ETV Bharat / state

ಕೋಟೆನಾಡಲ್ಲೂ ಐಎಂಎಂ ಮಾದರಿ ವಂಚನೆ : ವ್ಯಾಪಾರಿ, ಕಾರ್ಮಿಕರಿಗೆ ಕೋಟ್ಯಾಂತರ ರೂ. ದೋಖಾ - undefined

ಆ್ಯಬಿಡೆಂಟ್​ ಹಾಗೂ ಐ ಮಾನಿಟರಿ ಅಡ್ವೈಸರಿ (ಐಎಂಎ) ವಂಚನೆ ಪ್ರಕರಣ ಮಾಸುವ ಮುನ್ನವೇ, ಚಿತ್ರದುರ್ಗದಲ್ಲಿ ಇಂತಹದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಗರಣದ ವಿರುದ್ಧ ನೂರಾರು ಜನ ಬೀದಿಗೆ ಇಳಿದಿದ್ದು, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಪಿಗ್ಮಿ ವಂಚನೆಗೆ ಒಳಗಾದ ಸಂತ್ರಸ್ತೆ
author img

By

Published : Jun 19, 2019, 2:37 AM IST

ಚಿತ್ರದುರ್ಗ: ಪಿಗ್ಮಿ ಮತ್ತು ನಿಶ್ಚಿತ ಠೇವಣಿಯ ಹೆಸರಿನಲ್ಲಿ ಬೀದಿ ಬದಿ ವ್ಯಾಪಾರಿಗಳು, ಗೃಹಣಿಯರು ಹಾಗೂ ಕಾರ್ಮಿಕರಿಂದ ಹಣ ಸಂಗ್ರಹಿಸಿದ್ದ ಗ್ರೇಟ್ ಫೋರ್ಟ್​ ಮೈನಾರಿಟಿಸ್ ಸೌಹಾರ್ದ ಕೋ- ಆಪರೇಟಿವ್ ಲಿಮಿಟೆಡ್​ ಬಾಗಿಲು ಮುಚ್ಚಿದ್ದು, ಠೇವಣಿದಾರರು ಆತಂಕಕ್ಕೆ ಒಳಗಾಗಿದ್ದಾರೆ.

ಆ್ಯಬಿಡೆಂಟ್​ ಹಾಗೂ ಐ ಮಾನಿಟರಿ ಅಡ್ವೈಸರಿ (ಐಎಂಎ) ಸಾವಿರಾರು ಕೋಟಿ ರೂಪಾಯಿ ಹಣ ಜನರಿಂದ ಸಂಗ್ರಹಿಸಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿರುವ ಬೆನ್ನಲ್ಲೇ, ಚಿತ್ರದುರ್ಗದಲ್ಲೂ ಇಂತಹದೇ ಹಗರಣದ ವಿರುದ್ಧ ನೂರಾರು ಜನ ಬೀದಿಗಿಳಿದಿದ್ದಾರೆ. ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದ್ದಾರೆ.

ವಂಚನೆ ಎಸಗಿರುವ ಕಂಪನಿಯ ಆಡಳಿತ ಮಂಡಳಿಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಠೇವಣಿ ಹಣ ಮರಳಿ ಕೊಡಿಸುವಂತೆ ಪೊಲೀಸರನ್ನು ಹೂಡಿಕೆದಾರರು ಆಗ್ರಹಿಸಿದ್ದಾರೆ. ಜೊತೆಗೆ ಸ್ಥಳೀಯ ಶಾಸಕರ ಗಮನಕ್ಕೆ ತಂದು, ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

ಪಿಗ್ಮಿ ವಂಚನೆಗೆ ಒಳಗಾದ ಸಂತ್ರಸ್ತರು

ಕಳೆದ 23 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಗ್ರೇಟ್ ಫೋರ್ಟ್​ ಮೈನಾರಿಟಿಸ್ ಸೌಹಾರ್ದ ಕೋ- ಆಪರೇಟಿವ್ ಲಿಮಿಟೆಡ್ ಎರಡು ತಿಂಗಳ ಹಿಂದೆ ಏಕಾಏಕಿ ಬಾಗಿಲು ಮುಚ್ಚಿದೆ. ಇನ್ನು ಇಲ್ಲಿ ಠೇವಣಿ ಇರಿಸಿದವರಲ್ಲಿ ಬಹುತೇಕರು ಮುಸ್ಲಿಮರು, ತರಕಾರಿ ವ್ಯಾಪಾರಿಗಳು, ಗೃಹಣಿಯರು, ಬೀದಿ ಬದಿ ವ್ಯಾಪಾರಿ, ದಿನಗೂಲಿ ನೌಕರರು ಹಾಗೂ ಕಾರ್ಮಿಕರು ಆಗಿದ್ದಾರೆ.

