮಾಡಿದರು. ಇನ್ನು ಮಾಧ್ಯಮಗೋಷ್ಟಿಯಲ್ಲಿ ನಿರಂಜನ, ಅರುಣ್ ಕುಮಾರ್ ಉಪಸ್ಥಿತರಿದ್ದರು.

ಇದನ್ನೂ ಓದಿ:ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಡಿಸಿಎಂ ಸ್ಥಾನ ನೀಡಬೇಕು: ಮಲ್ಲಿಕಾರ್ಜುನ ಶ್ರೀಗಳ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.