ಚಿತ್ರದುರ್ಗ: ರಾಹುಲ್ ಗಾಂಧಿ, ನೆಹರು ಕೂಡ ಹಿಂದೂ. ಬಿಜೆಪಿಯವರು ಮಾತ್ರ ಹಿಂದುಗಳಾ? ನಾವೇನು ಹಿಂದುಗಳಲ್ವಾ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಬಿಜೆಪಿಯವರ ವಿರುದ್ಧ ಕೆಂಡಕಾರಿದ್ದಾರೆ.
ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಕೈ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರದ್ದು ದೊಡ್ಡ ಕುಟುಂಬ. ರಾಹುಲ್ ಗಾಂಧಿ ಯಾವ ಲೋಕಸಭಾ ಕ್ಷೇತ್ರದಲ್ಲೂ ಸ್ಪರ್ಧಿಸಿದ್ರೂ ಗೆಲ್ತಾರೆ. ನಾವು ಕೂಡ ಕರ್ನಾಟಕದಿಂದ ಸ್ಪರ್ಧಿಸುವಂತೆ ರಾಹುಲ್ಗೆ ಒತ್ತಾಯ ಮಾಡಿದ್ವಿ ಎಂದಿದ್ದಾರೆ.
ಬಿಜೆಪಿಯವರು ಅಪಹಾಸ್ಯ ಹೇಳಿಕೆ ನೀಡಿ ರೈತರಿಗೆ ಅವಮಾನ ಮಾಡುತ್ತಿದ್ದಾರೆ. ಮೋದಿ ಹದಿನೈದು ಲಕ್ಷ ಹಣ ಜಮೆ ಮಾಡ್ತೀನಿ ಎಂದು ಸುಳ್ಳು ಹೇಳಿದರು. ರಾಜ್ಯದಲ್ಲಿ ಮೋದಿ ಹವಾ ಇಲ್ಲ. ಮೋದಿ ಹವಾ ಬರಿ ಮಾಧ್ಯಮಗಳಲ್ಲಿ ಮಾತ್ರ ಎಂದು ಪ್ರಧಾನಿ ಮೋದಿಗೆ ಟಾಂಗ್ ನೀಡಿದ್ದಾರೆ. ಇತ್ತ ದೇವೇಗೌಡ, ನಿಖಿಲ್ , ಪ್ರಜ್ವಲ್ ಮೂವರು ಜನ ಜೆಡಿಎಸ್ ಅಭ್ಯರ್ಥಿಗಳು ಗೆಲ್ತಾರೆ. ಕೈ ಅಭ್ಯರ್ಥಿಗಳಾದ ಡಿ.ಕೆ.ಸುರೇಶ್ ಮತ್ತು ಕೃಷ್ಣಭೈರೇಗೌಡ ಈಗಾಗಲೇ ಗೆದ್ದಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.