ETV Bharat / state

ಬಸವ ತತ್ವಗಳಿಗೆ ಮನಸೋತ ಮುಸ್ಲಿಂ ಮಹಿಳೆ : ಏನ್ಮಾಡಿದ್ರು ಗೊತ್ತಾ? - undefined

ಕೋಟೆನಾಡು ಚಿತ್ರದುರ್ಗದ ಮುರುಘಾ ಮಠ ಮೂಢನಂಬಿಕೆಗಳಿಗೆ ಸೆಡ್ಡು ಹೊಡೆಯುತ್ತಿರುವ ಏಕೈಕ ಮಠ. ಈ ಹಿನ್ನೆಲೆ ಆಷಾಢ ಮಾಸದಲ್ಲೇ ಇಲ್ಲಿ ವಿವಾಹ ಮಹೋತ್ಸವ ನಡೆಯುತ್ತದೆ. ಈ ಬಾರಿ ಮುಸ್ಲಿಂ ಮಹಿಳೆಯೊಬ್ಬರು ಬಸವತತ್ವಕ್ಕೆ ಮನಸೋತು ಇಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾದರು.

ಬಸವ ತತ್ವಗಳಿಗೆ ಮನಸೋತು ಅಂತರ್ ಧರ್ಮೀಯ ಮದುವೆಯಾದ ಮಹಿಳೆ
author img

By

Published : Jul 5, 2019, 11:33 PM IST

ಚಿತ್ರದುರ್ಗ: ಆಷಾಢ ಮಾಸದಲ್ಲಿ ಮದುವೆ ಮಾಡಿದ್ರೆ ಕೆಟ್ಟದಾಗುತ್ತದೆ ಎಂಬ ಮೂಢ ನಂಬಿಕೆಗೆ ಜೋತು ಬಿದ್ದು, ವಿವಾಹ ಮಾಡಲು ಹಿರಿಯರು ಹಿಂಜರಿಯುತ್ತಿದ್ದರು. ಅದ್ರೆ ಮುರುಘಾ ಮಠದ ಶ್ರೀ ಮೂಢ ನಂಬಿಕೆಗಳಿಗೆ ಸೆಡ್ಡು ಹೊಡೆಯುವ ಮೂಲಕ ಆಷಾಢ ಮಾಸದಲ್ಲಿ 32 ನವ ಜೋಡಿಗಳಿಗೆ ಮದುವೆಯನ್ನು ಮಾಡಿಸಿದ್ದಾರೆ.

ಬಸವ ತತ್ವಗಳಿಗೆ ಮನಸೋತು ಅಂತರ್ ಧರ್ಮೀಯ ಮದುವೆಯಾದ ಮಹಿಳೆ

ವಿಶೇಷವೆಂದರೆ ವಿವಾಹ ಮಹೋತ್ಸವದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಬಸವ ತತ್ವಗಳಿಗೆ ಮಾರು ಹೋಗಿ ಹಿಂದೂ ಧರ್ಮದ ಸಂಪ್ರದಾಯದ ಪ್ರಕಾರ ಮದುವೆಯಾಗಿ ಮೂಢನಂಬಿಕೆಗೆ ಇತಿಶ್ರೀ ಹಾಡಿದ್ದಾರೆ.

ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಅಲದಗೇರಿ ಗ್ರಾಮದವರಾದ ಹಸೀನಾ ಹಡೀಯಾಳ್ ಹುಟ್ಟಿದ್ದು ಬೆಳೆದಿದ್ದು, ಮಠ ಮಾನ್ಯಗಳಲ್ಲಿ. ಅದ್ದರಿಂದ ಬಸವತತ್ವಗಳಲ್ಲಿ ಪಳಗಿದ ಹಸೀನಾರವರು ಇದೀಗ ಹಿಂದೂ ಧರ್ಮದ ಸಂಪ್ರದಾಯದಂತೆ ಮುರುಘಾ ಮಠದಲ್ಲಿ ಮದುವೆಯಾಗಿ ನೆರೆದಿದ್ದ ಜನರ ಹುಬ್ಬೇರಿಸುವಂತೆ ಮಾಡಿದ್ದಾರೆ.

