ಚಿತ್ರದುರ್ಗ : ಜಿಲ್ಲೆಯಲ್ಲಿಂದು ಮೂವರಲ್ಲಿ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆಯಾಗಿದೆ.
ಕೊರೊನಾ ಮುಕ್ತ ಜಿಲ್ಲೆ ಎಂದು ಗುರುತಿಸಿಕೊಂಡಿದ್ದ ಜಿಲ್ಲೆಯಲ್ಲೀಗ ಸೋಂಕು ಪ್ರಕರಣ ಹೆಚ್ಚುತ್ತಿವೆ. ಇಂದು ಜಿಲ್ಲೆಯಲ್ಲಿ ಹೊಸ ಮೂರು ಕೊರೊನಾ ಪ್ರಕರಣ ಪತ್ತೆಯಾಗಿವೆ.
P-15675 ಸಂಪರ್ಕದಿಂದ 54 ವರ್ಷದ ಮಹಿಳೆ(P-21691)ಗೆ, P-9908 ಸಂಪರ್ಕದಿಂದ 39 ವರ್ಷದ ವ್ಯಕ್ತಿ( P-21692)ಗೆ ಹಾಗೂ 33 ವರ್ಷದ ವ್ಯಕ್ತಿ(P-21693 - ILI) ಗೆ ಸೇರಿ ಒಟ್ಟು ಮೂವರಲ್ಲಿ ಸೋಂಕು ದೃಢವಾಗಿದೆ.