ಚಿತ್ರುದುರ್ಗ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದವರ ಮೇಲೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ನಗರಸಭೆ ಸದಸ್ಯ ಸೇರಿದಂತೆ ನಾಲ್ವರನ್ನ ಬಂಧಿಸಿರುವ ಘಟನೆ ಹಿರಿಯೂರು ನಗರದಲ್ಲಿ ನಡೆದಿದೆ.
ನಗರಸಭೆ ಸದಸ್ಯ ಜಗದೀಶ್, ಮಾರುತಿ, ಕಿರಣ್, ರವಿ ಅಲಿಯಾಸ್ ಉಂಡೆ ರವಿ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ ಸುಮಾರು 1 ಲಕ್ಷಕ್ಕೂ ಹೆಚ್ಚು ನಗದು ಮತ್ತು 10 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಶನಿವಾರ ರಾತ್ರಿ ನಡೆದ ಪಂದ್ಯಕ್ಕೆ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ.
ಹಿರಿಯೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕಳೆದ ತಿಂಗಳಷ್ಟೇ ನಗರಸಭೆಯ ಉಪಚುನಾವಣೆಯಲ್ಲಿ 15ನೇ ವಾರ್ಡ್ನಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಗದೀಶ್ 548 ಮತಗಳಿಂದ ಗೆಲುವು ಕಂಡಿದ್ದರು. ಈ ಸದಸ್ಯ ಗೆದ್ದು ತಿಂಗಳು ಕಳೆಯುವುದರೊಳಗೆ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ : ಔಷಧ ಮಳಿಗೆ ಹೊರತುಪಡಿಸಿ ಬೆಂಗಳೂರು ಬಂದ್: ರಸ್ತೆಗಿಳಿಯುವ ಮುನ್ನ ಹುಷಾರು