ನವ ವಿವಾಹಿತೆ ಹಸೀನಾರವರು ಪ್ರಸ್ತುತವಾಗಿ 'ಸಾಮಾಜಿಕ ಪರಿವರ್ತನಾ ಜನಾಂದೋಲನ ಮಕ್ಕಳ ಹಕ್ಕುಗಳು' ಎಂಬ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಸವಣ್ಣನವರ ವಚನಗಳನ್ನು ಕಲಿತಿರುವ ಇವರು ಬುದ್ಧ, ಬಸವ, ಅಂಬೇಡ್ಕರ್​ರವರು ವಿರೋಧಿಸಿದ ಜಾತಿ ಪದ್ದತಿಯನ್ನು ತೊಳೆದು ಹಾಕುವ ಸಲುವಾಗಿ ಮದುವೆಯಾಗಿ ಇತರರಿಗೆ ಮಾದರಿಯಾಗಿದ್ದಾರೆ.

ಪ್ರಸ್ತುತ ದಿನಗಳಲ್ಲಿ ಎರಡು ಕೋಮುಗಳ ನಡುವೆ ನಡೆಯುತ್ತಿರುವ ಕೋಮುಭಾವನೆಗಳನ್ನು ತೊಳೆದು ಹಾಕುವ ಸಲುವಾಗಿ ಹಸೀನಾರವರು ಈ ಅಂತರ್ ಧರ್ಮಿಯ ವಿವಾಹ ಮಾಡಿಕೊಳ್ಳುವ ಮೂಲಕ ಕೋಮು ದಳ್ಳುರಿಯಲ್ಲಿ ಬೇಯುತ್ತಿರುವ ಜನರಿಗೆ ಶಾಂತಿಯ ಸಂದೇಶ ರವಾನಿಸಿದ್ದಾರೆ.

ಇನ್ನು ಈ ನವ ಜೋಡಿಗೆ ಶ್ರೀ ಶಿವಮೂರ್ತಿ ಮುರುಘಾ ಶರಣರು ಆಶೀರ್ವಚನ ನೀಡಿ ಶುಭ ಕೋರಿದರು. ಈ ಹಿಂದೆ ಅಮಾವಾಸ್ಯೆ ದಿನದಂದು ನೆರವೇರಿಸುತ್ತಿದ್ದ ವಿವಾಹ ಮಹೋತ್ಸವವನ್ನು ಆಷಾಢ ಮಾಸದಲ್ಲಿ ಮಾಡಿ ಸುಮಾರು 32 ನವ ಜೋಡಿಗಳಿಗೆ ಮದುವೆ ಮಾಡಿಸಿ ಇದೀಗ ಮತ್ತೊಂದು ಮೂಢನಂಬಿಕೆಗೆ ಕೊನೆಗಾಣಿಸಿದ್ದಾರೆ. ಇಷ್ಟು ದಿನಗಳ ಕಾಲ ಮುರುಘಾ ಮಠದ ಡಾ. ಶ್ರೀ. ಶಿವಮೂರ್ತಿ ಮುರುಘಾ ಶರಣರು ಕಳೆದ ಮೂರು ದಶಕಗಳಿಂದ ಜನರಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸಿ ಅಮವಾಸ್ಯೆ ಹಾಗೂ ಆಷಾಢ ಮಾಸ ಕೂಡ ಶುಭ ಎಂದು ಮನವರಿಕೆ ಮಾಡಿಕೊಡುತ್ತಿದ್ದಾರೆ. ಇದೇ ಕಾರಣಕ್ಕೆ ಪ್ರತಿ ತಿಂಗಳ 5 ನೇ ತಾರೀಖು ಅಮವಾಸ್ಯೆ, ಗ್ರಹಣ, ಮಂಗಳವಾರ ಏನೇ ಇದ್ದರೂ ಮುರುಘಾ ಮಠದ ಅನುಭವ ಮಂಟಪದಲ್ಲಿ ಹತ್ತಾರು ಜೋಡಿಗಳು ಹಸೆಮಣೆ ಏರುತ್ತಾರೆ.

ಒಟ್ಟಿನಲ್ಲಿ ಅಣ್ಣ ಬಸವಣ್ಣನವರ ವಚನಗಳ ಮೇಲೆ ನಡೆಯುತ್ತಿರುವ ಈ ಮುರುಘಾ ಮಠ ಕಾಲ ಬದಲಾದಂತೆ ಜನ ಕೂಡಾ ಬದಲಾಗಬೇಕು ಎಂದು ಪ್ರತಿ ಅಮಾವಾಸ್ಯೆಯ ಬದಲು ಆಷಾಢ ಮಾಸದಲ್ಲಿ ನವ ಜೋಡಿಗಳಿಗೆ ಲಗ್ನ ಮಾಡಿಸಲಾಗುತ್ತಿದೆ. ಅದಕ್ಕೆ ಪೂರಕವಾಗಿ ಪರಂಪರೆ ಹೊಂದಿರುವ ಮುರುಘಾ ಮಠ ಕೂಡ ಜನರಲ್ಲಿರುವ ಅಜ್ಞಾನ ತೊಡೆದು ವೈಚಾರಿಕ ಹಾದಿಯಲ್ಲಿ ಕರೆದೊಯ್ಯುತ್ತಿದೆ ಅನ್ನೋದಕ್ಕೆ ಆಷಾಢ ಮಾಸದಲ್ಲೂ ಮದುವೆ ನಡೆದಿದ್ದು ಒಂದು ಸಾಕ್ಷಿಯಷ್ಟೇ.

Intro:ಬಸವ ತತ್ವಗಳಿಗೆ ಮನಸೋತ ಮುಸ್ಲಿಂ ಮಹಿಳೆ : ಏನ್ಮಾಡಿರೂ ಗೊತ್ತಾ..?

ವಿಶೇಷ ವರದಿ

ಆ್ಯಂಕರ್:- ಆಷಾಢ ಮಾಸದಲ್ಲಿ ಮದುವೆ ಮಾಡೀದ್ರೇ ಕೆಟ್ಟದಾಗುತ್ತದೆ ಎಂಬ ಮೂಢ ನಂಬಿಕೆಗೆ ಜೋತು ಬಿದ್ದು, ವಿವಾಹ ಮಾಡಲು ಹಿರಿಯರು ಹಿಂಜರಿಯುತ್ತಿದ್ದರು. ಅದ್ರೇ ಮುರುಘಾ ಮಠದ ಶ್ರೀ ಮೂಢ ನಂಬಿಕೆಗಳಿಗೆ ಸೆಡ್ಡು ಹೊಡೆಯುವ ಮೂಲಕ ಆಷಾಢ ಮಾಸದಲ್ಲಿ 32 ನವ ಜೋಡಿಗಳಿಗೆ ಮದುವೆಯನ್ನು ಮಾಡಿಸಿದ್ದಾರೆ. ವಿಶೇಷವೆಂದರೆ ವಿವಾಹ ಮಹೋತ್ಸವದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಬಸವ ತತ್ವಗಳಿಗೆ ಮಾರುಹೋಗಿ ಹಿಂದೂ ಧರ್ಮದ ಸಂಪ್ಪದಾಯದ ಪ್ರಕಾರ ಮದುವೆಯಾಗಿ ಮೂಢನಂಬಿಕೆಗೆ ನಾಂದಿಹಾಡಿದ್ದಾರೆ.

