ಚಿತ್ರದುರ್ಗ: ಜಿಲ್ಲಾಸ್ಪತ್ರೆಯಲ್ಲಿ ಇಂದು ಆರೋಗ್ಯ ಸಚಿವ ಶ್ರೀ ರಾಮುಲು ವಾಸ್ತವ್ಯ ಹೂಡಲಿದ್ದು, ಅವರಿಗಾಗಿ ಎಸಿ, ಫ್ಯಾನ್ ಸ್ವಚ್ಛತೆಯಿಂದ ಕೂಡಿದ ಕೊಠಡಿಯನ್ನು ಸಿದ್ಧತೆ ನಡೆಸಲಾಗಿದೆ.
ಈಗಾಗಲೇ ನೂತನ ಸಚಿವ ಶ್ರೀರಾಮುಲು ರವರ ವಾಸ್ತವ್ಯಕ್ಕೆ ವಿಐಪಿ ವಾರ್ಡ್ ಸಿದ್ಧತೆ ಮಾಡಲಾಗಿದ್ದು, ಸಚಿವರ ಆಗಮನಕ್ಕೆ ಇಡೀ ಆಸ್ಪತ್ರೆ ಸ್ವಚ್ಛತೆಯಿಂದ ಜಗಮಗಿಸುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದ್ದು, ಆರೋಗ್ಯ ಸಚಿವರ ವಾಸ್ತವ್ಯ ಹಿನ್ನೆಲೆ ಜಿಲ್ಲಾಸ್ಪತ್ರೆ ಸಿಬ್ಬಂದಿ ಫುಲ್ ಹೈ-ಅಲರ್ಟ್ ಆಗಿದ್ದಾರೆ.
ಇಂದು ಸಂಜೆ 7ಕ್ಕೆ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಆಗಮಿಸುವ ಆರೋಗ್ಯ ಸಚಿವ ಶ್ರೀರಾಮುಲು ವಾಸ್ತವ್ಯದ ಬೆನ್ನಲ್ಲೇ ಕೊಠಡಿಗೆ ಹೊಸ ಎಸಿ ಭಾಗ್ಯವನ್ನು ಕರುಣಿಸಿರುವುದು ಜನಸಾಮಾನ್ಯರ ಕಣ್ಣಿಗೆ ಕುಕ್ಕುವಂತಿದೆ.