ಚಿತ್ರದುರ್ಗ: ಲೋಕಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ ಚಿತ್ರದುರ್ಗದಿಂದ 19 ಆಭ್ಯರ್ಥಿಗಳು ಸೆಣಸಾಟ ನಡೆಸಲಿದ್ದಾರೆ.
ಒಟ್ಟು 24 ಆಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಸಲಾಗಿದ್ದು, ಪಕ್ಷೇತರ ಆಭ್ಯರ್ಥಿಯಾದ ಡಿ.ಸಿ.ನಾರಾಯಣಸ್ವಾಮಿ ನಾಮಪತ್ರ ಕ್ರಿಮಿನಲ್ ಪ್ರಕರಣ ಇರುವ ಹಿನ್ನೆಲೆ ತಿರಸ್ಕೃತಗೊಂಡಿತು. 23 ನಾಮಪತ್ರಗಳಲ್ಲಿ 4 ಆಭ್ಯರ್ಥಿಗಳು ನಾಮಪತ್ರವನ್ನ ಹಿಂಪಡೆದಿದ್ದು, 19 ಆಭ್ಯರ್ಥಿಗಳು ಚುನಾವಣಾ ಅಂತಿಮ ಕಣದಲ್ಲಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಬಿ.ಎನ್.ಚಂದ್ರಪ್ಪ, ಬಿಜೆಪಿ ಪಕ್ಷದಿಂದ ಎ.ನಾರಾಯಣಸ್ವಾಮಿ ಸೇರಿದಂತೆ 19 ಆಭ್ಯರ್ಥಿಗಳು ಕಣದಲ್ಲಿ ಸೆಣಸಾಟ ನಡೆಸಲಿದ್ದಾರೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ವಿನೂತ್ ಪ್ರಿಯಾ ಮಾಹಿತಿ ನೀಡಿದ್ರು.