ಚಿತ್ರದುರ್ಗ: ಜಿಲ್ಲೆಗೆ ಬ್ರಿಟನ್ ದೇಶದಿಂದ 11ಜನರು ವಾಪಸಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಲಾಕ್ಷ ಸಿ.ಎನ್ ಮಾಹಿತಿ ನೀಡಿದ್ದಾರೆ.
ವಿದೇಶದಿಂದ ಜಿಲ್ಲೆಗೆ ಬಂದ ಈ 11 ಜನರನ್ನು ಆರೋಗ್ಯ ಇಲಾಖೆ ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು, ರ‍್ಯಾಪಿಡ್ ಟೆಸ್ಟ್ ಹಾಗೂ ಆರ್ಟಿಪಿಸಿಆರ್ ಟೆಸ್ಟ್ ಮಾಡಲಾಗಿದೆ. ಎಲ್ಲಾ ವರದಿಗಳು ನೆಗೆಟಿವ್ ಬಂದಿವೆ. ಆದ್ರೆ ಮುಂದಾಜಗ್ರತೆಯಿಂದ 28 ದಿನಗಳವರೆಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ. ಜೊತೆಗೆ ಸೋಂಕಿನ ಲಕ್ಷಣಗಳು ಕಂಡು ಬಂದ ಶಂಕಿತರ ಮೇಲೆ ಆಶಾ ಕಾರ್ಯಕರ್ತೆಯರು ನಿಗಾ ವಹಿಸಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
11 ಜನರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 30 ಜನ ಹಾಗೂ ದ್ವಿತೀಯ ಸಂಪರ್ಕ ಹೊಂದಿದ 60 ಜನರನ್ನು ಗುರುತಿಸಿ ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಗಿದೆ. ಬ್ರಿಟನ್ನಿಂದ ಜಿಲ್ಲೆಗೆ ವಾಪಸಾಗಿರುವರ 11 ಜನರ ಪೈಕಿ ಮೂವರು ಬೆಲಗೂರು, ಬೆನಕಪುರ, ಹೊಸದುರ್ಗ ಪಟ್ಟಣದರಾಗಿದ್ದು, ಹಿರಿಯೂರು ನಗರದ ಮೂವರು ಹಾಗೂ ಮಸ್ಕಲ್ ಗ್ರಾಮದ ಓರ್ವ, ಚಿತ್ರದುರ್ಗ ನಗರದ ವಿ.ಪಿ ಬಡಾವಣೆಯ ಓರ್ವ ವ್ಯಕ್ತಿ ಹಾಗೂ ಗಾರೇಹಟ್ಟಿಯ ಮೂರು ಜನರು ಎಂದು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.