ಚಿತ್ರದುರ್ಗ: ಜನರ ಆರೋಗ್ಯ ಸೇವೆಗಾಗಿ ಇರುವ ಸರ್ಕಾರಿ ಆಂಬ್ಯುಲೆನ್ಸ್ನಲ್ಲಿ ಮದ್ಯ ಸಾಗಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿರುವ ಘಟನೆ ಕೋಟೆ ನಾಡಿನಲ್ಲಿ ನಡೆದಿದೆ.
ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಆಂಬ್ಯುಲೆನ್ಸ್ ಚಾಲಕ ಸುಬಾನ್, ಲ್ಯಾಬ್ ಟೆಕ್ನಿಷಿಯನ್ ಸಂತೋಷ್ ಸೇರಿ ಆಂಬ್ಯುಲೆನ್ಸ್ನಿಂದ ಓಮಿನಿ ವ್ಯಾನ್ಗೆ ಮದ್ಯ ಶಿಫ್ಟ್ ಮಾಡುತ್ತಿದ್ದ ಜೀವನ್, ಗಿರೀಶ್ ಎಂಬುವರನ್ನು ಬಂಧಿಸಲಾಗಿದೆ.
ಆಂಬ್ಯುಲೆನ್ಸ್ನಲ್ಲಿದ್ದ 14 ಬಾಕ್ಸ್ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.