ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಬಂಡೇಹಟ್ಟಿ ಗ್ರಾಮದಲ್ಲಿ ಬಯಲು ಶೌಚಕ್ಕೆ ತೆರಳಿದ್ದ ಬಾಲಕಿಯೋರ್ವಳನ್ನು ಕಾಮುಕನೋರ್ವ ಅಪಹರಣ ಮಾಡಿ ಬಳಿಕ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಕ್ಟೋಬರ್ 28 ರಂದು ಬಯಲು ಶೌಚಕ್ಕೆ ಹೋಗಿದ್ದ ಬಾಲಕಿಯನ್ನ ಅಪಹರಿಸಿ ಅತ್ಯಾಚಾರ ಎಸಗಿದ್ದ. ಈ ಸಂಬಂಧ ಚಳ್ಳಕೆರೆ ಠಾಣೆಯ ಪೊಲೀಸರು ಆರೋಪಿ ರವಿರಾಜ್(21) ಎಂಬುವನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಅತ್ಯಾಚಾರ ಹಾಗು ಅಪಹರಣ ದೂರು ದಾಖಲಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸರು ಆರೋಪಿ ರವಿರಾಜ್ ಎಂಬುವನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಓದಿ: ಬೈಕ್ಗೆ ಖಾಸಗಿ ಬಸ್ ಡಿಕ್ಕಿ: ಸ್ಥಳದಲ್ಲೇ ದ್ವಿಚಕ್ರ ವಾಹನ ಸವಾರ ಸಾವು
ಆರೋಪಿ ರವಿರಾಜ್ ಹಾಗು ಅಪಹರಣಕ್ಕೊಳಗಾದ ಬಾಲಕಿ ಈ ಹಿಂದೆ ಪ್ರೀತಿಸುತ್ತಿದ್ದು, ಒತ್ತಾಯ ಪೂರ್ವಕವಾಗಿ ಬಾಲಕಿಯನ್ನು ಆರೋಪಿ ರವಿರಾಜ್ ಒಮ್ಮೆ ಹೀಗೆ ಕರೆದುಕೊಂಡು ಹೋಗಿ ಆರು ತಿಂಗಳ ಕಾಲ ಜೈಲಿನಲ್ಲಿ ಕಂಬಿ ಎಣಿಸಿದ್ದ. ಇದೀಗ ಎರಡನೇ ಬಾರಿ ಆರೋಪಿ ರವಿರಾಜ್ ಬಾಲಕಿಯನ್ನು ಅಪಹರಣ ಮಾಡಿ ಅತ್ಯಾಚಾರ ಎಸಗಿದ್ದರಿಂದ ಚಳ್ಳಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.