ಪಿಗ್ನಿ ರೂಪದಲ್ಲಿ ಹಣವನ್ನು ಸ್ವೀಕರಿಸಿದ ಸೊಸೈಟಿಯ ಮುಖ್ಯಸ್ಥರಾದ ಶಕೀಲ್ ಅಹ್ಮದ್, ಜಬೀ ಎಂಬುವವರು ಸುಮಾರು ₹ 8.5 ಕೋಟಿ ವಂಚಿಸಿ ಕಾಲ್ಕಿತ್ತಿದ್ದಾರೆ. ಕಳೆದ ಏಪ್ರಿಲ್ 25ರಂದು ಬೆಳಕಿಗೆ ಬಂದ ಈ ವಂಚನೆ ಜಾಲಕ್ಕೆ 1000ಕ್ಕೂ ಅಧಿಕ ಜನರು ಹಣ ಹೂಡಿಕೆ ಮಾಡಿದ್ದರು ಎಂದು ತಿಳಿದು ಬಂದಿದೆ.

ಏಪ್ರಿಲ್ 25ರಂದು ಮಾಲೀಕರ ವಂಚನೆ ಬಗ್ಗೆ ''ಈಟಿವಿ ಭಾರತ'' ವರದಿ ಪ್ರಸಾರ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದಿತ್ತು.

ಒಟ್ಟಿನಲ್ಲಿ ಈಗ ಠೇವಣಿ ಇರಿಸಿದವರು ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ಹೂಡಿಕೆದಾರರು ಈ ಕುರಿತು ಶಾಸಕ ಜಿ.ಹೆಚ್​. ತಿಪ್ಪಾರೆಡ್ಡಿ ಅವರಿಗೆ ನ್ಯಾಯ ಕೊಡಿಸುವಂತೆ ಅಂಗಲಾಚಿದ್ದಾರೆ.

Intro:ಆ್ಯಬಿಡೆಂಟ್, ಐಎಂಎ ವಂಚನೆ ಪ್ರಕರಣ ಮಾಸುವ ಮುನ್ನ ಕೋಟೆನಾಡಿನಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಿಕೆಗೆ

ಆ್ಯಂಕರ್ :- ರಾಜ್ಯದಲ್ಲಿ ಆ್ಯಬಿಡೆಂಟ್, ಐಎಂಎ ಬಹುಕೋಟಿ ಹಣ ವಂಚನೆ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿವೆ. ಈ ಕಂಪನಿಗಳ ಹಣ ವಂಚನೆಯ ಪ್ರಕರಣ ಮಾಸುವ ಮುನ್ನವೇ ಕೋಟೆನಾಡಿನಲ್ಲಿ ಅದೇ ಮಾದರಿಯ ಮತ್ತೊಂದು ವಂಚನೆಯ ಜಾಲ ಬೆಳಕಿಗೆ ಬಂದಿದೆ. ಪಿಗ್ನಿ ರೂಪದಲ್ಲಿ ಹಣವನ್ನು ಕಟ್ಟಿಸಿಕೊಂಡ ಸೊಸೈಟಿಯ ಎಂಡಿಗಳಿಬ್ಬರು ಕೋಟಿಗಟ್ಟಲೆ ಹಣವನ್ನು ಲಪಾಟಾಯಿಸಿಕೊಂಡು ಪರಾರಿಯಾಗಿದ್ದಾರೆ. ಈ ವಂಚನೆ ಪ್ರಕರಣ ನಡೆದು ಒಂದೆರೆಡು ತಿಂಗಳ ಬಳಿಕ ಎಚ್ಚರಿಗೊಂಡ ಮೋಸಕ್ಕೊಳಗಾದ ಗ್ರಾಹಕರು ಸ್ಥಳೀಯ ಶಾಸಕರ ಬಳಿ ಅಳಲು ತೋಡಿಕೊಂಡು ಕಾನೂನು ಕ್ರಮಕ್ಕೆ ಒತ್ತಾಯಿಸಿದರು.

