ಚಿತ್ರದುರ್ಗ: ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸುವ ಬಹುತೇಕರು ಸ್ಥಿತಿವಂತರೇ ಆಗಿರುತ್ತಾರೆ. ಸ್ಥಿತಿವಂತರು ಕೋವಿಡ್ ಸಂದರ್ಭದ ಲಾಭ ಪಡೆಯಕೂಡದು. ಬಡವರಿದ್ದರೆ ಪರಿಶೀಲಿಸಿ ವಿಶೇಷ ಪ್ರಕರಣ ಎಂದು ಸಹಾಯ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಕಿವಿಮಾತು ಹೇಳಿದರು.
ಚಿತ್ರದುರ್ಗದದ ಮುರುಘಾ ಮಠದಲ್ಲಿ ಪ್ರತಿಕ್ರಿಯಿಸಿದ ಅವರು, ಒಂದರಿಂದ ಪಿಯುಸಿವರೆಗೆ ಆನ್‌ಲೈನ್ ಶಿಕ್ಷಣ ಸಾಧ್ಯವಿಲ್ಲ. ಪ್ರಾಥಮಿಕ ಶಾಲಾ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನೀಡುವುದು ಅಪಾಯಕಾರಿ. ಕೋವಿಡ್ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಶಾಲೆ ತೆರೆಯಬಾರದು. ಮುಂದೆ ಶನಿವಾರ್ ಫುಲ್ ಟೈಮ್ ಮಾಡಿ ಒಂದು ಶನಿವಾರ ಮಾತ್ರ ರಜೆ ನೀಡಬೇಕೆಂದರು.
ಶಾಲಾ ಸಮಯ ಅರ್ಧ ಗಂಟೆ ಹೆಚ್ಚಿಸಬೇಕು. ದಸರಾ ರಜೆ ರದ್ದು ಮಾಡಬೇಕು. ಜಯಂತಿ ಆಚರಣೆ ದಿನದ ರಜೆಗಳನ್ನು ರದ್ದು ಮಾಡಬೇಕು. ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಗಳು ಎರಡು ಇದ್ದಲ್ಲಿ ಅವುಗಳನ್ನು ನಾಲ್ಕು ಮಾಡಿ ಪರೀಕ್ಷೆ ನಡೆಸಬೇಕು.
ಶಿಕ್ಷಣ ಮಂತ್ರಿಗಳು ಓಡಾಡುತ್ತಾರೆ. ಆದ್ರೆ ಇಲಾಖೆ ಮೇಲೆ ಬೇಜವಾವ್ದಾರಿ ಇದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಯಾರೊಬ್ಬರಿಗೂ ಕಳಕಳಿ ಇಲ್ಲವಾಗಿದೆ. ರಾಜ್ಯ ಸರ್ಕಾರ ನಮ್ಮ ಸಲಹೆ ಸೂಚನೆ ಈವರೆಗೆ ಕೇಳಿಲ್ಲ. ಅಧಿಕಾರಿಗಳು ಮತ್ತು ನಮ್ಮಂತವರನ್ನು ಸೇರಿಸಿ ಸಮಿತಿ ರಚಿಸಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿದರು.