ETV Bharat / state

ವಿಶ್ವ ಪರಿಸರ ದಿನದಂದು ಕುಂ.ವೀರಭದ್ರಪ್ಪ ಪುತ್ರ ಸೇರಿ 46 ಜೋಡಿಯ ಸರಳ ವಿವಾಹ! - DIFFERENT_MARRIAGE_PKG_7204336

ಬಿಳಿ ಬಣ್ಣದ ಪಂಜೆ, ಶರ್ಟ್ ಧರಿಸಿ, ತಲೆಗೆ ಪೇಟದ ಮೇಲೆ ಬಾಸಿಂಗ ಕಟ್ಟಿಕೊಂಡ ವರರು, ಬಣ್ಣ ಬಣ್ಣದ ಸೀರೆ ಕುಪ್ಪಸ ತೊಟ್ಟ ಮದುವಣಗಿತ್ತಿಯರ ಸಂತೋಷಕ್ಕೆ ಪಾರವೇ ಇರಲಿಲ್ಲ. ಇಷ್ಟೆಲ್ಲ ಕಂಡು ಬಂದಿದ್ದು ಸರಳ ಸಾಮೂಹಿಕ ವಿವಾಹದ ಕಾರ್ಯಕ್ರಮದಲ್ಲಿ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ 46 ಜೋಡಿಗಳಿಗೆ ಡಾ.ಶಿವಮೂರ್ತಿ ಮುರುಘಾ ಶರಣರು ಆಶೀರ್ವಾದ ಮಾಡಿದರು
author img

By

Published : Jun 6, 2019, 12:56 PM IST

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದ ಮುರುಘಾ ಮಠದ ಉದ್ಯಾನದಲ್ಲಿ ಆಯೋಜಿಸಿದ್ದ 354ನೇ ಸಾಮೂಹಿಕ ವಿವಾಹ ಕಾರ್ಯಕ್ರಮ ಮತ್ತು ವಿಶ್ವ ಪರಿಸರ ದಿನದಂದೇ 46 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗಳಲ್ಲಿ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಅವರ ಪುತ್ರ ಪ್ರವರ ಹಾಗೂ ಅಂಬಿಕಾ ಜೋಡಿ ಸೇರಿದಂತೆ ಆರು ಜೋಡಿ ಅಂತರ್ಜಾತಿ ವಿವಾಹವಾದರು. ಈ ಮೂಲಕ ಎಲ್ಲರಿಗೂ ಮಾದರಿಯಾದರು.

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನವ ಜೋಡಿಗಳ ಜೀವನದ ಪ್ರತೀ ಕ್ಷಣವೂ ಹಚ್ಚ ಹಸಿರಿನಿಂದ ಕೂಡಿರಲಿ ಎಂದು ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಮುರುಘಾ ಶರಣರು ಮತ್ತು ನೆರೆದಿದ್ದ ಭಕ್ತರು, ಹಿರಿಯರು ಆಶೀರ್ವಾದ ಮಾಡಿದರು. ಮದುವೆಯ ನಂತರ ಉದ್ಯಾನದಲ್ಲಿ ಎಲ್ಲಾ ಜೋಡಿಗಳು ಸಸಿಗಳನ್ನು ನೆಟ್ಟು ನೀರೆರೆದರು. ಮಠದ ಈ ಸಮಾಜಮುಖಿ ಕಾರ್ಯಕ್ಕೆ ರಾಜ್ಯದೆಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ 46 ಜೋಡಿಗಳು

ಮೌಢ್ಯತೆಗೆ ಸಡ್ಡು ಹೊಡೆದು ಬಸವ ತತ್ವ ಸಾರುತ್ತಾ ಮಠದಿಂದ 29 ವರ್ಷಗಳಿಂದ ಪ್ರತಿ ತಿಂಗಳ 5ನೇ ತಾರೀಖಿನಂದು ಸರಳ ಸಾಮೂಹಿಕ ವಿವಾಹಗಳನ್ನ ನಡೆಸಿಕೊಂಡು ಬರಲಾಗುತ್ತದೆ. ಅದರಂತೆ ವಿಶ್ವ ಪರಿಸರ ದಿನವೂ ಕೂಡ ಈ ಸಾಮೂಹಿಕ ವಿವಾಹಕ್ಕೆ ಸಾಕ್ಷಿಯಾಯಿತು.

ಡಾ. ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ವೃಕ್ಷ ಸಂತಾನಕ್ಕೂ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಇದರಿಂದ ಜಾಗತಿಕ ತಾಪಮಾನ ಕಡಿಮೆಯಾಗುತ್ತದೆ. ಅಲ್ಲದೆ, ಕಾಲ ಕಾಲಕ್ಕೆ ಸರಿಯಾಗಿ ಮಳೆ ಬೆಳೆಯಾಗಲು ಸಹಾಯವಾಗುತ್ತದೆ. ಜಾತಿ, ಜಾತಿಗಳನ್ನು ಬೆಸೆಯುವ ಸಲುವಾಗಿ ಮಠದಲ್ಲಿ ಅಂತರ್ಜಾತಿ ವಿವಾಹಗಳನ್ನು ಜರುಗಿಸಲಾಗುತ್ತಿದೆ ಎಂದು ವಿವರಿಸಿದರು.

ಸಾಹಿತಿ ಕು.ವೀರಭದ್ರಪ್ಪ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಸರಳ ವಿವಾಹಗಳ ಅಗತ್ಯ ಬಹಳಷ್ಟಿದೆ. ಅದಕ್ಕೆ ಎಲ್ಲರೂ ಬೆಂಬಲ ಕೊಟ್ಟು ಹೆಚ್ಚು ಜನಪ್ರಿಯಗೊಳಿಸಬೇಕು. ಈ ಮೂಲಕ ಆಡಂಬರದ ಮದುವೆಗಳಿಗೆ ಕಡಿವಾಣ ಹಾಕಬಹುದು ಎಂದರು.

Intro:ಜೀವನ ಸದಾ ಹಸಿರಾಗಿರುವಂತೆ ವಿಶ್ವ ಪರಿಸರ ದಿನದಂದೆ ನವ ಜೀವನಕ್ಕೆ ಕಾಲಿಟ್ಟ ನವ ಜೋಡಿಗಳು

ವಿಶೇಷ ವರದಿ....

ಆ್ಯಂಕರ್:- ತಮ್ಮ ಜೀವನದ ಪ್ರತಿ ಕ್ಷಣ ಸದಾ ಹಚ್ಚಹಸಿರಾಗಿರಲು ವಿಶ್ವ ಪರಿಸರ ದಿನದಂದೆ ನವ ಜೋಡಿವೊಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಕೋಟೆನಾಡು ಚಿತ್ರದುರ್ಗ ಜಿಲ್ಲೆ ಈ ಮದುವೆಗೆ ಸಾಕ್ಷಿಯಾಗಿದ್ದು, ಯುವಕ‌ ಯುವತಿಯರು ತಮ್ಮ ಜೀವನದ ನೆನಪನ್ನ‌ ಹಸಿರಾಗಿರಿಸುವುದಕ್ಕಾಗಿ ಈ ಮದುವೆ ಮಾಡಿಕೊಂಡಿದ್ದಾರಂತೆ, ಸಮಾಜ ಮುಖಿ ಈ ಕಾರ್ಯಕ್ಕೆ ಜಿಲ್ಲೆಯಾದಂತ್ಯ ಪ್ರಶಂಸೆ ಕೂಡ ವ್ಯಕ್ತವಾಗುತ್ತಿದೆ..

ಲುಕ್....

ಫ್ಲೋ.....

ವಾಯ್ಸ್01: - ಬಿಳಿ ಬಣ್ಣದ ಪಂಜೆ ಶರ್ಟ್ ಧರಿಸಿ, ತಲೆಗೆ ಪೇಟದ ಮೇಲೆ ಬಾಸಿಂಗ ಕಟ್ಟಿಕೊಂಡ ನವ ವರರು, ಬಣ್ಣ ಬಣ್ಣದ ಸೀರೆ ಕುಪ್ಪಸ ತೊಟ್ಟು ನಿಂತ ಮಧುವಣಗಿತ್ತಿಯರು, ಬರೋಬ್ಬರಿ 46ಜೋಡಿ ನವ ದಂಪತಿಗಳು ಇಂದು ತಮ್ಮ ಹೊಸ ಜೀವನದ ನೆನಪು ಹಸಿರಾಗಿರಲಿ‌ ಅಂದ್ಕೊಂಡು ಗಿಡ ನೆಟ್ಟು ನೀರೆರೆಯುವ ಮೂಲಕ ಸಾಂಸಾರಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ ಸುಂದರ ದೃಷ್ಯಗಳು. ಈ ವಿಶೇಷತೆಗಳಿಗೆ ಸಾಕ್ಷಿಯಾಗಿದ್ದು ಕೋಟೆನಾಡು ಚಿತ್ರದುರ್ಗದ ಮುರುಘಾ ಮಠದಲ್ಲಿ ಇರುವ ಉದ್ಯಾನವನ..ಹೌದು..‌ ಮೌಢ್ಯತೆಗೆ ಸಡ್ಡು ಹೊಡೆದು ಬಸವ ತತ್ವ ಸಾರುತ್ತಾ ಶ್ರೀ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರು 29ವರ್ಷಗಳಿಂದ ಪ್ರತೀ ತಿಂಗಳ 5ನೇ ತಾರೀಖಿನಂದು ಸರಳ ಸಾಮೂಹಿಕ ವಿವಾಹಗಳನ್ನ ನಡೆಸಿಕೊಂಡು ಬಂದಿದ್ದಾರೆ. ಅದರಂತೆ ವಿಶ್ವ ಪರಿಸರ ದಿನವಾದ ಇಂದು ಕೂಡ 354ನೇ ಸಾಮೂಹಿಕ ವಿವಾಹ ಜರುಗಿದ್ದು, ವೈವಾಹಿಕ ಜೀವನಕ್ಕೆ ಕಾಲಿರಿಸಿದ 46ಜೋಡಿಗಳಲ್ಲಿ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಅವರ ಪುತ್ರ ಪ್ರವರ ಅಂಬಿಕಾ ಜೋಡಿ ಸೇರಿದಂತೆ 6ಜೋಡಿ ವಧು ವರರು ಜ್ಯಾತೀಯತೆಯನ್ನು ತೊರೆದು ಅಂತರ್ಜಾತಿ ವಿವಾಹವಾಗುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ..

