ಚಿತ್ರದುರ್ಗ: ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಸೈಕಲ್ ಮೂಲಕ ನಗರದಲ್ಲಿ ಸಂಚಾರ ನಡೆಸಿ ಕೊರೊನಾ ಕುರಿತು ಬಗ್ಗೆ ಜನ ಜಾಗೃತಿ ಮೂಡಿಸಿದ್ದಾರೆ.
ಸೈಕಲ್ ಏರಿ ನಗರ ಪ್ರದೇಶದಲ್ಲಿ ಸಂಚರಿಸಿದ ಅವರು, ನಗರದ ವಿವಿಧ ಬೀದಿಗಳಲ್ಲಿ ಸಂಚರಿಸಿ ಕೆಲವೆಡೆ ದಿಢೀರನೆ ಭೇಟಿ ನೀಡಿ ಕೆಲ ವ್ಯಾಪಾರಿಗಳಿಗೆ ಶಾಕ್ ನೀಡಿದರು. ಈ ವೇಳೆ ವ್ಯಾಪಾರಿಗಳಿಗೆ ಅಂತರ ಕಾಪಾಡುವಂತೆ ವಾರ್ನಿಂಗ್ ಮಾಡಿದರು.
ಇನ್ನು ಜನ ಸಾಮಾನ್ಯರಿಗೆ ಲಾಕ್ಡೌನ್ ನಿಯಮ ಸಡಿಲಿಕೆ ಬಗ್ಗೆ ಪಾಠ ಮಾಡಿದರು. ಇತಂಹ ಕಠಿಣ ಪರಿಸ್ಥಿತಿಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ವ್ಯಾಪಾರಸ್ಥರಿಗೆ ಕ್ಲಾಸ್ ತೆಗೆದುಕೊಂಡರು.