ETV Bharat / state

ಕಾರು ತೊಳೆಯುವಾಗ ಕಾಲು ಜಾರಿ ಕಾಲುವೆಗೆ ಬಿದ್ದು ಯುವಕ ಸಾವು - ಭದ್ರಾ ಕಾಲುವೆ ಸುದ್ದಿ

ಕಾರು ತೊಳೆಯಲು ಕಾಲುವೆ ಬಳಿ ಬಂದಿದ್ದ ವಿಶ್ವಾಸ್ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಈಜು ಬಾರದ ಹಿನ್ನೆಲೆ ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟಿದ್ದಾನೆ. ಮನೆಗೆ ಬೆಳಕಾಗಬೇಕಿದ್ದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು..

youth-dies-after-falling-into-a-canal-while-washing-a-car
ಕಾರು ತೊಳೆಯುವಾಗ ಕಾಲು ಜಾರಿ ಕಾಲುವೆಗೆ ಬಿದ್ದು ಯುವಕ ಸಾವು
author img

By

Published : Nov 14, 2020, 2:06 PM IST

ಚಿಕ್ಕಮಗಳೂರು: ಕಾರು ತೊಳೆಯಲು ಕಾಲುವೆಗೆ ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಇಲ್ಲಿನ ದೋರನಾಳ ಸಮೀಪದ ಭದ್ರಾ ಕಾಲುವೆಯಲ್ಲಿ ನಡೆದಿದೆ. ತರೀಕೆರೆ ಕ್ಯಾಂಪ್ ನಿವಾಸಿ ವಿಶ್ವಾಸ್​ (18) ಮೃತ ದುರ್ದೈವಿಯಾಗಿದ್ದು, ತರೀಕೆರೆ ಪಟ್ಟಣದ ಮೆಡಿಕಲ್ ಶಾಪ್​​​ನಲ್ಲಿ ಕೆಲಸ ಮಾಡುತ್ತಿದ್ದ.

ಕಾರು ತೊಳೆಯುವಾಗ ಕಾಲು ಜಾರಿ ಕಾಲುವೆಗೆ ಬಿದ್ದು ಯುವಕ ಸಾವು

ಘಟನೆ ನಡೆದಿದ್ದು ಹೇಗೆ..? : ಕಾರು ತೊಳೆಯಲು ಕಾಲುವೆ ಬಳಿ ಬಂದಿದ್ದ ವಿಶ್ವಾಸ್ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಈಜು ಬಾರದ ಹಿನ್ನೆಲೆ ಮುಳುಗಿದ್ದ ವಿಶ್ವಾಸ್ ಸಹಾಯಕ್ಕಾಗಿ ಕೂಗಿಕೊಂಡಿದ್ದಾನೆ. ಕೂಗಾಟದ ಸದ್ದು ಕೇಳಿ ಹತ್ತಿರದಲ್ಲೇ ಇದ್ದ ಸ್ನೇಹಿತರು ಆತನ ರಕ್ಷಣೆಗೆ ಧಾವಿಸಿದ್ದಾರೆ. ಬಳಿಕ ವಿಶ್ವಾಸ್​​ನನ್ನು ಉಳಿಸಲು ಬಟ್ಟೆಗಳಿಗೆ ಗಂಟು ಹಾಕಿ ನೀರಿಗೆ ಎಸೆದಿದ್ದಾರೆ.

ಆದರೆ, ಅಷ್ಟರಲ್ಲಾಗಲೇ ವಿಶ್ವಾಸ್ ನೀರಿನಲ್ಲಿ ಮುಳುಗಿ ಅಸುನೀಗಿದ್ದ. ಇನ್ನು ವಿಶ್ವಾಸ್ ಮೃತದೇಹ ಮನೆಗೆ ತರುತ್ತಲೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಎದೆಯತ್ತರಕ್ಕೆ ಬೆಳೆದು ಕುಟುಂಬದ ಜವಾಬ್ದಾರಿ ವಹಿಸಿಕೊಂಡಿದ್ದ ಪುತ್ರನ ಸಾವು ಬರಸಿಡಿಲಂತೆ ಅಪ್ಪಳಿಸಿತ್ತು.

ಇದಲ್ಲದೆ ಈ ಕಾಲುವೆಯಲ್ಲಿ ಕಳೆದ ಮೂರು ತಿಂಗಳಿನಿಂದ ಐವರು ಸಾವನಪ್ಪಿದ್ದು, ಎಚ್ಚರಿಕೆ ಫಲಕವನ್ನೂ ಅಳವಡಿಸದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.