ಲುಕ್,,,,

ಫ್ಲೋ,,,,

ವಾಯ್ಸ್1: ಬಹುಕೋಟಿ ಹಣ ವಂಚನೆಯಲ್ಲಿ ಸಿಲುಕಿರುವ ಐಎಂಎ ಕಂಪನಿ ಮಾದರಿಯಲ್ಲಿಮತ್ತೊಂದು ಹಣ ವಂಚನೆಯ ಜಾಲ ಬೆಳಕಿಗೆ ಬಂದಿದೆ. ಕೋಟೆನಾಡು ಚಿತ್ರದುರ್ಗದಲ್ಲಿ ಸುಮಾರು 23 ವರ್ಷಗಳಿಂದ ಅಸ್ತಿತ್ವದಲ್ಲಿರುವ ಗ್ರೇಟ್ ಫೋರ್ಟ್ ಮೈನಾರಟಿ ಸೌಹಾರ್ದ ಸಹಕಾರಿ ಬ್ಯಾಂಕ್ ಇದೀಗ ಕಡು ಬಡವರ ಹಣವನ್ನು ನುಂಗಿ ನೀರು ಕುಡಿದಿದೆ. ಪಿಗ್ನಿ ರೂಪದಲ್ಲಿ ಹಣವನ್ನು ಸ್ವೀಕರಿಸಿದ ಸೊಸೈಟಿಯ ಎಂಡಿಗಳಾದ ಶಕೀಲ್ ಅಹ್ಮದ್, ಜಬೀ ಎನ್ನುವರು ಸುಮಾರು 8.5 ಕೋಟಿ ಹಣವನ್ನು ಲಪಾಟಾಯಿಸಿ ಕಲ್ಕಿತ್ತಿದ್ದಾರೆ. ಕಳೆದ ಏಪ್ರಿಲ್ 25ರಂದು ಬೆಳಕಿಗೆ ಬಂದ ಈ ವಂಚನೆ ಜಾಲಕ್ಕೆ 1000 ಕ್ಕಿಂತ ಹೆಚ್ಚು ಜನ್ರು ಹಣ ಹೂಡಿಕೆ ಮಾಡಿದ್ದರು ಎಂದು ತಿಳಿದು ಬಂದಿದೆ. ಇನ್ನೂ ಇದೇ ಏಪ್ರೀಲ್ 25 ಕ್ಕೆ ಮಾಲೀಕನ ವಂಚನೆ ಬಗ್ಗೆ ಈಟಿವಿ ಭಾರತ ವಾಹಿನಿಯಲ್ಲಿ ವರದಿ ಪ್ರಸಾರ ಮಾಡಿ ಸಂಬಂಧಪಟ್ಟವರ ಗಮನ ಸೆಳೆಯಲಾಗಿತ್ತು. ಅದ್ರೇ ಯಾವುದೇ ಪ್ರಯೋಜನ ಆಗಿಲ್ಲ. ಅಸಲಿಗೆ ಈ ಬ್ಯಾಂಕ್ ಶಕೀಲ್ ಅಹಮದ್ ಎಂಬ ವ್ಯಕ್ತಿಗೆ ಸೇರಿದ್ದು, ಬಹುತೇಕ ಮುಸ್ಲೀಂ ಸಮುದಾಯದ ಬಡ ಜನರೇ ಹೆಚ್ಚಾಗಿ ಠೇವಣಿ ಇಟ್ಟಿದ್ದಾರೆ. ಹೆಚ್ಚಿನ ಬಡ್ಡಿಯ ಆಸೆಗಾಗಿ ಹಗಲೂ ರಾತ್ರಿ ಕಷ್ಟ ಪಟ್ಟು ದುಡಿದ ದುಡಿಮೆಯನ್ನು ಗ್ರೇಟ್ ಫೋರ್ಟ್ ಸಹಕಾರಿ ಬ್ಯಾಂಕಿನಲ್ಲಿ ಇರಿಸಿದ ಹಣ ಮಾತ್ರ ವಂಚಕರ ಪಾಲಾಗಿದೆ. ಅಷ್ಟೇ ಅಲ್ಲದೆ ಬೀದಿ ಬದಿ ವ್ಯಾಪಾರಿಗಳು, ಹಣ್ಣು ಮತ್ತು ತರಕಾರಿ ವ್ಯಾಪಾರಿಗಳು ಪಿಗ್ಮಿ ರೂಪದಲ್ಲಿ ಲಕ್ಷಾಂತರ ರೂಪಾಯಿ ಹಣ ಸಂದಾಯ ಮಾಡಿದ್ರು, ಆದ್ರೆ ಗ್ರಾಹರಿಂದ ಹಣವನ್ನು ಸಂಗ್ರಹಿಸಿದ ನಂತರ ಆಡಿಟ್ ನೆಪವೊಡ್ಡಿ ಬ್ಯಾಂಕಿಗೆ ಬೀಗ ಹಾಕಿದ್ದ ಮಾಲೀಕ ಇದೀಗ ಐಎಂಎ ಮಾಲೀಕನ ಮಾದರಿಯಲ್ಲೇ ನಾಪತ್ತೆಯಾಗಿದ್ದಾನೆ. ಹೀಗಾಗಿ ಚಿಂತೆಗೀಡಾದ ಬಡಪಾಯಿ ಜನ್ರು ಸ್ಥಳೀಯ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿಯವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡು ಕಣ್ಣೀರು ಹಾಕಿದ್ದು ಎಂತವರ ಕರಳು ಚುರ್ ಎನ್ನುವಂತೆ ಇತ್ತು.

ಫ್ಲೋ…..

