ETV Bharat / state

ಕಾರು ಆಫರ್‌.. ಆನ್‌ಲೈನ್‌ ಗೇಮ್‌: ಬರೋಬ್ಬರಿ 29 ಲಕ್ಷ ರೂ ಕಳೆದುಕೊಂಡ ಕಾಫಿನಾಡಿನ ಯುವಕ - ಆನ್‌ಲೈನ್‌ ಗೇಮ್‌

Online Fraud: ಪೆಟ್ರೋಲ್ ಬಂಕ್​​​ನಲ್ಲಿ ಕೆಲಸ ಮಾಡುವ ಚಿಕ್ಕಮಗಳೂರಿನ ಯುವಕನೊಬ್ಬ ಆನ್​​ಲೈನ್​​ ಕಾಲ್ ಹಾಗೂ ಕ್ಯಾಸಿನೋ ಆಡಿ ಬರೋಬ್ಬರಿ 29 ಲಕ್ಷ ಹಣ ಕಳೆದುಕೊಂಡಿದ್ದಾನೆ.

chikkamagaluru
ಚಿಕ್ಕಮಗಳೂರು
author img

By ETV Bharat Karnataka Team

Published : Aug 22, 2023, 10:20 AM IST

ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಚಿಕ್ಕಮಗಳೂರು ಎಸ್​ಪಿ ಉಮಾ ಪ್ರಶಾಂತ್

ಚಿಕ್ಕಮಗಳೂರು: ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುವ ಯುವಕನೊಬ್ಬ ಆನ್​​ಲೈನ್ ಕಾಲ್ ಹಾಗೂ ಕ್ಯಾಸಿನೋ ಆಡಿ ಬರೋಬ್ಬರಿ 29 ಲಕ್ಷ ರೂ. ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಹೊರಹೊಲಯದಲ್ಲಿರುವ ಪೆಟ್ರೋಲ್ ಬಂಕ್‌ವೊಂದರಲ್ಲಿ ಕೆಲಸ ಮಾಡುವ ಯುವಕ ವಂಚನೆಗೊಳಗಾಗಿದ್ದಾನೆ. ಈ ಬಗ್ಗೆ ಚಿಕ್ಕಮಗಳೂರು ಎಸ್​ಪಿ ಉಮಾ ಪ್ರಶಾಂತ್ ಮಾಧ್ಯಮಗಳಿಗೆ ಪ್ರತಿಕ್ರಿಸಿದ್ದಾರೆ.

ಪ್ರಕರಣದ ವಿವರ: ಯುವಕನಿಗೆ ಕರೆ ಮಾಡಿದ್ದ ಯುವತಿ ಲಕ್ಕಿ ಡಿಪ್‌ನಲ್ಲಿ ನಿಮ್ಮ ನಂಬರ್ ಡ್ರಾ ಆಗಿದೆ. 25 ಲಕ್ಷದ ಎಸ್​ಯುವಿ 500 ಕಾರು ನಿಮಗೆ ಕೇವಲ 11 ಲಕ್ಷ ರೂ.ಗೆ ಸಿಗಲಿದೆ ಎಂದು ಮಾತಿನಲ್ಲೇ ನಂಬಿಸಿದ್ದಾಳೆ. ವಂಚಕಿಯ ಮಾತಿಗೆ ಮರುಳಾದ ಯುವಕ ಪೆಟ್ರೋಲ್ ಬಂಕ್ ಹಣದಲ್ಲಿ 11 ಲಕ್ಷ ರೂ. ಆನ್‌ಲೈನ್‌ ಮೂಲಕ ವರ್ಗಾಯಿಸಿದ್ದಾನೆ. ಕೆಲ ದಿನಗಳ ಬಳಿಕ ಯುವಕನಿಗೆ ತಾನು ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಕಾರಿನಲ್ಲಿ ಹೋದ 11 ಲಕ್ಷ ರೂಪಾಯಿ ದುಡಿಯಲು ಹೋಗಿ ಆನ್‌ಲೈನ್‌ ಗೇಮ್ ಕ್ಯಾಸಿನೋ ಆಡಿ ಮತ್ತೆ 18 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ.

ಇದನ್ನೂ ಓದಿ: ಸೈಬರ್​ ಅಪರಾಧಿಗಳ ಕೈಗೆ ಸಿಲುಕಿ ನರಳಾಡಿದ ವೃದ್ಧ.. 17 ಲಕ್ಷ ರೂಪಾಯಿ ಪಂಗನಾಮ ಹಾಕಿದ ವಂಚಕರು!

ಇದೀಗ ಆ ಹುಡುಗಿ ಫೋನ್ ಮಾಡಿದ್ದ ನಂಬರ್‌ಗೆ ಎಷ್ಟೇ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪೆಟ್ರೋಲ್‌ ಬಂಕ್‌ನ ದುಡ್ಡು ಬಳಸಿ ಕಾರಿನ ದಾರಿ ಕಾಯುತ್ತಿದ್ದ ಯುವಕ ಕಂಗಾಲಾಗಿದ್ದಾನೆ. ಅತ್ತ ಕಾರು ಇಲ್ಲ. ಇತ್ತ ಹಣವೂ ಇಲ್ಲದೇ ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ. ಕಾರಿನಲ್ಲಿ ಹೋದ 11 ಲಕ್ಷ ದುಡಿಯಲು ಆನ್‌ಲೈನ್‌ ಗೇಮ್‌ ಮೊರೆ ಹೋಗಿದ್ದಾನೆ. ಅಲ್ಲಿಯೂ ಆತನಿಗೆ ಅದೃಷ್ಟ ಕೈಕೊಟ್ಟಿದೆ. ಕಾರು ಹಾಗೂ ಕ್ಯಾಸಿನೋದಿಂದ ಬರೋಬ್ಬರಿ 29 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾನೆ.

