ETV Bharat / state

ಚಿತ್ರದುರ್ಗಕ್ಕೆ ಆಗಮಿಸಿ ಒನಕೆ ಓಬವ್ವ ಜಯಂತಿ ಆಚರಿಸಿದ ನಟ ಶಿವರಾಂ

author img

By

Published : Nov 11, 2021, 8:23 PM IST

ನವೆಂಬರ್​ 11ರಂದು ವೀರವನಿತೆ ಒನಕೆ ಓಬವ್ವ ಜಯಂತಿ (Onake Obavva Jayanthi) ಆಚರಣೆಗೆ ಸರ್ಕಾರ ಆದೇಶ ಹೊರಡಿಸಿದ್ದು ನಟ ಹಾಗೂ ಬಿಜೆಪಿ ಮುಖಂಡ ಶಿವರಾಂ ಚಿತ್ರದುರ್ಗಕ್ಕೆ ಆಗಮಿಸಿ ಓಬವ್ವನ ಪ್ರತಿಮೆಗೆ ಪುಷ್ಪ ಮಾಲಿಕೆ ಸಮರ್ಪಿಸಿ ಹರ್ಷ ವ್ಯಕ್ತಪಡಿಸಿದರು.

actor Shivram celebrates onake obavva jayanthi in chitradurga
ಚಿತ್ರದುರ್ಗದಲ್ಲಿ ಒನಕೆ ಓಬವ್ವ ಜಯಂತಿ ಆಚರಣೆ

ಚಿತ್ರದುರ್ಗ: ದುರ್ಗದ ಕೋಟೆ ರಕ್ಷಣೆ ಮಾಡಿದ ವೀರನಾರಿ ಒನಕೆ ಓಬವ್ವ ಜಯಂತಿಯನ್ನು (Onake Obavva Jayanthi) ಇಂದು ಜಿಲ್ಲೆಯಲ್ಲಿ ಆಚರಣೆ ಮಾಡಲಾಯ್ತು.

ಓಬವ್ವ ಜಯಂತಿ ಘೋಷಣೆ ಮಾಡಬೇಕೆಂದು ಸುಮಾರು ವರ್ಷಗಳಿಂದ ಬೇಡಿಕೆ ಇಟ್ಟಿದ್ದ ಜನರಿಗೆ ಇವತ್ತು ಸಂಭ್ರಮದ ದಿನ. ಯಾಕಂದ್ರೆ ನವೆಂಬರ್ 11ರಂದು ವೀರವನಿತೆ ಒನಕೆ ಓಬವ್ವ ಜಯಂತಿ ಆಚರಿಸಲು ಕರ್ನಾಟಕ ಸರ್ಕಾರ ತೀರ್ಮಾನಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಚರಿಸಲು ಆದೇಶ ಹೊರಡಿಸಿದೆ. ಈ ಆದೇಶ ಹೊರಬಿದ್ದ ಹೊತ್ತಲ್ಲೇ ಇಡೀ ನಾಡಿನ ಹಾಗೂ ದುರ್ಗದ ಓಬವ್ವನ ಅಭಿಮಾನಿಗಳು ಸಂಭ್ರಮಿಸಿದರು. ನಟ ಹಾಗೂ ಬಿಜೆಪಿ ಮುಖಂಡ ಶಿವರಾಂ (BJP Leader Shivaram) ಕೂಡ ಚಿತ್ರದುರ್ಗಕ್ಕೆ ಆಗಮಿಸಿ ಓಬವ್ವ ಅವರಿಗೆ ಪುಷ್ಪ ಮಾಲಿಕೆ ಹಾಕಿ ನಮನ ಸಲ್ಲಿಸಿದರು.

ಇನ್ನು ಪ್ರತಿ ವರ್ಷದಂತೆ ಛಲವಾದಿ ಮಠದ ಬಸವ ನಾಗಿದೇವ ಸ್ವಾಮಿಗಳು ಸೇರಿದಂತೆ ಸಮುದಾಯದವರು ಚಿತ್ರದುರ್ಗದ ನಾಗರಿಕರು ಓಬವ್ವ (Obavva) ಅವರ ಪ್ರತಿಮೆಗೆ ಪುಷ್ಪಮಾಲೆ ಹಾಕಿ ನಮನ ಸಲ್ಲಿಸಿದರು.

ಸ್ಥಳೀಯ ಸಂಸ್ಥೆಯ ಚುನಾವಣೆ ಇರುವುದರಿಂದ ಸರ್ಕಾರದ ಪರವಾಗಿ ಚುನಾವಣೆ ಮುಗಿದ ನಂತರ ಜಯಂತಿ ಮಾಡಲಾಗುವುದು ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತ ಮನ್ನಕೇರಿ ತಿಳಿಸಿದರು.

ಇದನ್ನೂ ಓದಿ:ಒನಕೆ ಓಬವ್ವ ಸ್ಮಾರಕ ನಿರ್ಮಾಣಕ್ಕೆ ಮುಂದಾದ ಸರ್ಕಾರ: ವೆಚ್ಚ, ನೀಲನಕಾಶೆಗೆ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.