ಬೈಟ್01:- ಶಹನಾಜ್ ಖಾನ್, ಹತ್ತು ಲಕ್ಷ ರೂ. ವಂಚನೆಗೊಳಗಾಗಿರುವ ಮಹಿಳೆ.

ಬೈಟ್2: ಅಲಿಮಾ, ವಂಚನೆಗೊಳಗಾದ ನಿರ್ಗತಿಕ ಮಹಿಳೆ.

ವಾಯ್ಸ್02:- ಹಣ ಕಳೆದುಕೊಂಡಿರುವ ಗ್ರಾಹಕರು ಮನೆ ಕಟ್ಟಲು, ಮಗಳ ಮದುವೆ ಮಾಡಲು, ಮಗನನ್ನು ಓದಿಸುವ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡು ಈ ಬ್ಯಾಂಕನಲ್ಲಿ ಹಣವನ್ನು ಠೇವಣಿ ಮಾಡಲಾಗಿತ್ತು. ಅದ್ರೇ ವಂಚಕ ಶಕೀಲ್ ಮಾತ್ರ ಸುಮಾರು 8.5 ಕೋಟಿ ಹಣವನನ್ನು ದೋಚಿ ಪರಾರಿಯಾಗಿದ್ದಾನೆ. ಇನ್ನೂ
ತಮ್ಮ ಸಮುದಾಯದ ವ್ಯಕ್ತಿಯಿಂದಲೇ ವಂಚನೆಗೊಳಗಾದ ಸುಮಾರು 1000ಕ್ಕೂ ಹೆಚ್ಚು ಗ್ರಾಹಕರು, ಬ್ಯಾಂಕ್ ಮಾಲೀಕ ಶಕೀಲ್ ಅಹಮದ್ ನಾಪತ್ತೆಯಾಗಿರುವ ಕಾರಣ ಆತಂಕಕ್ಕೊಳಗಾಗಿದ್ದಾರೆ. ಶಾಸಕರ ಬಳಿ ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ನಗರ ಪೊಲೀಸ್ ಠಾಣೆ ಸಿಪಿಐ ಫೈಜುಲ್ಲಾ ಅವರನ್ನ ಕರೆಸಿ ಮಾತುಕತೆ ನಡೆಸಿರುವ ಶಾಸಕ ತಿಪ್ಪಾರೆಡ್ಡಿ, ಗ್ರೇಟ್ ಫೋರ್ಟ್ ಸೊಸೈಟಿ ಮಾಲೀಕ ಶಕೀಲ್ ಅಹಮದ್ ನನ್ನ ಹುಡುಕಿ, ಆತನ ಹೆಸರಿನಲ್ಲಿರುವ ಸ್ಥಿರಾಸ್ತಿಯನ್ನು ಪತ್ತೆಮಾಡಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚನೆ ನೀಡಿದ್ದು, ಕಾನೂನು ವ್ಯಾಪ್ತಿಯಲ್ಲಿ ಗ್ರಾಹಕರಿಗೆ ಸೇರಬೇಕಾದ ಹಣವನ್ನು ಹಿಂತಿರುಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದ್ದಾರೆ.

ಫ್ಲೋ,,,,

ಬೈಟ್03:- ಜಿ.ಹೆಚ್.ತಿಪ್ಪಾರೆಡ್ಡಿ, ಶಾಸಕರು, ಚಿತ್ರದುರ್ಗ.

ವಾಯ್ಸ್03:- ಒಟ್ಟಾರೆ ರಾಜ್ಯದಂತ್ಯ ಸಾಕಷ್ಟು ಸದ್ದು ಮಾಡುತ್ತಿರುವ ಐಎಂಎ ಜ್ಯುವೆಲರಿಯ ಬಹುಕೋಟಿ ವಂಚನೆ ಪ್ರಕರಣದ ನಂತರ ಗ್ರೇಟ್ ಫೋರ್ಟ್ ವಂಚನೆ ಜಾಲ ಬೆಳಕಿಗೆ ಬಂದಿದೆ. ಅದೇನೆ ಆಗಲಿ ನಮ್ಮವ ಎಂದು ನಂಬಿ ಹಣವನ್ನು ಹೂಡಿಕೆ ಮಾಡಿದ ಗ್ರಾಹಕರು ಮೋಸ ಹೋಗಿದ್ದಾರೆ. ಹೀಗಾಗಿ ಜನರ ಧಾರ್ಮಿಕ ಭಾವನೆಗಳನ್ನು ದುರುಪಯೋಗ ಪಡಿಸಿಕೊಂಡ ವಂಚಕ ಶಕೀಲ್ ಅಹ್ಮದ್ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಡಿ ನೂರುಲ್ಲಾ ಈಟಿವಿ ಭಾರತ ಚಿತ್ರದುರ್ಗ..

Body:vanchaneConclusion:prakarna

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.