ಇದನ್ನೂ ಓದಿ: Bengaluru crime: ವೃದ್ಧೆಗೆ 3.5 ಕೋಟಿ ರೂಪಾಯಿ ವಂಚನೆ; ನಾಲ್ವರ ಬಂಧನ

ನನಗೆ ಕಾರು ಕೊಡುತ್ತೇವೆ ಎಂದು ಲಕ್ಷಾಂತರ ರೂ. ಮೋಸ ಮಾಡಿದ್ದಾರೆ ಎಂದು ಚಿಕ್ಕಮಗಳೂರು ನಗರದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಅಲ್ಲಿ ಪೊಲೀಸರು ತನಿಖೆ ವೇಳೆ ಪ್ರಕರಣದ ಬಗ್ಗೆ ಬಿಡಿಸಿ ಕೇಳಿದಾಗ ಎಲ್ಲೆಲ್ಲಿ ಎಷ್ಟೆಷ್ಟು ಕಳೆದುಕೊಂಡಿದ್ದಾನೆ ಎನ್ನುವುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಅತ್ತ ಸಂಬಂಧಿಕರಿಗೆ ಹುಷಾರಿಲ್ಲ ಎಂದು ಹೋಗಿದ್ದ ಬಂಕ್ ಮಾಲೀಕ ವಾಪಸ್ ಬಂದಾಗ ಪೆಟ್ರೋಲ್ ಬಂಕ್ ಸ್ಥಿತಿ ನೋಡಿ ಕಂಗಾಲಾಗಿದ್ದಾರೆ.

ಈ ಬಗ್ಗೆ ಚಿಕ್ಕಮಗಳೂರು ಎಸ್​ಪಿ ಉಮಾ ಪ್ರಶಾಂತ್ ಮಾಧ್ಯಮಗಳಿಗೆ ಪ್ರತಿಕ್ರಿಸಿದ್ದಾರೆ. ಯುವಕ ಆನ್​​ಲೈನ್ ಕಾಲ್ ಹಾಗೂ ಕ್ಯಾಸಿನೋ ಆಡಿ ಹಣ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ. ಪ್ರಕಣದ ಬಗ್ಗೆ ತನಿಖೆ ಮುಂದುವರೆದಿದೆ. ನಾವು ಸೈಬರ್​ ಕ್ರೈಂ ಬಗ್ಗೆ ಜಾಗೃತಿ ಮೂಡಿಸಿದರು ಶಿಕ್ಷಿತರು ಕೂಡ ವಂಚನೆಗೆ ಒಳಗಾಗುತ್ತಿದ್ದಾರೆ. ನಿಮ್ಮ ವೈಯಕ್ತಿಕ ಮಾಹಿತಿ ಅಥವಾ ಪಾಸ್​ವರ್ಡ್ ಹಂಚಿಕೊಳ್ಳಬೇಡಿ. ಅತೆಂಟಿಕ್​ ವೆಬ್​ಸೈಟ್​ ಅಥವಾ ಆ್ಯಪ್​ ಮಾತ್ರ ಬಳಸಿ. ಪ್ರತಿಯೊಬ್ಬರಿಗೂ ತಂತ್ರಜ್ಞಾನ ಅಗತ್ಯ. ಆದರೆ ಅಗತ್ಯ ಅರಿತುಕೊಂಡು ಬಳಸಿ. ಎಲ್ಲಿಯವರೆಗೂ ಮೋಸ ಹೋಗುವವರು ಇರುತ್ತಾರೋ ಅಲ್ಲಿವರೆಗೂ ಮೋಸ ಮಾಡುವವರು ಇರುತ್ತಾರೆ. ಈ ರೀತಿ ಆಫರ್ ನೀಡುವ ಕರೆಗಳ ಬಗ್ಗೆ ಜನ ಎಚ್ಚರದಿಂದಿರಬೇಕು ಎಂದು ಎಸ್​ಪಿ ಉಮಾ ಪ್ರಶಾಂತ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಒಟ್ಟಾರೆ, ಕೊಟ್ಟೋನು ಕೋಡಂಗಿ ಇಸ್ಕಂಡೋನು ವೀರಭದ್ರ ಎಂಬಂತಾಗಿದೆ ಈ ಯುವಕನ ಪಾಡು. ಹೊಸ ಕಾರಿನ ಆಸೆಗೆ ಪೆಟ್ರೋಲ್ ಬಂಕ್‌ನ ಹಣವೆಲ್ಲ ವಂಚಕರ ಪಾಲಾಗಿದೆ.

ಇದನ್ನೂ ಓದಿ: Server Hack: ಅಮೆಜಾನ್ ಕಂಪನಿ ಸರ್ವರ್ ಹ್ಯಾಕ್, ಕೋಟ್ಯಂತರ ಹಣ ವಂಚನೆ; ಓರ್ವನ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.