ETV Bharat / state

ಕುರಿಗಾಹಿ ಕೈಹಿಡಿದ ಎಂಎ ವಿದ್ಯಾರ್ಥಿನಿ: ಸಿನಿಮಾ ಸ್ಟೈಲ್​ನಲ್ಲಿ ಪ್ರೇಯಸಿಗೆ ತಾಳಿ ಕಟ್ಟಿದ ಭೂಪ! - A Man marriage with his girlfriend like cinema style

ವಿವಾಹ ಅಂದ್ರೆ ಸ್ನೇಹಿತರು ಬಂಧು-ಬಳಗ, ಕಲ್ಯಾಣ ಮಂಟಪ ಜೊತೆಗೆ ಎಲ್ಲರ ಮೊಗದಲ್ಲೂ ಸಂಭ್ರಮ ಕಳೆಗಟ್ಟಿರುತ್ತೆ. ಆದ್ರೆ ಇಲ್ಲೊಂದು ಜೋಡಿಗೆ ಪ್ರಕೃತಿಯೇ ಚಪ್ಪರ, ಕುರಿಗಳ ಹಿಂಡೇ ಬಂಧು-ಬಳಗ, ಇತರೆ ಕುರಿಗಾಹಿಗಳು ಕಲ್ಯಾಣಕ್ಕೆ ಸಾಕ್ಷಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಈ ವಿಶಿಷ್ಟ ಪ್ರಸಂಗ ನಡೆದಿದ್ದು, ಪ್ರೇಯಸಿ ತನ್ನೆಡೆಗೆ ಓಡಿ ಬರುತ್ತಿದ್ದಂತೆ ಕೈಯಲ್ಲಿ ತಾಳಿ ಹಿಡಿದು ನಿಂತಿದ್ದ ಪ್ರಿಯತಮ ಆಕೆಗೆ ತಾಳಿಕಟ್ಟಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾನೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸಿನಿಮಾ ಸ್ಟೈಲ್​ನಲ್ಲಿ ಪ್ರೇಯಸಿಗೆ ತಾಳಿ ಕಟ್ಟಿದ ಕುರಿಗಾಹಿ
author img

By

Published : Nov 10, 2019, 1:13 PM IST

Updated : Nov 10, 2019, 7:58 PM IST

ಚಿತ್ರದುರ್ಗ: ಕುರಿಗಾಹಿ ಯುವಕನೋರ್ವ ಸಿನಿಮಾ ಸ್ಟೈಲ್​ನಲ್ಲಿ ಪ್ರೇಯಸಿಗೆ ತಾಳಿ ಕಟ್ಟಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಸೀಗೆಹಟ್ಟಿ ಗ್ರಾಮದಲ್ಲಿ ಜರುಗಿದೆ.

ಸೀಗೆಹಟ್ಟಿ ಗ್ರಾಮದ ಅರುಣ್ ಮತ್ತು ಅಮೃತಾ ಪ್ರೇಮ ವಿವಾಹವಾದ ಜೋಡಿ. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿಯ ಮದುವೆಗೆ ಮನೆಯಲ್ಲಿ ವಿರೋಧವಿತ್ತು. ಇಷ್ಟಾದರೂ ಈ ಜೋಡಿ ಕೊನೆಗೂ ಒಂದಾಗಿದೆ ಎಂದು ತಿಳಿದುಬಂದಿದೆ.

