ಚಿತ್ರದುರ್ಗ: ಮಂಗಳೂರು ಬಾಂಬ್ ಪ್ರಕರಣದಲ್ಲಿ ವಿರೋಧ ಪಕ್ಷದವರ ಕೈವಾಡವಿದೆ ಎಂದು ಸಂಸದ ನಾರಾಯಣ ಸ್ವಾಮಿ ಆರೋಪಿಸಿದ್ದಾರೆ.
ವಿರೋಧ ಪಕ್ಷದವರೇ ಈ ಕೃತ್ಯ ಮಾಡಿಸಿರಬಹುದು, ಅಲ್ಲದೆ ಎನ್ಆರ್ಸಿ ಹಾಗೂ ಸಿಎಎ ಜಾರಿಯಾದ ಬಳಿಕ ಕಾಂಗ್ರೆಸ್, ಜೆಡಿಎಸ್ ಪಾಕಿಸ್ತಾನದ ಏಜೆಂಟ್ಗಳಂತೆ ನಡೆದುಕೊಳ್ಳುತ್ತಿವೆ ಎಂದು ಸಂಸದ ಎ. ನಾರಾಯಣ ಸ್ವಾಮಿ ವಾಗ್ದಾಳಿ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭೆಯಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಅವರು, ಮಂಗಳೂರು ಏರ್ಪೋರ್ಟ್ ಬಾಂಬ್ ಪ್ರಕರಣ ಅಣಕು ಪ್ರದರ್ಶನ ಎಂದಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಯಾಗಿ ಇಂತಹ ಹೇಳಿಕೆ ನೀಡಿರೋದು ನೋವಿನ ಸಂಗತಿ, ಅವರ ಹೇಳಿಕೆ ಪೊಲೀಸರ ನೈತಿಕತೆಯನ್ನು ಕುಗ್ಗಿಸುವ ರೀತಿ ಇದೆ. ಕರ್ನಾಟಕ ಪೊಲೀಸರು ಪ್ರಬುದ್ಧರು, ಬಾಂಬರ್ ಆದಿತ್ಯ ರಾವ್ ವಿರುದ್ಧ ತನಿಖೆ ನಡೆಯುತ್ತಿದ್ದು, ಆರೋಪಿ ಮಾನಸಿಕ ಅಸ್ವಸ್ಥ ಅನ್ನೋದು ಇನ್ನೂ ದೃಢವಾಗಿಲ್ಲ, ಈ ಕುರಿತು ಮೆಡಿಕಲ್ ವರದಿ ಬಂದಿಲ್ಲ, ವರದಿ ಬಂದ ಬಳಿಕ ಫೈನಲ್ ಆಗತ್ತೆ ಎಂದರು.
ಆದಿತ್ಯ ರಾವ್ ಗೂ - ಬಿಜೆಪಿಗೂ ಯಾವುದೇ ಸಂಬಂಧವಿಲ್ಲ, ಸಾರ್ವಜನಿಕ ಜೀವನದಲ್ಲಿ ಯಾರು ಯಾರ ಜೊತೆಯಲ್ಲಿ ಬೇಕಾದರೂ ಫೋಟೋ ತೆಗೆಸಿಕೊಳ್ಳಬಹುದು ಎಂದು ಪಕ್ಷಕ್ಕೂ ಆರೋಪಿಗೂ ನಂಟಿಲ್ಲ ಎಂದು ಪರೋಕ್ಷವಾಗಿ ಹೇಳಿದರು.