ಲುಕ್,,,,,

ಫ್ಲೋ,,,,,

ವಾಯ್ಸ್ 01:- ಹೌದು...ಕೋಟೆನಾಡು ಚಿತ್ರದುರ್ಗದ ಮುರುಘಾ ಮಠ ಮೂಢನಂಬಿಕೆಗಳಿಗೆ ಸೆಡ್ಡು ಹೊಡೆಯುತ್ತಿರುವ ಏಕೈಕ ಮಠವಾಗಿದೆ. ಅದ್ರೇ ಈ ಬಾರಿ ನಡೆದ ವಿವಾಹ ಮಹೋತ್ಸವದಲ್ಲಿ ಮುಸ್ಲಿಂ ಮಹಿಳೆ ಕೂಡ ಬಸವ ತತ್ವಗಳಿಗೆ ಮನಸೋತು ಅಂತರ್ ಧರ್ಮೀಯ ಮದುವೆಗೆ ಸಾಕ್ಷಿಯಾಗಿದ್ದಾಳೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಅಲದಗೇರಿ ಗ್ರಾಮದವರಾದ ಹಸೀನ ಹಡೀಯಾಳ್ ಹುಟ್ಟಿದ್ದು ಬೆಳಿದಿದ್ದು, ಮಠ ಮಾನ್ಯಗಳಲ್ಲಿ ಅದ್ದರಿಂದ ಬಸವ ತತ್ವಗಳಲ್ಲಿ ಪಳಗಿದ ಹಸೀನರವರು ಇದೀಗ ಹಿಂದೂ ಧರ್ಮದ ಸಂಪ್ರಾದಯ ಪ್ರಕಾರ ಮುರುಘಾ ಮಠದಲ್ಲಿ ಮದುವೆಯಾಗಿ ನೆರೆದಿದ್ದ ಜನ್ರ ಉಬ್ಬೇರಿಸುವಂತೆ ಮಾಡಿದ್ದಾರೆ. ನವ ವಿವಾಹಿತೆ ಹಸೀನ ರವರು ಪ್ರಸ್ತುತವಾಗಿ ಸಾಮಾಜಿಕ ಪರಿವರ್ತ ಜನಾಂದೋಲನ ಮಕ್ಕಳ ಹಕ್ಕುಗಳು ಎಂಬ ಸಂಸ್ಥೇಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಸವಣ್ಣನವರ ವಚನಗಳನ್ನು ಕಲಿತಿರುವ ಇವರು ಬುದ್ಧ, ಬಸವ, ಅಂಬೇಡ್ಕರ್ ರವರು ವಿರೋಧಿಸಿದ ಜಾತಿ ಪದ್ದತಿಯನ್ನು ತೊಳೆದು ಹಾಕುವ ಸಲುವಾಗಿ ಮದುವೆಯಾಗಿ ಇತರರಿಗೆ ಮಾದರಿಯಾಗಿದ್ದಾರೆ. ಇನ್ನೂ ಪ್ರಸ್ತುತ ದಿನಗಳಲ್ಲಿ ಎರಡು ಕೋಮುಗಳ ನಡುವೆ ನಡೆಯುತ್ತಿರುವ ಕೋಮುಭಾವನೆಗಳನ್ನು ತೊಳೆದು ಹಾಕುವ ಸಲುವಾಗಿ ಹಸೀನ ರವರು ಈ ಅಂತರ್ ಧರ್ಮಿಯ ವಿವಾಹ ಮಾಡಿಕೊಳ್ಳುವ ಮೂಲಕ ಕೋಮು ದಳ್ಳುರಿಯಲ್ಲಿ ಬೆಯುತ್ತಿರುವ ಜನ್ರೀಗೆ ಶಾಂತಿಯ ಸಂದೇಶ ರವಾನಿಸಿದರು.