ಸಿನಿಮಾ ಸ್ಟೈಲ್​ನಲ್ಲಿ ಪ್ರೇಯಸಿಗೆ ತಾಳಿ ಕಟ್ಟಿದ ಕುರಿಗಾಹಿ

ಇನ್ನು, ಪ್ರೇಯಸಿ ತನ್ನೆಡೆಗೆ ಓಡಿ ಬರುತ್ತಿದ್ದಂತೆ ಕೈಯಲ್ಲಿ ತಾಳಿ ಹಿಡಿದು ನಿಂತಿದ್ದ ಯುವಕ ಆಕೆಗೆ ತಾಳಿಕಟ್ಟಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾನೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಯುವತಿ ತುಮಕೂರು ವಿವಿಯಲ್ಲಿ ಎಂಎ ವ್ಯಾಸಂಗ ಮಾಡುತ್ತಿದ್ದಾಳೆ. ಅರುಣ್ ಮತ್ತು ಅಮೃತಾ ಒಂದೇ ಗ್ರಾಮದವರಾಗಿದ್ದು, ಪ್ರೇಮ ವಿವಾಹದ ವಿಚಾರಕ್ಕೆ ಎರಡೂ ಕುಟುಂಬದ ನಡುವೆ ಗಲಾಟೆ ಕೂಡ ನಡೆದಿತ್ತು ಎಂದು ಹೇಳಲಾಗ್ತಿದೆ.

Intro:ಸಿನಿಮಾ ಸ್ಟೈಲ್ ನಲ್ಲಿ ಪ್ರೇಯಸಿಗೆ ತಾಳಿ ಕಟ್ಟಿದ ಕುರಿಗಾಹಿ ಯುವಕ

ಆ್ಯಂಕರ್:- ಕುರಿಗಾಹಿ ಯುವಕನೊರ್ವ ಸಿನಿಮಾ ಸ್ಟೈಲ್ ನಲ್ಲಿ ಪ್ರೇಯಸಿಗೆ ತಾಳಿ ಕಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಸಿಗೇಹಟ್ಟಿ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸಿಗೇಹಟ್ಟಿ ಗ್ರಾಮದ ಅರುಣ್ ಮತ್ತು ಅಮೃತಾ ಪ್ರೇಮ ವಿವಾಹವಾದ ಜೋಡಿ. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯ ಮದುವೆಗೆ ಮನೆಯಲ್ಲಿ ವಿರೋಧವಿತ್ತು. ವಿರೋಧ ನಡುವೆಯು ಅಮೃತಾ ಹಬ್ಬಕ್ಕೆಂದು ಊರಿಗೆ ಬಂದ್ದು, ಬಳಿಕ ಊರಿನಲ್ಲಿ ಬಹಿರ್ದೆಸೆಗೆ ಎಂದು ಹೊರ ಬಂದು, ಕುರಿಗಾಹಿ ಯುವಕನೊಂದಿಗೆ ಓಡಿ ಬರುವ ಮೂಲಕ‌ ಕುರಿ ಹಟ್ಟಿ (ಕುರಿ ಕೂಡಿಹಾಕುವ ಸ್ಥಳ) ಮುಂದೆಯೇ ಐವಕ ತಾಳಿ ಕಟ್ಟುವ ಮೂಲಕ ವೈವಾಹಿಕ ಜೀವನ ಕಾಲಿಟ್ಟಿದ್ದಾರೆ. ಪ್ರೇಯಸಿ ತನ್ನೆಡೆಗೆ ಓಡಿ ಬರುತ್ತಿದ್ದಂತೆ ಕೈಯಲ್ಲಿ ತಾಳಿ ಹಿಡಿದು ಕಟ್ಟಿದ ಪ್ರಿಯಕರನ ಪ್ರೇಮ ವಿವಾಹ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಕುರಿಗಾಹಿ ಯುವಕನ್ನು ಪ್ರೀತಿಸಿ ವರಿಸಿದ ಯುವತಿ ಸ್ನಾತಕೋತ್ತರ ಪದವೀಧರೆಯಾಗಿದ್ದು, ತುಮಕೂರು ವಿವಿಯಲ್ಲಿ ಅಮೃತಾ ಎಂ.ಎ ಓದುತ್ತಿದ್ದಳು. ಅರುಣ್, ಅಮೃತಾ ಇಬ್ಬರೂ ಒಂದೇ ಗ್ರಾಮದವರಾಗಿದ್ದು, ಪ್ರೇಮ ವಿವಾಹದ ವಿಚಾರಕ್ಕೆ ಎರಡೂ ಕುಟುಂಬದ ನಡುವೆ ಗಲಾಟೆ ಕೂಡ ಆಗಿತ್ತು.

ಫ್ಲೋ....

Body:Kuri gayi marregConclusion:Av
Last Updated : Nov 10, 2019, 7:58 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.