ಫ್ಲೋ....

ಬೈಟ್1: ಡಾ.ಶಿವಮೂರ್ತಿ ಮುರುಘಾ ಶರಣರು. ಮುರುಘಾ ಮಠ, ಚಿತ್ರದುರ್ಗ

ವಾಯ್ಸ್2: ಮುರುಘಾ ಮಠದ ಅನುಭವ ಮಂಟಪದಲ್ಲಿ ಹಲವು ಮಠಾಧೀಶರು, ಸಹಸ್ರಾರು ಸಂಖ್ಯೆಯ ಭಕ್ತರ ಸಮೂಹದಲ್ಲಿ ಮಂತ್ರ ಮಾಂಗಲ್ಯದ ಮೂಲಕ ವೈವಾಹಿಕ ಬದುಕಿಗೆ ಅಡಿಯಿಟ್ಟ ನವ ಜೋಡಿಗಳು, ಮುರುಘಾ ವನದಲ್ಲಿ ಗಿಡ ನೆಟ್ಟು ನೀರೆರೆದು ತಮ್ಮ‌ ಬದುಕು ಪರಿಸರದಂತೆ ಹಸುರಾಗಿರಲಿ ಎಂದು ಆಶಯ ವ್ಯಕ್ತಪಡಿಸಿದ್ದು, ಇಂತಹ ಸರಳ ಸಾಮೂಹಿಕ, ಅಂತರ್ಜಾತಿಯ ವಿವಾಹಗಳಿಂದ ಸಮಾಜದ ಆರ್ಥಿಕ ಪರಿಸ್ಥಿತಿ ಸರಿದೂಗುವ ಜೊತೆಗೆ ಸಂವಿಧಾನದ ಆಶಯ ಈಡೇರಿದಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ..

ಬೈಟ್2: ಕುಂ.ವೀರಭದ್ರಪ್ಪ, ಹಿರಿಯ ಸಾಹಿತಿ.

ಬೈಟ್3: ಪ್ರವರ, ಕುಂ.ವೀರಭದ್ರಪ್ಪನವರ ಪುತ್ರ.

ಬೈಟ್4: ಅಂಬಿಕಾ, ಪ್ರವರ ರನ್ನ ಕೈಹಿಡಿದ ಅಂತರ್ಜಾತಿಯ ವಧು.

ವಾಯ್ಸ್03:- ಒಟ್ಟಾರೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ರಪಂಚದಾದ್ಯಂತ ಬಗೆ ಬಗೆಯ ಕಾರ್ಯಕ್ರಮಗಳು ನಡೆದ್ರೆ, ವಿಶೇಷತೆಗೆ ಹೆಸರಾದ ಮುರುಘಾ ಮಠ ಸರಳ ಸಾಮೂಹಿಕ‌ ಅಂತರ್ಜಾತಿಯ ವಿವಾಹ ನಡೆಸಿ, ನವ ದಂಪತಿಗಳಿಂದ ಗಿಡ ನೆಡಿಸುವುದರ ಜೊತೆಗೆ ಪರಿಸರ ಬೆಳೆಸುವ ವಾಗ್ದಾನ ಮಾಡಿಸುವ ಮೂಲಕ‌ ಅರ್ಥಪೂರ್ಣ ಆಚರಣೆಗೆ ನಾಂದಿ ಹಾಡಿದೆ..

ಡಿ ನೂರುಲ್ಲಾ ಈಟಿವಿ ಭಾರತ ಚಿತ್ರದುರ್ಗ..Body:ಡಿಪೆರೆಂಟ್Conclusion:ಮದುವೆ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.