ಫ್ಲೋ,,,,,
ಬೈಟ್01:- ಹಸೀನಾ, ಅಂತರ್ ಧರ್ಮಿ ಮದುವೆಯಾದವರು

ವಾಯ್ಸ್ 02:- ಅಂತರ್ ಧರ್ಮಿಯ ಮದುವೆಗೆ ಸಾಕ್ಷಿಯಾದ ಹಸೀನ ರವರ ನವ ಜೋಡಿಗೆ ಶ್ರೀ ಶಿವಮೂರ್ತಿ ಮೂರುಘಾ ಶರಣರು ಆಶೀರ್ವಚನ ನೀಡಿ ಶುಭಕೋರಿದರು. ಇನ್ನೂ ಈ ಹಿಂದೆ ಅಮಾವಾಸ್ಯೆ ದಿನದಂದು ನೆರವೇರಿಸುತ್ತಿದ್ದ ವಿವಾಹ ಮಹೋತ್ಸವವನ್ನು ಆಷಾಢ ಮಾಸದಲ್ಲಿ ಸುಮಾರು 32 ನವ ಜೋಡಿಗಳಿಗೆ ಮದುವೆ ಮಾಡಿಸಿ ಇದೀಗ ಮತ್ತೊಂದು ಮೂಢನಂಬಿಕೆಗೆ ಕೊನೆಗಾಣಿಸಿದ್ದಾರೆ. ಆಷಾಢ ಮಾಸದಲ್ಲಿ ಮಾದುವೆ ಮಾಡಿದ್ರೇ ಅಶುಭವಾಗುತ್ತೆ ಎಂಬ ಮೂಢನಂಬಿಕೆಗೆ ಜೋತು ಬಿದ್ದಿದ್ದ ಜನ್ರಿಗೆ ತಿಳುವಳಿಕೆ ತುಂಬಲು ಇದೀಗ ಆಷಾಢ ಮಾಸದಲ್ಲಿ ಮತ್ತಷಟು ನವಜೋಡಿಗಳಿಗೆ ಮಾದುವೆ ಮಾಡಿಸಿ ಇಂದು ಮೂಢ ನಂಬಿಕೆಯನ್ನು ಕೊನೆಗಾಣಿಸಲು ಮುಂದಾದರು. ಇಷ್ಟು ದಿನಗಳ ಕಾಲಮುರುಘಾ ಮಠದ ಡಾ ಶ್ರೀ. ಶಿವಮೂರ್ತಿ ಮುರುಘಾ ಶರಣರು ಕಳೆದ ಮೂರು ದಶಕಗಳಿಂದ ಜನರಲ್ಲಿರುವ ಮೂಢ ನಂಬಿಕೆಗಳನ್ನು ಹೋಗಲಾಡಿಸಿ ಅಮವಾಸ್ಯೆ ಹಾಗೂ ಆಷಾಢ ಮಾಸ ಕೂಡಾ ಶುಭ ಎಂದು ಮನವರಿಕೆ ಮಾಡಿಕೊಡುತ್ತಿದ್ದಾರೆ. ಇದೇ ಕಾರಣಕ್ಕೆ ಪ್ರತಿ ತಿಂಗಳ 5 ನೇ ತಾರೀಖು ಅಮವಾಸ್ಯೆ, ಗ್ರಹಣ, ಮಂಗಳವಾರ ಏನೇ ಇದ್ದರೂ ಮುರುಘಾ ಮಠದ ಅನುಭವ ಮಂಟಪದಲ್ಲಿ ಹತ್ತಾರು ಜೋಡಿಗಳು ಹಸೆಮಣೆ ಏರುತ್ತಾರೆ. ಅದ್ರೇ ಈ ಬಾರಿ ಮಾತ್ರ ಆಷಾಢ ಮಾಸದ ಶುಕ್ರವಾರದಂದು 32 ನವ ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟರು. ಪಂಚಾಂಗ, ರಾಹುಕಾಲ ಗುಳಿಕಾಲ ಯಮಗಂಡ ಕಾಲ ಇವೆಲ್ಲವನ್ನು ಯಾವುದೇ ಲೆಕ್ಕೆಕ್ಕೆ ಇಡುವುದಿಲ್ಲ ಎಂದರು. ಅಮಾವಾಸ್ಯೆಯ ವಿಶೇಷವಾಗಿ ಇಂದು ಪ್ರತಿಯೊಂದು ಜೋಡಿಗಳಿಗೂ ಇದೇ ಮೊದಲ ಬಾರಿಗೆ ಬೆಳ್ಳಿ ಕಾಲುಂಗರ, ವಧು ವರರಿಗೆ ಹೊಸವಸ್ತ್ರಗಳನ್ನು ಮಠದಿಂದಲೇ ನೀಡದ್ದು ವಿಶೇಷವಾಗಿತ್ತು.
ಫ್ಲೋ,,,,,

ಬೈಟ್01:- ಶ್ರೀ ಶಿವ ಮೂರ್ತಿ ಮುರುಘಾ ಶರಣರು

ವಾಯ್ಸ್ 03:- ಅಣ್ಣ ಬಸವಣ್ಣನವರ ವಚನಗಳ ಮೇಲೆ ನಡೆಯುತ್ತಿರುವ ಈ ಮುರುಘಾ ಮಠ ಕಾಲ ಬದಲಾದಂತೆ ಜನ ಕೂಡಾ ಬದಲಾಗಬೇಕು ಎಂದು ಪ್ರತಿ ಅಮಾವಸ್ಯೆಯ ಬದಲು ಆಷಾಢ ಮಾಸದಲ್ಲಿ ನವ ಜೋಡಿಗಳಿಗೆ ಲಗ್ನ ಮಾಡಿಸಲಾಗುತ್ತಿದೆ. ಅದಕ್ಕೆ ಪೂರಕವಾಗಿ ಘನ ಪರಂಪರೆ ಹೊಂದಿರುವ ಮುರುಘಾ ಮಠ ಕೂಡಾ ಜನರಲ್ಲಿರುವ ಅಜ್ಞಾನ ತೊಡೆದು ವೈಚಾರಿಕ ಹಾದಿಯಲ್ಲಿ ಕರೆದೊಯ್ಯುತ್ತಿದೆ ಅನ್ನೋದಕ್ಕೆ ಆಷಾಢ ಮಾಸದಲ್ಲೂ ಮದುವೆ ನಡೆದಿದ್ದು ಒಂದು ಸಾಕ್ಷಿಯಷ್ಟೇ.

ಡಿ ನೂರುಲ್ಲಾ ಈಟಿವಿ ಭಾರತ ಚಿತ್ರದುರ್ಗ         

Body:DIFFRENT_Conclusion:MARRIAGE pkg

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.